ಬೆಂಗಳೂರು
ಕೆಲವು ದಿನಗಳಿಂದ ಏರಿತವಾಗುತ್ತಿದ್ದ ಚಿನ್ನದ ದರದಲ್ಲಿ ಸೋಮವಾರ (ಡಿಸೆಂಬರ್ 1) ಭಾರಿ ಏರಿಕೆಯಾಗಿದೆ . ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆಯಲ್ಲಿ 60 ರೂ. ಮತ್ತು 24 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆಯಲ್ಲಿ 66 ರೂ. ಹೆಚ್ಚಳ ಕಂಡುಬಂದಿದೆ. ಆ ಮೂಲಕ 22 ಮತ್ತು 24 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ ಕ್ರಮವಾಗಿ 11,960 ರೂ. ಮತ್ತು 13,048 ರೂ.ಗೆ ತಲುಪಿದೆ. ಇನ್ನು 22 ಕ್ಯಾರಟ್‌ನ 8 ಗ್ರಾಂ ಚಿನ್ನದ ಬೆಲೆ 95,680 ರೂ. ಆಗಿದ್ದರೆ, 10 ಗ್ರಾಂಗೆ ನೀವು 1,19,600 ರೂ. ಮತ್ತು ಇನ್ನು 100 ಗ್ರಾಂ ಚಿನ್ನಕ್ಕೆ 11,96,000 ರೂ. ಪಾವತಿಸಬೇಕು. 24 ಕ್ಯಾರಟ್‌ನ 8 ಗ್ರಾಂ ಚಿನ್ನಕ್ಕೆ 1,04,384 ರೂ. ಇದ್ದರೆ, 10 ಗ್ರಾಂಗೆ 1,30,480 ರೂ., 100 ಗ್ರಾಂಗೆ ನೀವು 13,04,800 ರೂ. ನೀಡಬೇಕು.
ಇನ್ನು ದೇಶದ ವಿವಿಧ ನಗರಗಳಲ್ಲಿ ಚಿನ್ನದ ದರ ಎಷ್ಟಿದೆ ಎಂದು ನೋಡುವುದಾದರೆ ಚೆನ್ನೈ, ಮುಂಬೈ, ಕೋಲ್ಕತ್ತಾ ಮತ್ತು ಹೈದರಾಬಾದ್‌ನಲ್ಲಿ 22 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ 11,960 ರೂ. ಆಗಿದ್ದರೆ, ದೆಹಲಿಯಲ್ಲಿ 11,975 ರೂ. ಇದೆ. ಚೆನ್ನೈ, ಮುಂಬೈ, ಕೋಲ್ಕತ್ತಾ ಮತ್ತು ಹೈದರಾಬಾದ್‌ನಲ್ಲಿ 24 ಕ್ಯಾರಟ್ 1 ಗ್ರಾಂ ಚಿನ್ನದ ದರ 13,048 ರೂ.ಗೆ ತಲುಪಿದ್ದು, ದೆಹಲಿಯಲ್ಲಿ 13,048 ರೂ. ಆಗಿದೆ.
ಇಂದು ಬೆಂಗಳೂರಿನಲ್ಲಿ ಬೆಳ್ಳಿ ದರದಲ್ಲಿಯೂ ಏರಿಕೆ ಕಂಡು ಬಂದಿದೆ. 1 ಗ್ರಾಂ ಬೆಳ್ಳಿ ದರ 188 ರೂ.ಗೆ ತಲುಪಿದೆ. 8 ಗ್ರಾಂ ಬೆಳ್ಳಿಗೆ 1,504 ರೂ. ಹಾಗೂ ಒಂದು ಕೆಜಿ ಬೆಳ್ಳಿಗೆ ನೀವು 1,88,000 ರೂ. ಪಾವತಿಸಬೇಕು. ದೆಹಲಿ, ಮುಂಬೈ, ಕೋಲ್ಕತ್ತಾ ಮುಂತಾದ ನಗರಗಳಲ್ಲಿ ಇದೇ ದರ ಮುಂದುವರಿದಿದೆ.








