ಬೆಂಗಳೂರು:
ಪ್ರತಿಷ್ಠಿತ ಕರ್ನಾಟಕ ರಾಜ್ಯ ಚೆಸ್ ಅಸೋಸಿಯೇಷನ್ ರಾಜ್ಯಾಧ್ಯಕ್ಷ ರಾಗಿ ನ್ಯೂ ತುಮಕೂರು ಚೆಸ್ ಅಸೋಸಿಯೇಷನ್ ಅಧ್ಯಕ್ಷ ರೂ ಆಗಿರುವ ಟಿ. ಎನ್. ಮಧುಕರ್ ಅವಿರೋಧ ಆಯ್ಕೆ ಯಾಗಿದ್ದಾರೆ.
ಬೆಂಗಳೂರಿನ ಕಾಸಿಯಾ ಸಭಾಂಗಣದಲ್ಲಿ ಜರುಗಿದ ರಾಜ್ಯ ಚೆಸ್ ಅಸೋಸಿಯೇಷನ್ ವಾರ್ಷಿಕ ಮಹಾಸಭೆ ಹಾಗೂ 2024-27ನೇ ಸಾಲಿನ ನೂತನ ಕಾರ್ಯ ಕಾರಿ ಮಂಡಳಿಗೆ ಜರುಗಿದ್ದ ಚುನಾವಣೆಯಲ್ಲಿ ರಾಜ್ಯ ಉಪಾಧ್ಯಕ್ಷ ರಾಗಿದ್ದ ಟಿ. ಎನ್. ಮಧುಕರ್ ಅವರು ಅಧ್ಯಕ್ಷ ಸ್ಥಾನಕ್ಕೆ ಸದಸ್ಯರು ಅವಿರೋಧ ಆಯ್ಕೆಮಾಡಿದರು ಎಂದು ಚುನಾವಣಾಧಿಕಾರಿ ಆರ್. ಪದ್ಮನಾಭ್ ಪ್ರಕಟಿಸಿದ್ದಾರೆ.
ರಾಜ್ಯ ಕಾರ್ಯ ದರ್ಶಿಯಾಗಿ ಕರ್ನಾಟಕದ ಮೊದಲ ಚೆಸ್ ಗ್ರ್ಯಾಂಡ್ ಮಾಸ್ಟರ್ ತೇಜ್ ಕುಮಾರ್, ಖಜಾಂಚಿಯಾಗಿ ಬಿ. ಎಚ್. ವಸಂತ್ ಅವಿರೋಧವಾಗಿ ಆಯ್ಕೆ ಯಾಗಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ರಾಮನಗರದ ಎಂ. ರಾಜು, ಬೆಂಗಳೂರಿನ ಸೌಮ್ಯ ಎಂ. ವಿ., ಧಾರವಾಡದ ಕೆ. ವಿ. ಶ್ರೀ ಪಾದ್, ಮೈಸೂರಿನ ಎಸ್. ಮೂರ್ತಿ, ಚಿಕ್ಕ ಮಗಳೂರಿನ ಎಂ. ಜೆ. ಗಿರೀಶ್, ದಕ್ಷಿಣ ಕನ್ನಡ ದ ರಮೇಶ್ ಕೋಟೆ ಆಯ್ಕೆ ಯಾದರು. ಜಂಟಿ ಕಾರ್ಯದರ್ಶಿ ಗಳ ಸ್ಥಾನಕ್ಕೆ ಅವಿರೋಧ ಆಯ್ಕೆಯಾಗಿದ್ದು, ಹಾಸನದ ಚೇತನ್, ಮಂಡ್ಯ ದ ಎಸ್. ಸಿದ್ದಯ್ಯ, ಶಿವಮೊಗ್ಗ ದ ಪಿ. ಎಸ್. ಸಚಿನ್, ಚಿಕ್ಕ ಬಳ್ಳಾಪುರದ ಎಂ. ಎಚ್. ಸುರೇಶ್ ಬಾಬು, ಉತ್ತರ ಕನ್ನಡ ದ ನವೀನ್ ಹೆಗಡೆ ಹಾಗೂ ಚಾಮರಾಜನಗರ ದ ಜೆ. ಸುರೇಶ್ ಆಯ್ಕೆ ಯಾಗಿದ್ದಾರೆ.
ರಾಜ್ಯ ಚೆಸ್ ಅಸೋಸಿಯೇಷನ್ ನ ಪ್ರಧಾನ ಪೋಷಕರಾಗಿ ಜೇವರ್ಗಿ ಶಾಸಕರೂ ಆದ ಶಾಸಕರ ಕಪ್ ಪುರಸ್ಕೃತ ರಾದ ಅಜಯ್ ಧರ್ಮಸಿಂಗ್ ಅವರನ್ನು ಆಯ್ಕೆ ಮಾಡಲಾಗಿದ್ದು, ಸಂಸ್ಥೆಯ ರಚನಾತ್ಮಕ ಕಾರ್ಯ ಚಟುವಟಿಕೆ ಗಳಿಗೆ ಸದಾ ಸಹಕಾರ ನೀಡುವುದಾಗಿ ಘೋಷಿಸಿ ನೂತನ ಅಧ್ಯಕ್ಷ ರು ಹಾಗೂ ಪದಾಧಿಕಾರಿಗಳಿಗೆ ಇದೇ ವೇಳೆ ಶುಭಕೋರಿದ್ದಾರೆ.
ಅಸೋಸಿಯೇಷನ್ ಪೋಷಕರಾಗಿ ಚೆಸ್ ಸಂಸ್ಥೆ ಹಿರಿಯರಾದ ಡಿ. ಪಿ. ಅನಂತ್ ಅರವಿಂದ್ ಶಾಸ್ತ್ರಿ ಹಾಗೂ ಮಂಜುನಾಥ್ ಜೈನ್ ಅವರನ್ನು ಆಯ್ಕೆ ಮಾಡಲಾಗಿದೆ.