ಇಂದು ಚಂದ್ರ ಬಾಬು ನಾಯ್ಡು , ಪವನ್‌ ಕಲ್ಯಾಣ್‌ ಪ್ರಮಾಣ ವಚನ ….!

ವಿಜಯವಾಡ: 

    ಆಂಧ್ರ ಪ್ರದೇಶದ ವಿಜಯವಾಡದ ಹೊರವಲಯದಲ್ಲಿರುವ ಕೇಸರಪಲ್ಲಿಯಲ್ಲಿ ನಡೆಯಲಿರುವ ಭವ್ಯ ಸಮಾರಂಭದಲ್ಲಿ ಇಂದು ಬುಧವಾರ ಬೆಳಗ್ಗೆ 11.27 ಕ್ಕೆ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ ಟಿಡಿಪಿ ಮುಖ್ಯಸ್ಥ ಎನ್ ಚಂದ್ರಬಾಬು ನಾಯ್ಡು ಪ್ರಮಾಣವಚನ ಸ್ವೀಕರಿಸಲಿದ್ದಾರೆ.

    ನಿನ್ನೆ ರಾಜ್ಯಪಾಲ ಅಬ್ದುಲ್ ನಜೀರ್ ಚಂದ್ರಬಾಬು ನಾಯ್ಡು ಅವರಿಗೆ ಸರ್ಕಾರ ರಚನೆಗೆ ಆಹ್ವಾನ ನೀಡಿದರು. ಈ ಹಿಂದೆ, ಟಿಡಿಪಿ ರಾಜ್ಯ ಅಧ್ಯಕ್ಷ ಮತ್ತು ತೆಕ್ಕಲಿ ಶಾಸಕ ಕೆ ಅಟ್ಚನ್ನೈಡು, ಬಿಜೆಪಿ ಆಂಧ್ರ ಪ್ರದೇಶ ಅಧ್ಯಕ್ಷ ಮತ್ತು ರಾಜಮಂಡ್ರಿ ಸಂಸದೆ ಡಿ ಪುರಂದೇಶ್ವರಿ ಮತ್ತು ಜನ ಸೇನಾ ರಾಜಕೀಯ ವ್ಯವಹಾರಗಳ ಸಮಿತಿ (PAC) ಅಧ್ಯಕ್ಷ ಮತ್ತು ತೆನಾಲಿ ಶಾಸಕ ನಾಡೆಂಡ್ಲಾ ಮನೋಹರ್ ಅವರು ರಾಜ್ಯಪಾಲರನ್ನು ಭೇಡಿ ಮಾಡಿ ಚಂದ್ರಬಾಬು ನಾಯ್ಡು ಅವರನ್ನು ಅವಿರೋಧವಾಗಿ ಎನ್ ಡಿಎ ಮೈತ್ರಿಕೂಟದಲ್ಲಿ ಆಂಧ್ರ ಮುಖ್ಯಮಂತ್ರಿಯಾಗಿ ಅವಿರೋಧವಾಗಿ ಆಯ್ಕೆ ಮಾಡಲಾದಿದೆ ಎಂದು ತಿಳಿಸಿದ್ದರು.

    ಇಂದು ಬಿಡುಗಡೆಯಾದ 24 ಸಚಿವರ ಪಟ್ಟಿಯಲ್ಲಿ ಜನಸೇನಾ ಪಾರ್ಟಿಯ ಮೂವರು ಮತ್ತು ಬಿಜೆಪಿಯ ಒಬ್ಬರು ಸೇರಿದ್ದಾರೆ. ಉಳಿದವರು ತೆಲುಗು ದೇಶಂ ಪಕ್ಷಕ್ಕೆ (TDP) ಸೇರಿದವರು. ಚಂದ್ರಬಾಬು ನಾಯ್ಡು ಅವರ ಪುತ್ರ ಮತ್ತು ಟಿಡಿಪಿ ಪ್ರಧಾನ ಕಾರ್ಯದರ್ಶಿ ನಾರಾ ಲೋಕೇಶ್, ಟಿಡಿಪಿಯ ಆಂಧ್ರಪ್ರದೇಶ ಘಟಕದ ಅಧ್ಯಕ್ಷ ಕೆ.ಅಚ್ಚಣ್ಣ ನಾಯ್ಡು ಮತ್ತು ಜನಸೇನಾ ಪಾರ್ಟಿಯ ರಾಜಕೀಯ ವ್ಯವಹಾರಗಳ ಸಮಿತಿ ಅಧ್ಯಕ್ಷ ನಾದೆಂಡ್ಲಾ ಮನೋಹರ್ ಅವರು ಸಂಪುಟದಲ್ಲಿ ಸೇರಿದ್ದಾರೆ ಎಂದು ವರದಿಗಳು ತಿಳಿಸಿವೆ.

    ಇಂದು ನಡೆಯುವ ಪ್ರಮಾಣ ವಚನ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಜೆಪಿ ನಡ್ಡಾ ಮತ್ತು ಬಂಡಿ ಸಂಜಯ್ ಕುಮಾರ್ ಸೇರಿದಂತೆ ಕೇಂದ್ಲ ಕ್ಯಾಬಿನೆಟ್ ನ ಹಲವಾರು ಮಂತ್ರಿಗಳು ಖ್ಯಾತ ನಟರಾದ ಚಿರಂಜೀವಿ ಮತ್ತು ರಾಜನಿಕಾಂತ್ ಮೊದಲಾದವರು ಭಾಗವಹಿಸಲಿದ್ದಾರೆ.

     ಇಂದು ನಡೆಯಲಿರುವ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ವ್ಯಾಪಕ ಭದ್ರತೆ ಕಲ್ಪಿಸಲಾಗಿದೆ. ಮೂರು ಪಕ್ಷಗಳ ಒಂದಕ್ಕಿಂತ ಹೆಚ್ಚು ಲಕ್ಷ ಕಾರ್ಯಕರ್ತರು ಮತ್ತು ಕೇಡರ್ ಈ ಘಟನೆಗೆ ಸಾಕ್ಷಿಯಾಗುವ ಸಾಧ್ಯತೆಯಿದೆ. ಚಂದ್ರಬಾಬು ನಾಯ್ಡು ಜೊತೆಗೆ ಇಡೀ ಸಂಪುಟ ಸದಸ್ಯರು ಇಂದೇ ಪ್ರಮಾಣವಚನ ಸ್ವೀಕರಿಸಬಹುದು ಎಂದು ಹೇಳಲಾಗುತ್ತಿದೆ.

    ಪವನ್ ಕಲ್ಯಾಣ್‌ಗೆ ಉಪ ಮುಖ್ಯಮಂತ್ರಿ ಹುದ್ದೆ ನೀಡಲಾಗುತ್ತಿದೆ. ನಿನ್ನೆ ನಡೆದ ಎನ್‌ಡಿಎ ಶಾಸಕರ ಸಭೆಯಲ್ಲಿ ಮಾತನಾಡಿದ ನಾಯ್ಡು, ಪವನ್ ಕಲ್ಯಾಣ್ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಾಗಿದೆ ಎಂದು ಸುಳಿವು ನೀಡಿದ್ದರು. ಈ ಬಗ್ಗೆ ಇಂದು ಬೆಳಗ್ಗೆ ಪ್ರಕಟಣೆ ಹೊರಬೀಳಲಿದೆ.

    ಹಿರಿಯ ಬಿಜೆಪಿ ನಾಯಕ ಮತ್ತು ಕೇಂದ್ರ ಸಚಿವ ಅಮಿತ್ ಶಾ ಮಂಗಳವಾರ ರಾತ್ರಿ ವಿಜಯವಾಡಕ್ಕೆ ಆಗಮಿಸಿ ಕ್ಯಾಬಿನೆಟ್ ಬೆರ್ತ್ ಹಂಚಿಕೆಯ ಕುರಿತು ನಾಯ್ಡು ಅವರೊಂದಿಗೆ ಚರ್ಚೆ ನಡೆಸಿದರು.

    ಅಧಿಕಾರ ವಹಿಸಿಕೊಂಡ ಕೂಡಲೇ, ಮುಖ್ಯಮಂತ್ರಿ ರಾಜ್ಯದಾದ್ಯಂತ ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಲು ಜಿಲ್ಲಾ ಆಯ್ಕೆ ಸಮಿತಿ ಪರೀಕ್ಷೆಯನ್ನು ನಡೆಸಲು ಕಡತಕ್ಕೆ ಸಹಿ ಹಾಕುವ ಸಾಧ್ಯತೆಯಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link