ರಾಜ್ಯ ಸಭೆಯಿಂದ ಟಿಎಂಸಿ ಸಂಸದ ಅಮಾನತ್ತು…!

ನವದೆಹಲಿ: 

    ತೃಣಮೂಲ ಸಂಸದ ಡೆರೆಕ್ ಒ ಬ್ರೇನ್ ಅವರನ್ನು ರಾಜ್ಯಸಭೆಯಿಂದ ಅಮಾನತುಗೊಳಿಸಲಾಗಿದೆ. ಇಂದು ಗುರುವಾರ ಬೆಳಗ್ಗೆ ಕಲಾಪ ಆರಂಭವಾಗುತ್ತಿದ್ದಂತೆ ನಿನ್ನೆ ಲೋಕಸಭೆಯಲ್ಲಿನ ಪ್ರಮುಖ ಭದ್ರತಾ ಲೋಪದ ಬಗ್ಗೆ ಸದಸ್ಯರು ಪ್ರಸ್ತಾಪಿಸಿದರು. ಈ ವೇಳೆ ತೀವ್ರ ಗದ್ದಲ, ಕೋಲಾಹಲವುಂಟಾಯಿತು.

    ಸಂಸದ ಡೆರೆಕ್ ಒಬ್ರೇನ್ ಅವರನ್ನು ಅಶಿಸ್ತಿನ ವರ್ತನೆ ಹಿನ್ನೆಲೆಯಲ್ಲಿ ರಾಜ್ಯಸಭೆಯಿಂದ ಅಧಿವೇಶನ ಮುಗಿಯುವವರೆಗೆ ಅಮಾನತುಗೊಳಿಸಲಾಗಿದೆ. ರಾಜ್ಯಸಭಾ ಅಧಿವೇಶನದ ಒಂದು ಗಂಟೆಯ ನಂತರ, ವಿರೋಧ ಪಕ್ಷದ ಸಂಸದರು ಸದನದ ಬಾವಿಗೆ ಪ್ರವೇಶಿಸಿ, ಸಂಸತ್ತಿನ ಭದ್ರತಾ ಉಲ್ಲಂಘನೆಯ ಬಗ್ಗೆ ಚರ್ಚೆಗೆ ಒತ್ತಾಯಿಸಿದರು. ಈ ಉದ್ದೇಶಕ್ಕಾಗಿ ದಿನದ ಸಾಮಾನ್ಯ ಕಲಾಪವನ್ನು ಅಮಾನತುಗೊಳಿಸುವಂತೆ ಅವರು 28 ನೋಟಿಸ್‌ಗಳನ್ನು ಸಲ್ಲಿಸಿದರು.

   ರಾಜ್ಯಸಭಾ ಸದಸ್ಯ ಓ’ಬ್ರೇನ್ ಘಟನೆಯ ಬಗ್ಗೆ ಚರ್ಚೆಗೆ ಒತ್ತಾಯಿಸಿದ್ದರು. ಡೆರೆಕ್ ಒ’ಬ್ರಿಯಾನ್ ಅವರು ಸದನವನ್ನು ತಕ್ಷಣವೇ ತೊರೆಯಲು ಸಭಾಪತಿಗಳು ಸೂಚಿಸಿದರು. ತಾವು ಸಭಾಪತಿಗಳ ಮಾತನ್ನು ಪಾಲಿಸುವುದಿಲ್ಲ ಎಂದರು. ಡೆರೆಕ್ ಒ’ಬ್ರಿಯಾನ್ ಅವರು ನಿಯಮಗಳನ್ನು ಗೌರವಿಸುವುದಿಲ್ಲ ಎಂದು ಹೇಳಿದ್ದಾರೆ. ಇದು ಗಂಭೀರ ದುರ್ನಡತೆಯಾಗಿದ್ದು, ನಾಚಿಕೆಗೇಡಿನ ಸಂಗತಿಯಾಗಿದೆ. ಘಟನೆ ಎಂದು ರಾಜ್ಯಸಭಾ ಸಭಾಪತಿ ಜಗದೀಪ್ ಧನ್ ಕರ್ ಅವರು ತೃಣಮೂಲ ನಾಯಕನನ್ನು “ಅಶಿಸ್ತಿನ ನಡವಳಿಕೆ” ಕಾರಣ ನೀಡಿ ಸದನದಿಂದ ಹೊರನಡೆಯುವಂತೆ ಸೂಚಿಸಿ ಅಮಾನತು ಮಾಡಿದರು.

Recent Articles

spot_img

Related Stories

Share via
Copy link
Powered by Social Snap