ಇನೋವಾ ಹೈಕ್ರಾಸ್‌ ಮತ್ತು ಅರ್ಬನ್ ಕ್ರೂಸರ್ ಹೈರೈಡರ್ ಬುಕ್ಕಿಂಗ್‌ ತಾತ್ಕಾಲಿಕ ಸ್ಥಗಿತ ….!

ಬೆಂಗಳೂರು:

    ಟೊಯೋಟಾ ಕಂಪನಿ ಮೊದಲಿನಿಂದಲ್ಲೂ ನಂಬಿಕೆ ಮತ್ತು ನಾಣ್ಯತ್ಯಗೆ ಹೆಸರುವಾಸಿಯಾಗಿದೆ ಮತ್ತು ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ಸರ್ವೀಸ್‌ ಪಾಯಿಂಟ್‌ ಗಳು ಇನ್ನು ಮುತಾದ ಸೌಲಭ್ಯಗಳು ನೀಡುತ್ತಿದ್ದ ಕಂಪನಿ ಗ್ರಾಹಕರಿಗೆ ದೊಡ್ಡ ಶಾಕ್‌ ನೀಡಿದೆ. 

    ದೇಶೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದಾಗಿನಿಂದಲೂ ಇನ್ನೋವಾ ಹೈಕ್ರಾಸ್ ಹಾಗೂ ಅರ್ಬನ್ ಕ್ರೂಸರ್ ಹೈರೈಡರ್ ಹೆಚ್ಚಿನ ಡಿಮ್ಯಾಂಡ್ ಪಡೆದಿವೆ. ಅವುಗಳ ಸ್ಟ್ರಾಂಗ್ ಹೈಬ್ರಿಡ್ ರೂಪಾಂತರಗಳು ಗರಿಷ್ಠ ಕಾಯುವಿಕೆಯ ಅವಧಿ ಹೊಂದಿದ್ದು, ಭಾರತದ ಕೆಲವೆಡೆಗಳಲ್ಲಿ ಇವತ್ತು ಬುಕ್ ಮಾಡಿದರೆ, ಕನಿಷ್ಠವೆಂದರೂ 2.5 ವರ್ಷಗಳ ಬಳಿಕ ವಿತರಣೆಯಾಗಲಿದೆ. ಇದನ್ನು ನೋಡಿದಾಗ ಯಾವ ಪ್ರಮಾಣದಲ್ಲಿ ಬೇಡಿಕೆಯಿದೆ ಎಂಬುದು ಗೊತ್ತಾಗುತ್ತದೆ.

ಸದ್ಯ ದೊರೆತ್ತಿರುವ ಮಾಹಿತಿ ಪ್ರಕಾರ, ಗ್ರಾಹಕರಿಗೆ ಅನಾನುಕೂಲವಾಗುವುದನ್ನು ತಪ್ಪಿಸಲು ತಕ್ಷಣದಿಂದಲೇ ಜಾರಿಗೆ ಬರುವಂತೆ ಇನ್ನೋವಾ ಹೈಕ್ರಾಸ್ ಮತ್ತು ಅರ್ಬನ್ ಕ್ರೂಸರ್ ಹೈರೈಡರ್ ಹೈಬ್ರಿಡ್ ರೂಪಾಂತರಗಳ ಬುಕ್ಕಿಂಗ್ ಅನ್ನು ಟೊಯೊಟಾ ನಿಲ್ಲಿಸಿದ್ದು, ಡೀಲರ್‌ಗಳಿಗೂ ಮಾಹಿತಿ ನೀಡಿದೆ. ಆದರೆ, ಈ ಕುರಿತಂತೆ ಕಂಪನಿಯಿಂದ ಯಾವುದೇ ಅಧಿಕೃತ ಪತ್ರಿಕಾ ಪ್ರಕಟಣೆ ಬಂದಿಲ್ಲ. ಕೇವಲ ಡೀಲರ್‌ಗಳು ಮಾತ್ರ ಇದನ್ನು ಖಚಿತಪಡಿಸಿದ್ದಾರೆ.
ಟೊಯೊಟಾ ಕಂಪನಿ ಮಾರುತಿ ಸುಜುಕಿಯೊಂದಿಗೆ ಸಹಭಾಗಿತ್ವ ಹೊಂದಿದ್ದು, ಅದರ ಜನಪ್ರಿಯ ಗ್ರ್ಯಾಂಡ್ ವಿಟಾರಾ ಎಸ್‌ಯುವಿ ತಯಾರಿಕೆಯಲ್ಲಿ ತೊಡಗಿದ್ದು, ಇನ್ನೋವಾ ಹೈಕ್ರಾಸ್, ಅರ್ಬನ್ ಕ್ರೂಸರ್ ಹೈರೈಡರ್ ಹೈಬ್ರಿಡ್ ರೂಪಾಂತರಗಳ ಉತ್ಪಾದನೆಯನ್ನು ನಿಧಾನಗೊಳಿಸಿದೆ. ಇದು ಕೂಡ ತಾತ್ಕಾಲಿಕ ಬುಕ್ಕಿಂಗ್ ಸ್ಥಗಿತಕ್ಕೆ ಕಾರಣವಾಗಿರಬಹುದು ಎನ್ನುವುದು ಹಲವರ ಅಭಿಪ್ರಾಯವಾಗಿದೆ. ಗ್ರ್ಯಾಂಡ್ ವಿಟಾರಾದ ಖ್ಯಾತಿ ಎಷ್ಟಿದೆಯೆಂದರೆ, ಕಳೆದ ಫೆಬ್ರವರಿಯಲ್ಲಿ 9,183 ಯುನಿಟ್ ಈ ಕಾರುಗಳು ಮಾರಾಟವಾಗಿರುವುದೇ ಇದಕ್ಕೆ ಸಾಕ್ಷಿ.

ಹೈಬ್ರಿಡ್ ಎಂಜಿನ್ ಹೊಂದಿರುವ ಟೊಯೊಟಾದ ಇನ್ನೋವಾ ಹೈಕ್ರಾಸ್ ಎಂಪಿವಿ ಮತ್ತು ಅರ್ಬನ್ ಕ್ರೂಸರ್ ಹೈರೈಡರ್ ಎಸ್‌ಯುವಿಗಳ ಬೆಲೆ ಭಾರತದ ಮಾರುಕಟ್ಟೆಯಲ್ಲಿ ಕೊಂಚ ಜಾಸ್ತಿಯೇ ಇದೆ. ಆದರೂ ಗ್ರಾಹಕರು ಇಷ್ಟಪಟ್ಟು ಖರೀದಿಸುತ್ತಾರೆ. ಏಕೆಂದರೆ, ನಿರ್ವಹಣಾ ವೆಚ್ಚ ಮಾತ್ರ ತುಂಬಾ ಕಡಿಮೆ. ಟೊಯೊಟಾ ಹೈರೈಡರ್ 27.97 kmpl, ಇನ್ನೋವಾ ಹೈಕ್ರಾಸ್ 21.1 kmpl ಮೈಲೇಜ್ ನೀಡುತ್ತದೆ.

ದೇಶೀಯ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ಇನ್ನೋವಾ ಹೈಕ್ರಾಸ್ ರೂ.18.30 ಲಕ್ಷದಿಂದ ರೂ.28.97 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. 2.0 ಲೀಟರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್, 174 PS ಪವರ್ ಹಾಗೂ 205 Nm ಪೀಕ್ ಟಾರ್ಕ್, 2.0 ಲೀಟರ್ ಸ್ಟ್ರಾಂಗ್ ಹೈಬ್ರಿಡ್ ಪೆಟ್ರೋಲ್ ಎಂಜಿನ್ 186 PS ಪವರ್, 206 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಪಡೆಯಿದ್ದು, e-CVT ಗೇರ್ ಬಾಕ್ಸ್ ಆಯ್ಕೆಯನ್ನು ಹೊಂದಿದೆ.

ಟೊಯೊಟಾದ ಅರ್ಬನ್ ಕ್ರೂಸರ್ ಹೈರೈಡರ್ ಎಸ್‌ಯುವಿ ಬಗ್ಗೆ ಮಾತನಾಡುವುದಾದರೆ, ಇದು ರೂ.10.48 ಲಕ್ಷದಿಂದ ರೂ.19.49 ಲಕ್ಷ ಬೆಲೆಯಲ್ಲಿ ಖರೀದಿಗೆ ದೊರೆಯಲಿದೆ. 1.5-ಲೀಟರ್ ಮೈಲ್ಡ್ ಹೈಬ್ರಿಡ್, 1.5-ಲೀಟರ್ ಸ್ಟ್ರಾಂಗ್ ಹೈಬ್ರಿಡ್ ಎಂಬ ಎರಡು ಎಂಜಿನ್ ಆಯ್ಕೆಗಳನ್ನು ಹೊಂದಿದೆ. ಜೊತೆಗೆ ಗ್ರಾಹಕರನ್ನು ಆಕರ್ಷಿಸುವ ಭರಪೂರ ವೈಶಿಷ್ಟ್ಯಗಳನ್ನು ಹೊಂದಿದೆ. ಪ್ರಮುಖವಾಗಿ 9 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಅತ್ಯಾಧುನಿಕ ಸನ್ ರೂಫ್ ಪಡೆದಿದ್ದು, ಸುರಕ್ಷತೆಯ ದೃಷ್ಟಿಯಿಂದ 6 ಏರ್ ಬಾಗ್ಸ್ ಹೊಂದಿದೆ.

ಒಟ್ಟಾರೆ, ಹೆಚ್ಚಿನ ಬೇಡಿಕೆ ಪಡೆದುಕೊಂಡಿರುವ ಇನ್ನೋವಾ ಹೈಕ್ರಾಸ್, ಅರ್ಬನ್ ಕ್ರೂಸರ್ ಹೈರೈಡರ್ ಹೈಬ್ರಿಡ್ ರೂಪಾಂತರಗಳ ಬುಕ್ಕಿಂಗ್ ಸ್ಥಗಿತಗಳಿಸುವಂತೆ ಟೊಯೊಟಾ ತಿಳಿಸಿದೆ ಎಂದು ಡೀಲರ್‌ಗಳು ಹೇಳುತ್ತಿದ್ದಾರೆ. ಆದರೆ, ಕಂಪನಿ ಕಡೆಯಿಂದ ಸ್ಪಷ್ಟನೆ ಸಿಗಬೇಕಾಗಿದೆ. ಆದರೆ, ಇವರೆಡು ಕಾರುಗಳಿಗಿರುವ ಕಾಯುವಿಕೆ ಅವಧಿಯನ್ನು ಗಮನಿಸಿದಾಗ ಎಷ್ಟರ ಮಟ್ಟಿಗೆ ಬೇಡಿಕೆ ಹೊಂದಿವೆ ಎಂಬುದು ತಿಳಿಯುತ್ತದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link