ರಾಮನಗರ :
ದೇವಸ್ಥಾನಕ್ಕೆ ತೆರಳಿದ್ದ ವೇಳೆ ಮರಕ್ಕೆ ಟ್ರ್ಯಾಕ್ಟರ್ ಡಿಕ್ಕಿ ಹೊಡೆದು ಪಲ್ಟಿಯಾಗಿ ಸ್ಥಳದಲ್ಲೇ 6 ಮಂದಿ ಸಾವನ್ನಪ್ಪಿರುವ ಘಟನೆ ಕನಕಪುರದ ಗಡಿ ಭಾಗದಲ್ಲಿ ನಡೆದಿದೆ.
ಮೃತರೆಲ್ಲಾ ಕನಕಪುರ ತಾಲೂಕಿನ ಕೆರಳಾಳುಸಂದ್ರದ ಗ್ರಾಮಸ್ಥರು ಎನ್ನಲಾಗಿದೆ. ಕೆರಳಾಳುಸಂದ್ರ ಗ್ರಾಮದ 15 ಮಂದಿ ಟ್ರ್ಯಾಕ್ಟರ್ ಮೂಲಕ ತಮಿಳುನಾಡಿನ ದಬ್ಬಗುಳೇಶ್ವರ (ದಬ್ಬಗುಳಿಯ ಬಸವೇಶ್ವರ ) ದೇವಾಲಯ ನೋಡಲು ಬಂದಿದ್ದರು. ಈ ವೇಳೆ ಟ್ರ್ಯಾಕ್ಟರ್ ನ ಬ್ರೇಕ್ ಕಟ್ ಅಗಿ, ಎಕ್ಸಲೇಟರ್ ವೈರ್ ಸಹ ತುಂಡರಿಸಿದೆ. ಈ ಕಾರಣ ರಸ್ತೆ ತಿರುವಿನಲ್ಲಿ ಟ್ರ್ಯಾಕ್ಟರ್ ಪಲ್ಟಿಯಾದ ಹಿನ್ನೆಲೆ ಸ್ಥಳದಲ್ಲೇ 5 ಮಂದಿ ಮೃತವಾಗಿ 8 ಮಂದಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.
ಸದ್ಯ ಗಂಭೀರವಾಗಿ ಗಾಯಗೊಂಡಿರುವವರನ್ನ ತಮಿಳುನಾಡಿನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ