ರಾಂಚಿ:
ನಸುಕಿನ ಜಾವ ಎರಡು ಗೂಡ್ಸ್ ರೈಲುಗಳು ಮುಖಾಮುಖಿ ಡಿಕ್ಕಿ ಹೊಡೆದು, ಇಬ್ಬರು ಲೋಕೋ ಪೈಲೆಟ್ ಸೇರಿದಂತೆ ಮೂವರು ದುರಂತವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.ಸಾಹಿಬ್‌ಗಂಜ್‌ನ ಬರ್ಹೆಟ್ ಪೊಲೀಸ್ ಠಾಣೆ ಪ್ರದೇಶದ ಫರಕ್ಕಾ-ಲಾಲ್ಮಾಟಿಯಾ ಎಂಜಿಆರ್ ರೈಲು ಮಾರ್ಗದಲ್ಲಿ ದೊಡ್ಡ ರೈಲ್ವೆ ಅಪಘಾತ ಸಂಭವಿಸಿದೆ.
ಬೆಳಗಿನ ಜಾವ 3:00 ಗಂಟೆ ಸುಮಾರಿಗೆ ಬರ್ಹೈಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದ್ದು, ರಾಷ್ಟ್ರೀಯ ಉಷ್ಣ ವಿದ್ಯುತ್ ನಿಗಮ(NTPC) ಡಿಕ್ಕಿ ಹೊಡೆದ ಗೂಡ್ಸ್ ರೈಲುಗಳನ್ನು ನಿರ್ವಹಿಸುತ್ತಿತ್ತು, ಉಷ್ಣ ವಿದ್ಯುತ್ ಸ್ಥಾವರಗಳಿಗೆ ಕಲ್ಲಿದ್ದಲು ಸಾಗಿಸಲು ಈ ರೈಲು ಮಾರ್ಗವನ್ನು ಬಳಸಲಾಗುತ್ತಿತ್ತು. ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದು, ನಾಲ್ವರು ಗಾಯಗೊಂಡಿದ್ದಾರೆ. ಆದ್ರೆ ಈ ಅಪಘಾತದಲ್ಲಿ ಕಾರ್ಮಿಕನೊಬ್ಬ ಕಾರ್ಮಿಕ ಸಿಕ್ಕಿಹಾಕಿಕೊಂಡಿದ್ದಾರೆ ಎಂದು ತಿಳಿದು ಬಂದಿದ್ದು, ಎರಡೂ ಸರಕು ರೈಲುಗಳ ಲೋಕೊ ಪೈಲೆಟ್‌ಗಳು ರೈಲು ಅಪಘಾತದಲ್ಲಿ ಮೃತಪಟ್ಟಿದ್ದಾರೆ.
