ಕಳ್ಳತನಗಳ ಬಗ್ಗೆ ಮುಂಜಾಗ್ರತೆ ವಹಿಸಿ

ತೋವಿನಕೆರೆ : 

      ವರ್ತಕರು ಕಳ್ಳತನಗಳನ್ನು ತಡೆಯಲು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಕೊರಟಗೆರೆ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ಸಿದ್ದರಾಮೇಶ್ವರ ಮಾಹಿತಿ ನೀಡಿದರು. ಇಲ್ಲಿನ ಬಸ್ ನಿಲ್ದಾಣದ ವೃತ್ತದಲ್ಲಿ ಆಧುನಿಕ ತಂತ್ರಜ್ಞಾನ ಹೊಂದಿರುವ ಸಿ.ಸಿ.ಟಿ.ವಿಯನ್ನು ಅಳವಡಿಸುವುದು ಸೇರಿದಂತೆ ವರ್ತಕರು ವ್ಯವಹಾರ ಸಮಯದಲ್ಲಿ ಸೂಕ್ಷ್ಮವಾಗಿ ಹೊಸಬರ ಬಗ್ಗೆ ನಿಗಾ ವಹಿಸಬೇಕು. ಯಾರ ಮೇಲಾದರೂ ಅನುಮಾನ ಬಂದರೆ ಪೊಲೀಸರ ಗಮನಕ್ಕೆ ತರ ಬೇಕು ಎಂದು ಅಂಗಡಿ ಮಾಲೀಕರಿಗೆ ತಿಳಿಸಿದರು.

      ಮಾಲೀಕರು ಹೆಚ್ಚುತ್ತಿರುವ ಕಳ್ಳತನಗಳ ಬಗ್ಗೆ ಆತಂಕ ವ್ಯಕ್ತ ಪಡಿಸಿದರು. ಇದನ್ನು ತಪ್ಪಿಸಲು ಭದ್ರತೆಯ ಬಗ್ಗೆ ಸಿಪಿಐ ಜೊತೆ ಚರ್ಚೆ ಮಾಡಿ ಆತಂಕಕ್ಕೆ ಪರಿಹಾರ ಪಡೆದು ಕೊಳ್ಳುವ ಪ್ರಯತ್ನ ಮಾಡಿದರು. ಸ್ಥಳೀಯ ಪೊಲೀಸ್ ಠಾಣೆಯ ಹನುಮಂತರಾಯಪ್ಪ, ಮುಖಂಡರಾದ ಟಿ.ಡಿ.ಪ್ರಸನ್ನಕುಮಾರ್, ಟಿ.ಆರ್.ಬಸವರಾಜು, ಟಿ.ವಿ.ವಿಜಯ ಕುಮಾರ್, ವರ್ತಕ ಸಂಘದ ಟಿ.ಐ.ಅಜೀಮುಲ್ಲಾ, ಮುರಳಿ ಬಾಬು, ಟಿ.ಡಿ.ಮಂಜುನಾಥ, ಕೃಷಿಕ ಎಚ್.ಜೆ.ಪದ್ಮರಾಜು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap