ಜೀವವಿಮೆ ಪ್ರೀಮಿಯಂ ಮೇಲಿನ ತೆರಿಗೆ ವಿನಾಯಿತಿ ಕೈಬಿಟ್ಟ ಕೇಂದ್ರ

ವದೆಹಲಿ: 

    ಫೆಬ್ರುವರಿ 1ರಂದು ಬಜೆಟ್ ಮಂಡನೆ ಸಂದರ್ಭದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ‘ಜೀವ ವಿಮಾ ಪಾಲಿಸಿಯ ಒಟ್ಟು ಪ್ರೀಮಿಯಂ ಮೊತ್ತವು ₹ 5 ಲಕ್ಷವನ್ನು ಮೀರಿದ್ದರೆ, ಒಟ್ಟು ಸಿಗುವ ಹಣಕ್ಕೆ ನೀಡುವ ತೆರಿಗೆ ವಿನಾಯಿತಿಯನ್ನು ಕೈಬಿಡಲಾಗುತ್ತದೆ’ ಎಂದು ಹೇಳಿದ್ದರು.

    ಏಪ್ರಿಲ್‌ 1ರ ನಂತರದಲ್ಲಿ ಖರೀದಿಸುವ ಪಾಲಿಸಿಗಳಿಗೆ ಈ ನಿಯಮ ಅನ್ವಯವಾಗುತ್ತದೆ ಎಂದು ಬಜೆಟ್‌ನಲ್ಲಿ ಹೇಳಲಾಗಿದೆ. ಆದರೆ ಈ ಪ್ರಸ್ತಾವನೆಯು ವಿಮಾ ಕಂಪನಿಗಳಲ್ಲಿ ಆತಂಕ ಮೂಡಿಸಿದೆ. ಪ್ರಮುಖ ವಿಮಾ ಕಂಪನಿಗಳ ಪ್ರತಿನಿಧಿಗಳು, ನಿರ್ಮಲಾ ಅವರನ್ನು ಮತ್ತು ಹಣಕಾಸು ಸಚಿವಾಲಯದ ಅಧಿಕಾರಿಗಳನ್ನು ಭೇಟಿ ಮಾಡಿ, ಈ ಪ್ರಸ್ತಾವ ಮರುಪರಿಶೀಲಿಸುವಂತೆ ಮನವಿ ಮಾಡಿದ್ದರು.

     ಅತಿ ಶ್ರೀಮಂತರ NIA ಮೇಲೆ ಮಾತ್ರ ‍ಪರಿಣಾಮ ಬೀರುತ್ತದೆ. ಜನಸಾಮಾನ್ಯರಿಗೆ ಇದರಿಂದ ತೊಂದರೆ ಇಲ್ಲ. ಹೀಗಾಗಿ, ₹ 5 ಲಕ್ಷ ಎಂಬ ಮಿತಿಯನ್ನು ಸಡಿಲಿಸುವ ಸಾಧ್ಯತೆ ಇಲ್ಲ’ ಎಂದು ಅಧಿಕಾರಿಯೊಬ್ಬರು ಹೆಸರು ಬಹಿರಂಗಪಡಿಸಬಾರದು ಎಂಬ ಷರತ್ತಿನೊಂದಿಗೆ ತಿಳಿಸಿದ್ದಾರೆ.

  ತೆರಿಗೆಯನ್ನು ಈ ರೀತಿಯಲ್ಲಿ ಲೆಕ್ಕ ಹಾಕಲು ಅವಕಾಶ ಕೊಡುವ ಬಗ್ಗೆ ಪ್ರಧಾನಿಯವರ ಕಚೇರಿಯು ಅಂತಿಮ ತೀರ್ಮಾನ ಕೈಗೊಳ್ಳಲಿದೆ ಎನ್ನಲಾಗಿದೆ. ಈ ವಿಚಾರವಾಗಿ ಹಣಕಾಸು ಸಚಿವಾಲಯದಿಂದ ಪ್ರತಿಕ್ರಿಯೆ ಸಿಕ್ಕಿಲ್ಲ. ‘ಇಂಡೆಕ್ಸೇಷನ್ ನೆಲೆಯಲ್ಲಿ ಲೆಕ್ಕ ಹಾಕಿದಾಗ ಪಾವತಿಸಬೇಕಿರುವ ತೆರಿಗೆ ಮೊತ್ತವು ಕಡಿಮೆ ಆಗುತ್ತದೆ’ ಎಂದು ತೆರಿಗೆ ಸಲಹೆಗಾರ ಕುಲದೀಪ್ ಕುಮಾರ್ ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap