ಬೆಂಗಳೂರು
ಬೆಂಗಳೂರು-ಮೈಸೂರು ನಗರಗಳನ್ನು ಸಂಪರ್ಕಿಸುವ ಬಹುನಿರೀಕ್ಷೆಯ ದಶಪಥ ಹೆದ್ದಾರಿ ಉದ್ಘಾಟನೆಗೂ ಮನ್ನವೇ ಆಪಾದನೆಗೆ ಗುರಿಯಾಗಿದೆ. ಉದ್ಘಾಟನೆ ಬಳಿಕ ಟೋಲ್‌ನಲ್ಲಿ ಶುಲ್ಕ ಸಂಗ್ರಹ ಎಂದಿದ್ದ ಪ್ರಾಧಿಕಾರ ಏಕಾಎಕಿ ಟೋಲ್ ಸಂಗ್ರಹಿಸುತ್ತಿದ್ದಾರೆ ಎಂಬ ಆಪಾದನೆ ಎದುರಾಗಿದೆ.
ಉದ್ಗಾಟನೆಗೂ ಮುನ್ನವೇ ಟೋಲ್ ಸಂಗ್ರಹ:
ಬೆಂಗಳೂರು- ಮೈಸೂರು ದಶಪಥ ಹೆದ್ದಾರಿಯಲ್ಲಿ ಫೆಬ್ರವರಿ 28ರಿಂದ ಟೋಲ್ ಸಂಗ್ರಹ ಆರಂಭಿಸಲಾಗುವುದು ಎಂದು ಹೆದ್ದಾರಿ ಪ್ರಧಿಕಾರ ಹೇಳಿತ್ತು. ಆಗ ಉದ್ಘಾಟನೆಗೂ ಮುನ್ನ ಟೋಲ್ ಸಂಗ್ರಹವೇಕೆ? ಎಂಬ ಪ್ರಶ್ನೆ ಎದ್ದಿತ್ತು. ಹೀಗಾಗಿ ಮಾರ್ಚ್ 14ರಿಂದ ಟೋಲ್ ಶುಲ್ಕ ಸಂಗ್ರಹಿಸಲಾಗುವುದು. ಅಷ್ಟರೊಳಗೆ ಸರ್ವೀಸ್ ರಸ್ತೆ ಕೆಲಸ ಪೂರ್ಣಗೊಳಿಸಲಾಗುವುದು ಎಂದು ಪ್ರಾಧಿಕಾರ ತಿಳಿಸಿತ್ತು.
ಬುಧವಾರ ರಾತ್ರಿ ಕೆಂಗೇರಿಯಿಂದ ಬಿಡದಿಗೆ ಬರುತ್ತಿದ್ದ ವಾಹನ ಸವಾರ ಫಾಸ್ಟಾಗ್‌ನಿಂದ 75 ರೂಪಾಯಿ ಕಟ್ ಆಗಿದೆ. ಈ ಕುರಿತು ಮೊಬೈಲ್‌ಗೆ ಸಂದೇಶ ರವಾನೆಯಾದ ಬಳಿಕವೇ ಸದ್ದಿಲ್ಲದೇ ಟೋಲ್ ಶುಲ್ಕ ಸಂಗ್ರಹ ಆರಂಭವಾಗಿರುವುದು ಬೆಳಕಿಗೆ ಬಂದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ