ರಾಷ್ಟ್ರೀಯ ಹೆದ್ದಾರಿಗಳಲ್ಲಿ 3,000 ರೂ. ಟೋಲ್‌ಗೆ ವರ್ಷವಿಡೀ ಸಂಚರಿಸಿ!

ಬೆಂಗಳೂರು:

     ನೀವು ನ್ಯಾಶನಲ್‌ ಹೈವೇಗಳಲ್ಲಿ  ಇನ್ನು ಮುಂದೆ ವರ್ಷಕ್ಕೆ ‌ರಿಯಾಯಿತಿ ದರದಲ್ಲಿ 3,000 ರೂಪಾಯಿ ಟೋಲ್ ಪಾವತಿಸಿ ವರ್ಷ ಪೂರ್ತಿ  ಸಂಚರಿಸಬಹುದು. ನೀವು ಇತ್ತೀಚೆಗೆ ಬೆಂಗಳೂರು ಟನೆಲ್‌ ರೋಡ್‌  ಪ್ರಾಜೆಕ್ಟ್‌ನಲ್ಲಿ ತಿಂಗಳಿಗೆ 12,500 ಸಾವಿರ ರುಪಾಯಿ ಟೋಲ್‌ ಆಗುತ್ತದೆಯಂತೆ ಎಂದು ವರದಿಯಾಗಿರುವುದನ್ನು ಕೇಳಿರಬಹುದು. ಆದರೆ ನ್ಯಾಶನಲ್‌ ಹೈವೇ ಟೋಲ್‌ ಪ್ಲಾಜಾ ಮೂಲಕ ಸಂಚರಿಸುವವರಿಗೆ ವಾರ್ಷಿಕ ಟೋಲ್‌ ಪಾಸ್‌ ಮೂಲಕ ಸಾವಿರಾರು ರುಪಾಯಿ ಉಳಿತಾಯ ಆಗಲಿದೆ. ಈಗಾಗಲೇ ಈ ಫಾಸ್ಟ್ಯಾಗ್ ಆನ್ಯುಯಲ್‌ ಪಾಸ್‌ ಅನ್ನು ವಿತರಿಸಲಾಗುತ್ತಿದೆ. 

    ನೀವು ರಾಜ್‌ ಮಾರ್ಗ್‌ ಯಾತ್ರಾ ಆಪ್‌ ಅಥವಾ NHAI ವೆಬ್‌ಸೈಟ್‌ ಮೂಲಕ ರಾಷ್ಟ್ರೀಯ ರಾಜ್‌ ಮಾರ್ಗ್‌ ಟೋಲ್ ಪಾಸ್‌ ಅನ್ನು 3,000/- ಕ್ಕೆ ಖರೀದಿಸಬಹುದು. ಇದರಲ್ಲಿ ವಾರ್ಷಿಕ 200 ಟೋಲ್‌ ಫ್ರೀ ಟ್ರಿಪ್ಸ್‌ಗಳನ್ನು ನ್ಯಾಶನಲ್‌ ಹೈವೇಗಳಲ್ಲಿ ಮಾಡಬಹುದು. ಇದರ ವ್ಯಾಲಿಡಿಟಿ 1 ವರ್ಷ. ವ್ಯಾಲಿಡಿಟಿಗೆ ಮೊದಲೇ 200 ಫ್ರೀ ಟ್ರಿಪ್‌ ಮುಗಿದರೆ, ಮತ್ತೊಂದು ಪಾಸ್‌ ತೆಗೆದುಕೊಳ್ಳಬಹುದು.

    ಈ ವಾರ್ಷಿಕ ಫಾಸ್ಟ್‌ ಟ್ಯಾಗ್‌ ಪಾಸ್‌ ಪ್ರಯಾಣಿಕರ ಖಾಸಗಿ ಕಾರು-ವ್ಯಾನ್‌ಗಳಿಗೆ ಮಾತ್ರ ಲಭ್ಯ. ಕಮರ್ಶಿಯಲ್‌ ವಾಹನಗಳಿಗೆ ಸಿಗಲ್ಲ. ಗೂಗಲ್ ಪ್ಲೇ ಸ್ಟೋರ್‌, ಆಪಪ್‌ ಆಪ್‌ ಸ್ಟೋರ್‌ ಮೂಲಕ ರಾಜಮಾರ್ಗ್‌ ಯಾತ್ರಾ ಆಪ್‌ ಅನ್ನು ಡೌನ್ಲೋಡ್‌ ಮಾಡಬಹುದು.‌ 

    ಟೋಲ್ ಪ್ಲಾಜಾಗಳಲ್ಲಿ ಸಾವಿರಾರು ರುಪಾಯಿ ಉಳಿತಾಯಕ್ಕೆ ಇದು ಉಪಯೋಗವಾಗುತ್ತದೆ. ಆದರೆ ಇದು NHAI ಮತ್ತು ರಸ್ತೆ ಸಾರಿಗೆ ಇಲಾಖೆಯ ನಿರ್ವಹಣೆಯಲ್ಲಿರುವ ನ್ಯಾಶನಲ್‌ ಹೈವೇಗಳಲ್ಲಿ, ಎಕ್ಸ್‌ಪ್ರೆಸ್‌ ವೇಗಳಲ್ಲಿ ಇರುವ ಟೋಲ್‌ ಪ್ಲಾಜಾಗಳಿಗೆ ಅನ್ವಯ. ಸ್ಟೇಟ್‌ ಹೈವೇ, ಸಿಟಿ ಎಕ್ಸ್‌ಪ್ರೆಸ್‌ ಹೈವೇ, ಖಾಸಗಿ ಟೋಲ್‌ ರೋಡ್‌ಗಳಲ್ಲಿ ಅನ್ವಯಿಸುವುದಿಲ್ಲ. ನ್ಯಾಶನಲ್‌ ಹೈವೇಗಳಲ್ಲಿ ಆಗಿಂದಾಗ್ಗೆ ಪ್ರಯಾಣ ಮಾಡುವವರಿಗೆ ಇದು ಅನುಕೂಲ. ಟೋಲ್‌ ನಲ್ಲಿ ಸಾವಿರಾರು ರುಪಾಯಿಗಳನ್ನು ಉಳಿಸಬಹುದು. ಕೆಲಸ ಕಾರ್ಯಗಳಿಗೆ ನಗರಗಳ ನಡುವೆ ನ್ಯಾಶನಲ್‌ ಹೈವೇ ಮೂಲಕ ನಿತ್ಯ ಹೋಗುವವರಿಗೂ ಪ್ರಯೋಜನಕಾರಿ .

    ಆದರೆ ಟೋಲ್‌ ಶುಲ್ಕಗಳನ್ನು ರಿಯಾಯಿತಿ ದರದಲ್ಲಿ ವಾರ್ಷಿಕ ಪಾಸ್‌ ಮೂಲಕ ವಿತರಿಸಬಹುದು ಎಂಬುದಕ್ಕೆ ಇದೊಂದು ನಿದರ್ಶನವಾಗಿದೆ. ದುಬಾರಿ ಟೋಲ್‌ ಶುಲ್ಕಗಳನ್ನು ವಿಧಿಸುವ ಇತರ ಖಾಸಗಿ ರಸ್ತೆ ಪ್ರಾಜೆಕ್ಟ್‌ನವರು ಇದನ್ನು ಗಮನಿಸಬೇಕು. ಮಾದರಿಯಾಗಿ ಪರಿಗಣಿಸಬೇಕು.

Recent Articles

spot_img

Related Stories

Share via
Copy link