ಟೋಲ್‌ ಶುಲ್ಕ ವಿಚಾರ : ಟೋಲ್‌ ಸಿಬ್ಬಂದಿ ಮೇಲೆ ಗುಂಪಿನಿಂದ ದಾಳಿ

ಮಂಗಳೂರು:

    ಟೋಲ್ ಶುಲ್ಕ ವಿಚಾರವಾಗಿ ಮಾತಿನ ಚಕಮಕಿ ನಡೆದು ಕಾರಿನಲ್ಲಿ ತೆರಳುತ್ತಿದ್ದ ಗುಂಪೊಂದು ತಲಪಾಡಿ ಟೋಲ್ ಗೇಟ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿರುವುದಾಗಿ ಪೊಲೀಸರು ಮಂಗಳವಾರ ತಿಳಿಸಿದ್ದಾರೆ. ಭಾನುವಾರ ತಡರಾತ್ರಿ

   ಈ ಘಟನೆ ನಡೆದಿದ್ದು, ಕಾರಿನಲ್ಲಿದ್ದ ಮೂವರು ಟೋಲ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ. ಸಿಸಿಟಿವಿಯಲ್ಲಿ ಇಡೀ ಘಟನೆ ಸೆರೆಯಾಗಿದ್ದು, ಹಲ್ಲೆ ನಡೆಸಿರುವ ಎಲ್ಲಾ ಆರೋಪಿಗಳ ಬಂಧನಕ್ಕೆ ಪ್ರಯತ್ನ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಂಗಳೂರಿನಿಂದ ಕೇರಳದ ಕಡೆಗೆ ತೆರಳುತ್ತಿದ್ದ ಉತ್ತರ ಪ್ರದೇಶ ನೋಂದಣಿಯ ಕಾರಿನಲ್ಲಿದ್ದ ಐವರು, ಟೋಲ್ ಶುಲ್ಕದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಆಗ ಟೋಲ್ ಸಿಬ್ಬಂದಿ ಅವರನ್ನು ತಡೆಯಲು ಪ್ರಯತ್ನಿಸಿದಾಗ ಗುಂಪು ಅಲ್ಲಿಯೇ ಇದ್ದ ವಸ್ತುಗಳಿಂದ ಹಲ್ಲೆ ನಡೆಸಿದೆ. 

   ಘಟನೆಯಲ್ಲಿ ಮನು, ಸುಧಾಂ ಮತ್ತು ಅಮಾನ್ ಎಂಬ ಮೂವರಿಗೆ ತೀವ್ರ ರೀತಿಯ ಗಾಯವಾಗಿದ್ದು, ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಶಂಕಿತರನ್ನು ಉಳ್ಳಾಲದ ಜುಲ್ಫಾನ್, ನಿಫಾನ್ ಮತ್ತು ಫಾಯಾಜ್ ಎಂದು ಗುರುತಿಸಲಾಗಿದೆ. ಜುಲ್ಫಾನ್ ನನ್ನು ಬಂಧಿಸಿರುವ ಪೊಲೀಸರು ಇತರ ಆರೋಪಿಗಳ ಪತ್ತೆಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

Recent Articles

spot_img

Related Stories

Share via
Copy link
Powered by Social Snap