ಮೈಸೂರು ಬೆಂಗಳೂರು ಎಕ್ಸ್ಪ್ರೆಸ್ ಹೈವೆ : ಟೋಲ್ ದರ ಹೆಚ್ಚಳ

ಬೆಂಗಳೂರು

     ತೀವ್ರ ವಿವಾದದಕ್ಕೆ ಗುರಿಯಾಗಿದ್ದ ಮೈಸೂರು ಬೆಂಗಳೂರು ಎಕ್ಸ್ಪ್ರೆಸ್ ಹೈವೆ ಸಂಚಾರ ಮತ್ತಷ್ಟು ದುಬಾರಿಯಾಗಿದ್ದು,ಟೋಲ್ ಸಂಗ್ರಹ ಆರಂಭವಾದ 17 ದಿನದಲ್ಲೇ ಮತ್ತೆ ಟೋಲ್ ದರ ಹೆಚ್ಚಳವಾಗಿದೆ.

     ಏ.1  ಈ ಪರಿಷ್ಕೃತ ದರವು ಜಾರಿಗೆ ಬರಲಿದೆ. ಶೇಕಡಾ 22ರಷ್ಟು ರಾಷ್ರ್ಟೀಯ ಹೆದ್ದಾರಿ ಶುಲ್ಕ ನಿಯಮ 2008ರ ಪ್ರಕಾರ ಟೋಲ್ ದರ ಹೆಚ್ಚಳವಾಗಲಿದೆ ಎಂದು ಮೂಲಗಳು ತಿಳಿವೆ.ಎಷ್ಟು ದರ ಹೆಚ್ಚಳ: ಕಾರು, ವ್ಯಾನ್, ಜೀಪ್‌ಗಳ ಏಕಮುಖ ಟೋಲ್ ಅನ್ನು 135 ರೂ.ರಿಂದ 165ಕ್ಕೆ ಏರಿಸಲಾಗಿದೆ.ದ್ವಿಮುಖ ಸಂಚಾರ ದರವು 205 ರೂ.ರಿಂದ 250ಕ್ಕೆ ಏರಿಕೆಗೊಂಡಿದೆ.

   ಲಘು ವಾಹನಗಳು, ಮಿನಿ ಬಸ್‌ಗಳ ಏಕಮುಖ ಟೋಲ್ 220 ರೂ.ರಿಂದ 270ಕ್ಕೆ ಹಾಗೂ ದ್ವಿಮುಖ ಸಂಚಾರಕ್ಕೆ 405 ರೂ. (75 ಹೆಚ್ಚಳ) ನಿಗದಿಯಾಗಿದೆ.ಟ್ರಕ್, ಬಸ್, ಎರಡು ಆಕ್ಸೆಲ್ ವಾಹನಗಳ ಏಕಮುಖ ಟೋಲ್ ಬರೋಬ್ಬರಿ 565 ರೂ.ಗಳಿಗೆ ಏರಿಕೆ ಆಗಿದೆ (105 ರೂ. ಹೆಚ್ಚಳ). ದ್ವಿಮುಖ ಸಂಚಾರಕ್ಕೆ 850 ರೂ. ನಿಗದಿಪಡಿಸಲಾಗಿದೆ (160 ರೂ. ಹೆಚ್ಚಳ).3 ಆಕ್ಸೆಲ್ ವಾಣಿಜ್ಯ ವಾಹನಗಳ ಏಕಮುಖ ಸಂಚಾರ ದರವು 615 ರೂ.(115 ರೂ. ಏರಿಕೆ) ಹಾಗೂ ದ್ವಿಮುಖ ಸಂಚಾರಕ್ಕೆ 925 ರೂ. (225 ರೂ. ಹೆಚ್ಚಳ) ಏರಿದೆ. ಭಾರಿ ವಾಹನಗಳ ಏಕಮುಖ ಟೋಲ್ 885 ರೂ. (165 ರೂ. ಹೆಚ್ಚಳ), ದ್ವಿಮುಖ ಸಂಚಾರಕ್ಕೆ 1,330 ರೂ. (250 ರೂ. ಹೆಚ್ಚಳ) ನಿಗದಿ ಆಗಿದೆ. 7 ಅಥವಾ ಅದಕ್ಕಿಂತ ಹೆಚ್ಚಿನ ಆಕ್ಸೆಲ್ ವಾಹನಗಳ ದರವು 1,080 ರೂ. (200 ರೂ. ಹೆಚ್ಚಳ) ಹಾಗೂ ದ್ವಿಮುಖ ಸಂಚಾರಕ್ಕೆ 1,620 ರೂ. (305 ರೂ. ಏರಿಕೆ) ನಿಗದಿ ಆಗಿದೆ.ಒಟ್ಟಿನಲ್ಲಿ ಟೋಲ್ ದರ ಹೆಚ್ಚಳಕ್ಕೆ ಸಾರ್ವಜನಿಕರಿಂದ ಭಾರೀ ಆಕ್ರೋಶ ವ್ಯಕ್ತವಾಗಿದೆ. ಹೆದ್ದಾರಿ ಪ್ರಾಧಿಕಾರ ಜನಸಾಮಾನ್ಯರನ್ನ ಲೂಟಿ ಮಾಡುತ್ತಿದೆ ಕಿಡಿಕಾರಿದ್ದಾರೆ.

ಟೋಲ್ ಸಂಗ್ರಹ ಹೆಚ್ಚಳ..!

ಪ್ರಧಾನಿ ನರೇಂದ್ರ ಮೋದಿ ಇದೇ ಮಾರ್ಚ್ 12ರಂದು ಈ ಹೆದ್ದಾರಿಯನ್ನು ಉದ್ಘಾಟಿಸಿದ್ದರು. ಮಾ. 14ರಿಂದ ಬೆಂಗಳೂರು ದಕ್ಷಿಣ ತಾಲ್ಲೂಕಿನ ಕಣಮಿಣಕಿ ಹಾಗೂ ರಾಮನಗರ ತಾಲ್ಲೂಕಿನ ಶೇಷಗಿರಿಹಳ್ಳಿ ಟೋಲ್ ಪ್ಲಾಜಾಗಳಲ್ಲಿ ಟೋಲ್ ಸಂಗ್ರಹ ಆರಂಭಗೊಂಡಿತ್ತು. ಇದೀಗ 17 ದಿನದಲ್ಲೇ ಟೋಲ್ ಸಂಗ್ರಹ ಹೆಚ್ಚಳ ಮಾಡಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap