ಬೆಂಗಳೂರು :
ಬಾಲಿವುಡ್‌ನಲ್ಲಿ ಕೆಲವು ಸ್ಟಾರ್‌ಗಳಿಗೆ ಸಕ್ಸಸ್ ಸಿಕ್ಕಿದ್ದರೆ, ದಕ್ಷಿಣ ಭಾರತದ ಹಲವು ಸ್ಟಾರ್‌ಗಳಿಗೆ ಈ ವರ್ಷ ಲಕ್ಕಿ ವರ್ಷ. ಪ್ರತಿ ತಿಂಗಳು ಸ್ಟಾರ್‌ಗಳ ಜನಪ್ರಿಯತೆಯನ್ನು ಅಳೆಯುವುದಕ್ಕಂತಲೇ ಒಂದು ಸಂಸ್ಥೆಯಿದ್ದು, ಅದು ಜುಲೈ ತಿಂಗಳಲ್ಲಿ ಜನಪ್ರಿಯತೆ ಗಿಟ್ಟಿಸಿಕೊಂಡಿರುವ ಟಾಪ್ 10 ಸ್ಟಾರ್‌ಗಳ ಪಟ್ಟಿಯನ್ನು ರಿಲೀಸ್ ಮಾಡಿದೆ.
ಓರ್ಮ್ಯಾಕ್ಸ್ ಮೀಡಿಯಾ ಸಿನಿಮಾ, ಟಿವಿ, ಓಟಿಟಿ, ನ್ಯೂಸ್, ಮ್ಯೂಸಿಕ್ ಹಾಗೂ ಕ್ರೀಡಾ ಕ್ಷೇತ್ರದ ಅಂಕಿ ಅಂಶಗಳನ್ನು ಟ್ರ್ಯಾಕ್ ಮಾಡುತ್ತೆ. ಅದರಲ್ಲೂ ಪ್ರತಿ ತಿಂಗಳು ಯಾವ ನಟ- ನಟಿಯರು ಹೆಚ್ಚು ಜನಪ್ರಿಯತೆಯನ್ನು ಗಳಿಸಿದ್ದಾರೆ? ಅನ್ನೋದನ್ನು ಓರ್ಮ್ಯಾಕ್ಸ್ ಮೀಡಿಯಾ ತನ್ನ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಲೇ ಇರುತ್ತೆ.
2024, ಜುಲೈ ತಿಂಗಳ ಅಂಕಿ ಅಂಶಗಳನ್ನು ಓರ್ಮ್ಯಾಕ್ಸ್ ಮೀಡಿಯಾ ರಿಲೀಸ್ ಮಾಡಿದೆ. ಜುಲೈ ತಿಂಗಳಲ್ಲಿ ಟಾಪ್ 10 ಸ್ಥಾನದಲ್ಲಿರುವ ಸೂಪರ್‌ಸ್ಟಾರ್‌ಗಳ ಪಟ್ಟಿಯನ್ನು ರಿಲೀಸ್ ಮಾಡಿದೆ. ಈ ಪಟ್ಟಿಲ್ಲಿ ಕೇವಲ ಮೂವರು ಬಾಲಿವುಡ್ ತಾರೆಯರನ್ನು ಬಿಟ್ಟಿರೆ, ಉಳಿದ ಏಳು ಮಂದಿನೂ ದಕ್ಷಣ ಭಾರತದವೇ ಆಗಿದ್ದಾರೆ.
ಕಾಲಿವುಡ್ ಹಿರಿಯ ನಟ ಅಜಿತ್ ಕುಮಾರ್ ಸಿನಿಮಾ ‘ವಿಡಾಮುಯಾರ್ಚಿ’ ಬಿಡುಗಡೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಈಗಾಗಲೇ ಈ ಸಿನಿಮಾದ ಮೇಕಿಂಗ್ ವಿಡಿಯೋಗಳು ಸಂಚಲನ ಸೃಷ್ಟಿಸಿದ್ದವು. ಇನ್ನೇನು ಬಿಡುಗಡೆ ಹೊಸ್ತಿಲಲ್ಲಿ ಇರುವ ಈ ಸಿನಿಮಾ ನೋಡುವುದಕ್ಕೆ ಅಜಿತ್ ಅಭಿಮಾನಿಗಳ ಕಾದು ಕೂತಿದ್ದಾರೆ. ಈ ಕಾರಣಕ್ಕೆ ಅಜಿತ್ ಬಗ್ಗೆ ಹೆಚ್ಚು ಜನರು ಸರ್ಚ್ ಮಾಡಿದ್ದರು. ಹೀಗಾಗಿ ಓರ್ಮ್ಯಾಕ್ಸ್ ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿ ಇದ್ದಾರೆ.
ಟಾಪ್ 9ನೇ ಸ್ಥಾನದಲ್ಲಿ ರಾಮ್ ಚರಣ್ ಇದ್ದರೆ, ಎಂಟನೇ ಸ್ಥಾನದಲ್ಲಿ ಸಲ್ಮಾನ್ ಖಾನ್ ಇದ್ದಾರೆ. 7ನೇ ಸ್ಥಾನದಲ್ಲಿ ‘ಪುಷ್ಪ’ ಖ್ಯಾತಿಯ ಅಲ್ಲು ಅರ್ಜುನ್ ಇದ್ದಾರೆ. ಸತತ ಸೋಲುಗಳನ್ನು ನೀಡುತ್ತಿದ್ದರೂ 6ನೇ ಸ್ಥಾನದಲ್ಲಿ ಅಕ್ಷಯ್ ಕುಮಾರ್ ಇದ್ದಾರೆ. 5ನೇ ಸ್ಥಾನದಲ್ಲಿ ಜೂ.ಎನ್‌ಟಿಆರ್, 4ನೇ ಸ್ಥಾನದಲ್ಲಿ ಮಹೇಶ್ ಬಾಬು, 3ನೇ ಸ್ಥಾನದಲ್ಲಿ ಶಾರುಖ್ ಖಾನ್, 2ನೇ ಸ್ಥಾನದಲ್ಲಿ ದಳಪತಿ ವಿಜಯ್ ಇದ್ದಾರೆ.
ಇತ್ತೀಚೆಗೆ ಬಾಲಿವುಡ್ ನಟ ಅರ್ಷದ್ ವರ್ಸಿ ‘ಕಲ್ಕಿ 2898 AD’ಯಲ್ಲಿ ಪ್ರಭಾಸ್ ಜೋಕರ್ ಎಂದು ಕರೆದಿದ್ದರು. ಈ ಕಾರಣಕ್ಕೆ ಈ ತಿಂಗಳು ಕೂಡ ಪ್ರಭಾಸ್ ಸುದ್ದಿಯಲ್ಲಿದ್ದಾರೆ. ಹಾಗೇ ಜುಲೈ ತಿಂಗಳಲ್ಲಿ ಪ್ರಭಾಸ್‌ರನ್ನು ಅತೀ ಹೆಚ್ಚು ಬಾರಿ ಸರ್ಚ್ ಮಾಡಲಾಗಿದೆ. ‘ಕಲ್ಕಿ 2898 AD’ ಥಿಯೇಟರ್‌ಗಳಲ್ಲಿ ಸದ್ದು ಮಾಡಿದ್ದರಿಂದ ಪ್ರಭಾಸ್ ಹೆಚ್ಚು ಚರ್ಚೆಯಲ್ಲಿ ಇದ್ದರು.
ಜುಲೈ ತಿಂಗಳ ಜನಪ್ರಿಯ ಸೂಪರ್‌ಸ್ಟಾರ್‌ಗಳಲ್ಲಿ ಬಾಲಿವುಡ್‌ನ ಮೂರು ಮಂದಿ ಮಾತ್ರ ಇದ್ದಾರೆ. ಬಾಲಿವುಡ್ ಕಿಂಗ್ ಶಾರುಖ್ ಖಾನ್, ಅಕ್ಷಯ್ ಕುಮಾರ್ ಹಾಗೂ ಸಲ್ಮಾನ್ ಖಾನ್ ಬಿಟ್ಟರೆ ಬೇರೆ ಯಾರೂ ಇಲ್ಲ. ಉಳಿದ ಏಳು ಸ್ಥಾನಗಳನ್ನು ದಕ್ಷಿಣ ಭಾರತದ ತಾರೆಯರೇ ಇದ್ದಾರೆ. ಈ ಮೂಲಕ ಜುಲೈ ತಿಂಗಳಲ್ಲಿ ಸೌತ್ ಸ್ಟಾರ್‌ಗಳೇ ಮೇಲುಗೈ ಸಾಧಿಸಿದ್ದಾರೆ.