ತಿರುಮಲ :
ಅಲಿಪಿರಿ ಮತ್ತು ಗರುಡ ಟೋಲ್ ಗೇಟ್‌ಗಳು ಹಾಗೂ ಇನ್ನುಳಿದ ಪ್ರಮುಖ ಸ್ಥಳಗಳಲ್ಲಿ ಐಟಿ, ಖಾತೆಗಳು, ಡೈರಿ ಅಡ್ಮಿನಿಸ್ಟ್ರೇಷನ್ ಮತ್ತುಅತಿಯಾದ ಟ್ರಾಫಿಕ್ ನಿರ್ವಹಣೆ ಸೇರಿದಂತೆ ವಿವಿಧ ಇಲಾಖೆಗಳಿಗೆ AI ಮತ್ತು ಕಸ್ಟಮ್-ಡೆವಲಪ್‌ಮೆಂಟ್ ಸಾಫ್ಟ್‌ವೇರ್‌ಗಳನ್ನು ಆಡಳಿತ ಮಂಡಳಿಯು ಅಳವಡಿಸಿದೆ ಎಂದು ಟಿಟಿಡಿ ಕಾರ್ಯನಿರ್ವಾಹಕ ಅಧಿಕಾರಿ ಜೆ.ಶ್ಯಾಮಲಾ ರಾವ್ ತಿಳಿಸಿದ್ದಾರೆ.
ಈ ಡಿಜಿಟಲ್ ಫೇಸ್‌ಲಿಫ್ಟ್ ಈಗಾಗಲೇ ಸಾಕಷ್ಟು ಅಭಿವೃದ್ಧಿಯನ್ನು ಪರಿಚಯಿಸಿದೆ. ಅನ್ನದಾನಂ ಕ್ಯಾಂಟೀನ್ ವಿಭಾಗದಲ್ಲೂ ಡಿಜಿಟಲ್ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದ್ದು, ಆ ಮೂಲಕ ಭಕ್ತಾದಿಗಳು 1 ರೂ.ಗಳಿಂದ ರೂ 99,999ರವರೆಗಿನ ದೇಣಿಗೆಯನ್ನು ನೀಡಬಹುದು. ಈ ವ್ಯವಸ್ಥೆ ಸ್ಥಾಪನೆಗೊಂಡ ಮೊದಲ ವಾರದಲ್ಲೇ 2 ಲಕ್ಷ ರೂಪಾಯಿಗಳನ್ನು ಸಂಗ್ರಹಿಸಲಾಗಿದೆ. ಹೆಚ್ಚಿನ ದೇಣಿಗೆಗಳು 10ರೂ., 51ರೂ. ಮತ್ತು 101ರೂ. ನಂತಹ ಸಣ್ಣ ಮುಖಬೆಲೆಯದ್ದಾಗಿದ್ದು, ಅತಿ ಹೆಚ್ಚು ದಾಖಲಾದ ದೇಣಿಗೆ ರೂ 1,116 ಎಂದು ತಿಳಿದು ಬಂದಿದೆ.
ಡಿಜಿಟಲ್ ಉಪಕ್ರಮವು ತಿರುಮಲದಾದ್ಯಂತ ಇದೇ ರೀತಿಯ ವ್ಯವಸ್ಥೆಯನ್ನು ತಿರುಪತಿಯಾದ್ಯಂತ ಜಾರಿಗೊಳಿಸಲಾಗಿದ್ದು, ಇವು ದೇವಸ್ಥಾನದಲ್ಲಿ ನಡೆಯುವ ಕಾರ್ಯಕ್ರಮಗಳು, ಸರತಿ ಸಾಲುಗಳು, ತಿಮ್ಮಪ್ಪನ ದರ್ಶನದ ಸಮಯ, ಪ್ರಸಾದ, ಟಾನ್ಸರ್ , ದೇಣಿಗೆ ಸೇವೆಗಳು, ಸಾರಿಗೆ, ಕ್ಯಾಬ್ ಸೇವೆಗಳು ಮತ್ತು RO ನೀರಿನ ಲಭ್ಯತೆಯ ಕುರಿತು ನಿರಂತರವಾಗಿ ಮಾಹಿತಿಯನ್ನು ಒದಗಿಸುತ್ತದೆ. ಆ ಮೂಲಕ ಭಕ್ತರಿಗೆ ದೇವರ ದರ್ಶನದ ವೇಳೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಲಾಗುತ್ತಿದೆ.
ಈ ನೂತನ ತಂತ್ರಜ್ಞಾನದ ಮೂಲಕ ಭಕ್ತಾದಿಗಳು ದರ್ಶನ ಟಿಕೆಟ್ ಮತ್ತು ವಸತಿಗಳನ್ನು ಕಾಯ್ದಿರಿಸಬಹುದು. ಉದಾಹರಣೆಗೆ, ಯಾತ್ರಿಕರು 25 ಲಡ್ಡುಗಳನ್ನು ಖರೀದಿಸಲು ಅನೂಕಲವಿದೆ. ರಶೀದಿಯ ಮೇಲೆ ಗೊತ್ತುಪಡಿಸಿದ ಕೌಂಟರ್‌ಗಳಿಂದ ಅವುಗಳನ್ನು ಸಂಗ್ರಹಿಸಬಹುದು. ಟಿಟಿಡಿ ಈಗಾಗಲೇ ಪ್ರತಿ ವಿಭಾಗವನ್ನು ನಿರ್ವಹಿಸಲು AI ಮತ್ತು ಪರಿಣತಿ ಸಾಫ್ಟ್‌ವೇರ್ ತಜ್ಞರನ್ನು ನೇಮಿಸಿಕೊಳ್ಳಲು ನಿರ್ಧರಿಸಿದೆ.
ಹಿರಿಯ ಐಟಿ ಉದ್ಯೋಗಿಯೊಬ್ಬರು ಮಾತನಾಡಿ ” ಈ ಡಿಜಿಟಲ್ ತೊಡಗಿಸಿಕೊಳ್ಳುವಿಕೆಯ ಪ್ರಕ್ರಿಯೆಯು ಹೆಚ್ಚುತ್ತಿರುವ ಭಕ್ತಾದಿಗಳನ್ನು ಅತ್ಯಂತ ವೇಗವಾಗಿ ಟ್ರ್ಯಾಕ್ ಮಾಡಲು ಟಿಟಿಡಿ ಗೆ ಸಹಕಾರ ನೀಡುತ್ತದೆ” ಎಂದಿದ್ದಾರೆ.