ಇಂದು ‘SSLC ಪರೀಕ್ಷೆ’ಯ ಕೀ ಉತ್ತರ ಪ್ರಕಟ: ವೀಕ್ಷಿಸಲು ಈ ವಿಧಾನ ಅನುಸರಿಸಿ

ಬೆಂಗಳೂರು:

ರಾಜ್ಯದಲ್ಲಿ ಮಾರ್ಚ್ 28ರಿದಂ ಆರಂಭಗೊಂಡಿದ್ದಂತ ಎಸ್ ಎಸ್ ಎಲ್ ಸಿ ಪರೀಕ್ಷೆ  ಏಪ್ರಿಲ್ 11ರ ನಿನ್ನೆ ಸುಸೂತ್ರವಾಗಿ ಅಂತ್ಯಗೊಂಡಿದೆ. ಈ ಬೆನ್ನಲ್ಲೇ, ಇಂದು ಪರೀಕ್ಷೆಗೆ ಸಂಬಂಧಪಟ್ಟಂತೆ ಎಲ್ಲಾ ವಿಷಯಗಳ ಕೀ ಉತ್ತರವನ್ನು  ಪ್ರಕಟಿಸಲಾಗುತ್ತಿದೆ.

ವಿದ್ಯಾರ್ಥಿಗಳು ಇಂದು ಎಸ್‌ಎಸ್‌ಎಲ್ಸಿ ಮಂಡಳಿಯ ವೆಬ್ ಸೈಟ್ ನಲ್ಲಿ  ಪ್ರಕಟಿಸುವಂತ ಕೀ ಉತ್ತರಗಳಿಗೆ, ಮೂರು ದಿನಗಳಲ್ಲಿ ಆಕ್ಷೇಪಣೆ ಇದ್ದರೆ ಸಲ್ಲಿಸಲು ಅವಕಾಶವನ್ನು ಕಲ್ಪಿಸಲಾಗುತ್ತಿದೆ.

‘ಮುರುಘಾ ಶರಣರ ಜನ್ಮದಿನ’ ‘ಸಮಾನತಾ ದಿನ’ವಾಗಿ ಆಚರಣೆ – ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ

ಈ ಕುರಿತಂತೆ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ನಿರ್ದೇಶಕರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ವಿದ್ಯಾರ್ಥಿಗಳು ಇಂದು ಪ್ರಕಟಿಸುವಂತ ಕೀ ಉತ್ತರಕ್ಕೆ ತಮ್ಮ ಆಕ್ಷೇಪವನ್ನು ಮಂಡಳಿಯ ಜಾಲತಾಣಕ್ಕೆ ಬೇಟಿ ನೀಡಬೇಕು. ಲಾಗಿನ್ ಆಗಲು ವಿದ್ಯಾರ್ಥಿಗಳು ತಮ್ಮ ನೋಂದಣಿ ಸಂಖ್ಯೆಯನ್ನು ನಮೂದಿಸಬೇಕು. ಆ ನಂತ್ರ ಬರೋ ಓಟಿಪಿ ಬಳಸಿ, ಲಾಗಿನ್ ಆಗಿ, ಕೀ ಉತ್ತರಕ್ಕೆ ತಮ್ಮ ಆಕ್ಷೇಪಣೆಯನ್ನು ಸಲ್ಲಿಸಬಹುದಾಗಿದೆ ಎಂದು ತಿಳಿಸಿದ್ದಾರೆ.

CSK vs RCB, IPL 2022: ಬೆಂಗಳೂರು vs ಚೆನ್ನೈ: ಐಪಿಎಲ್​​ನಲ್ಲಿಂದು ರಣ ರೋಚಕ ಕದನ

ಇನ್ನೂ ನಿನ್ನೆ ಮುಕ್ತಾಯಗೊಂಡಂತ ಎಸ್ ಎಸ್ ಎಲ್ ಸಿ ಪರೀಕ್ಷೆಯ ಉತ್ತರ ಪತ್ರಿಕೆಯ ಮೌಲ್ಯ ಮಾಪನವನ್ನು ಏಪ್ರಿಲ್ ಕೊನೆಯ ವಾರದಿಂದ ಆರಂಭಗೊಳ್ಳಲಿದೆ. ಮೇ 2ನೇ ವಾರದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷಾ ಫಲಿತಾಂಶ ಪ್ರಕಟಿಸೋ ಉದ್ದೇಶವಿದೆ ಎಂದು ತಿಳಿಸಿದೆ.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap