ಮುಂಬೈ:
ಭಾರಿ ಮಳೆಯಿಂದಾಗಿ ಮಹಾರಾಷ್ಟ್ರದ ರಾಯಗಡ ಕೋಟೆಗೆ ಪ್ರವಾಸಕ್ಕೆ ಹೋಗಿದ್ದ ಟ್ರೆಕ್ಕರ್ ಗಳು ಅಪಾಯಕ್ಕೆ ಸಿಲುಕಿದ್ದು, ಈ ಕುರಿತ ವಿಡಿಯೋವೊಂದು ವ್ಯಾಪಕ ವೈರಲ್ ಆಗುತ್ತಿದೆ. ಮಹಾರಾಷ್ಟ್ರದ ರಾಯಗಢ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದ್ದು, ಇಂದಿನಿಂದ ರಾಯಗಢ ಕೋಟೆಯನ್ನು ಪ್ರವಾಸಿಗರಿಗೆ ಮುಚ್ಚಲಾಗಿದೆ.
ರಾಯಗಢ ಕೋಟೆಗೆ ಹೋಗುವ ಚಿತ್ತ ದರ್ವಾಜಾ ಮತ್ತು ನಾನೇ ದರ್ವಾಜಾ ರಸ್ತೆಗಳನ್ನು ಬ್ಯಾರಿಕೇಡ್‌ಗಳನ್ನು ಹಾಕುವ ಮೂಲಕ ಮುಚ್ಚಲಾಗಿದೆ. ಜತೆಗೆ ಇಲ್ಲಿ ಪೊಲೀಸ್ ಪಡೆಯನ್ನೂ ನಿಯೋಜಿಸಲಾಗಿದೆ.
ಇನ್ನು ರಾಯಘಡ ಕೋಟೆಗೆ ಪ್ರವಾಸಕ್ಕೆ ತೆರಳಿ ಟ್ರಕರ್ ಗಳು ಕೋಟೆಯ ಮೆಟ್ಟಿಲುಗಳ ನಡೆಯುತ್ತಿದ್ದಾಗ ದಿಢೀರ್ ನೀರು ನುಗ್ಗಿದ್ದು, ಇದರಿಂದ ಪ್ರವಾಸಿದರು ಅಪಾಯಕ್ಕೆ ಸಿಲುಕಿದ್ದಾರೆ. ಈ ಕುರಿತ ವಿಡಿಯೋವೊಂದು ವ್ಯಾಪಕ ವೈರಲ್ ಆಗುತ್ತಿದ್ದು, ವಿಚಾರ ತಿಳಿದ ಕೂಡಲೇ ಎಚ್ಚೆತ್ತ ಅಧಿಕಾರಿಗಳು ಪ್ರವಾಸಿಗರ ರಕ್ಷಣೆಗೆ ಕಾರ್ಯಾಚರಣೆ ನಡೆಸಿದ್ದಾರೆ.
ರಾಯಗಢ ಕೋಟೆಯಲ್ಲಿ ಸಿಲುಕಿರುವ ಪ್ರವಾಸಿಗರನ್ನು ಸುರಕ್ಷಿತವಾಗಿ ವಾಪಸ್ ಕರೆತರಲು ರೋಪ್ ವೇ ಬಳಸಲಾಗುತ್ತಿದೆ. ಈ ಹಿಂದೆ ಇದೇ ರೋಪ್ ವೇಯನ್ನು ಜಿಲ್ಲಾಡಳಿತ ಸ್ಥಗಿತಗೊಳಿಸಿತ್ತು.
