ಕೊರಟಗೆರೆ : ಈ ಬಾರಿ ತ್ರಿಕೋನ ಸ್ಪರ್ಧೆ ಸಾಧ್ಯತೆ

ಕೊರಟಗೆರೆ :

      ಕಲ್ಪತರು ನಾಡು ತುಮಕೂರು ಜಿಲ್ಲೆಯಲ್ಲಿ ಕೊರಟಗೆರೆ ವಿಧಾನಸಭಾ ಕ್ಷೇತ್ರ ರಾಜ್ಯದಲ್ಲಿಯೇ ತನ್ನದೇ ಆದ ಛಾಪು ಹೊಂದಿರುವ ಕ್ಷೇತ್ರವಾಗಿದೆ. ಧಾರ್ಮಿಕವಾಗಿ, ರಾಜಕೀಯವಾಗಿ ತನ್ನದೇ ನೆಲಗಟ್ಟು ಹೊಂದಿರುವ ಕೊರಟಗೆರೆ ವಿಧಾನಸಭಾ ಕ್ಷೇತ್ರದಲ್ಲಿ 2023ರ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವಂತೆಯೇ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಪ್ರಮುಖ ಮೂರು ಪಕ್ಷಗಳ ನಾಯಕರುಗಳು ಜಿದ್ದಾಜಿದ್ದಿಗೆ ಬಿದ್ದು ಚಳಿಗಾಲದಲ್ಲೂ ಬೆವರಿಳಿಸಿಕೊಳ್ಳುತ್ತಿರುವುದು ಸಾಮಾನ್ಯವಾಗಿದೆ.

     ಕೊರಟಗೆರೆ ಎಸ್‌ಸಿ ಮೀಸಲು ಕ್ಷೇತ್ರವಾಗಿದೆ ಮತ್ತು ಜಿಲ್ಲೆಯಲ್ಲಿ ಅತಿ ಚಿಕ್ಕ ಕ್ಷೇತ್ರವೂ ಹೌದು. 6 ಹೋಬಳಿ ಸೇರಿದಂತೆ 36 ಗ್ರಾಮ ಪಂಚಾಯಿತಿ ಹೊಂದಿದ್ದು, 1,06,500 ಮಹಿಳಾ ಮತದಾರರಿದ್ದರೆ, 1,09,250 ಪುರುಷ ಮತದಾರರು ಮತ್ತು ಇತರೆ 40 ಸೇರಿ ಒಟ್ಟು 2,15,790 ಮತದಾರರಿದ್ದಾರೆ. ಧಾರ್ಮಿಕ, ಶೈಕ್ಷಣಿಕ, ಪ್ರೇಕ್ಷಣೀಯ, ರಾಜಕೀಯ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸಿದ್ದು, ರಾಜ್ಯದಲ್ಲಿಯೇ ಪ್ರಮುಖ ಧಾರ್ಮಿಕ ಕ್ಷೇತ್ರ ಗೊರವನಹಳ್ಳಿ ಶ್ರೀ ಮಹಾಲಕ್ಷಿ ಸನ್ನಿಧಾನ, ರಮ್ಯ ಮನೋಹರವಾದಂತಹ ಆಯುರ್ವೇದಿಕ್ ತಾಣ ಎಂದೇ ಪ್ರಸಿದ್ದಿಯಾದ ಸಿದ್ದರಬೆಟ್ಟ ಹಲವು ಪ್ರೇಕ್ಷಕರನ್ನು ಬರಮಾಡಿಕೊಳ್ಳುವ ಪುಣ್ಯಕ್ಷೇತ್ರzಲ್ಲೊಂದಾಗಿದೆ. ಹಲವು ಪ್ರಮುಖ ಮಠಮಾನ್ಯಗಳು ಹೊಂದಿರುವ ವೈವಿಧ್ಯಮ ಕ್ಷೇತ್ರ ಎಂದೇ ಪ್ರಸಿದ್ಧಿ ಪಡೆದಿರುವ ಕೊರಟಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಎಂದೂ ಕಂಡರಿಯದ ರೀತಿಯಲ್ಲಿ ಚುನಾವಣಾ ಅಖಾಡ ಕಾವೇರತೊಡಗಿದೆ.

     ಈ ಬಾರಿಯ 2023ರ ಚುನಾವಣೆ ಈ ಹಿಂದಿನ ಎಲ್ಲಾ ಚುನಾವಣೆಗಳಿಗೂ ವಿಭಿನ್ನವಾಗಿದ್ದು, ಪ್ರತಿ ಬಾರಿ ಕಾಂಗ್ರೆಸ್ ಹಾಗೂ ಜೆಡಿಎಸ್‌ಗೆ ನೇರ ಹಣಾಹಣೆ ಏರ್ಪಟ್ಟು ಕಾಂಗ್ರೆಸ್ ಅಥವಾ ಜೆಡಿಎಸ್ ಗೆಲುವು ಸಾಧಿಸುತ್ತಿದ್ದುದು ಸಾಮಾನ್ಯವಾಗಿತ್ತು. ಆದರೆ ಈ ಬಾರಿ ಬಿಜೆಪಿ ಕ್ಷೇತ್ರದಲ್ಲಿ ತನ್ನ ವರ್ಚಸ್ಸನ್ನ ಹೆಚ್ಚಿಸಿಕೊಳ್ಳಲು ಹೆಚ್ಚು ಶ್ರಮವಹಿಸಿ ತನ್ನದೇ ಆದಂತಹ ಮತದಾರರನ್ನು ಸೆಳೆಯುವಲ್ಲಿ ಯಶಸ್ಸು ಕಾಣುತ್ತಿದೆ. ಈ ಬಾರಿ ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ತ್ರಿಕೋನ ಸ್ಪರ್ಧೆ ಏರ್ಪಡುವಂತಹ ಎಲ್ಲಾ ಲಕ್ಷಣಗಳು ಕ್ಷೇತ್ರದಲ್ಲಿ ಕಂಡುಬರುತ್ತ್ತಿದೆ.

     ಕಾಂಗ್ರೆಸ್‌ನಿಂದ ಅಭ್ಯರ್ಥಿಯಾಗಿ ಡಾ. ಜಿ. ಪರಮೇಶ್ವರ್ ಚುನಾವಣೆ ತಂತ್ರಗಾರಿಕೆ ಹೆಣೆಯುತ್ತಿದ್ದಾರೆ. ಜೆಡಿಎಸ್‌ನಿಂದ ಸಹ ಯಾವುದೇ ಗೊಂದಲವಿಲ್ಲದೆ ಮಾಜಿ ಶಾಸಕ ಪಿ.ಆರ್ ಸುಧಾಕರ್‌ಲಾಲ್ ಅಧಿಕೃತ ಅಭ್ಯರ್ಥಿಯಾಗಿದ್ದು, ಇತ್ತೀಚೆಗೆ ಜಿಲ್ಲಾ ಪಂಚಾಯತಿ ಕ್ಷೇತ್ರ ಸ್ಪರ್ಧಾಕಾಂಕ್ಷಿಯಾದ ಆದಿ ಕರ್ನಾಟಕ ಸಮುದಾಯದ ಮುನಿಯಪ್ಪ ತಾವೂ ಕೂಡ ಜೆಡಿಎಸ್ ಆಕಾಂಕ್ಷಿ ಎನ್ನುವ ಮೂಲಕ ಒಂದಷ್ಟು ಗೊಂದಲ ಸೃಷ್ಟಿಸಿದ್ದರು. ಆದರೆ ಜೆಡಿಎಸ್ ಹೈಕಮಾಂಡ್ ಹಂತದಲ್ಲಿ ಪಿ.ಆರ್. ಸುಧಾಕರ್‌ಲಾಲ್ ಅಭ್ಯರ್ಥಿಯಾಗಿ ದ್ದಾರೆ. ಇನ್ನೂ ಬಿಜೆಪಿಯಲ್ಲಿ ಟಿಕೆಟ್ ದೊಡ್ಡ ಗೊಂದಲವಾಗಿದ್ದು 5-6 ಮಂದಿ ಬಿಜೆಪಿಯಿಂದ ಕ್ಷೇತ್ರದಲ್ಲಿ ಹಲವು ಬಾರಿ ಸುತ್ತಾಡಿ, ನಂತರ ಮೂರು ಮಂದಿ ಪ್ರಬಲ ಆಕಾಂಕ್ಷಿಗಳಾಗಿ ಬಿಜೆಪಿಯಿಂದ ಕ್ಷೇತ್ರದಲ್ಲಿ ಸುತ್ತಾಡಿ, ಅಂತಿಮವಾಗಿ ಇಬ್ಬರು ಮಾತ್ರ ಕಚೇರಿ ತೆರೆದು ಕ್ಷೇತ್ರದ ಜನರೊಟ್ಟಿಗೆ ಬೆರೆಯುತ್ತಿರುವುದು ಸಾಮಾನ್ಯವಾಗಿದೆ.

      2018ರ ಚುನಾವಣೆ ರಾಜ್ಯ ರಾಜಕಾರಣದಲ್ಲಿ ವಿಭಿನ್ನ ದಿಕ್ಕನ್ನೇ ತೋರಿಸಿ ಯಾವುದೇ ಸರ್ಕಾರ ಅಧಿಕಾರ ಹಿಡಿಯುವಷ್ಟು ಬಹುಮತ ಬಾರದ ಸಂದರ್ಭದಲ್ಲಿ ಸಮ್ಮಿಶ್ರ ಸರ್ಕಾರ ರಚನೆಯಾಗಿ ಕಾಂಗ್ರೆಸ್ ಹಾಗೂ ಜೆಡಿಎಸ್ ಸಮ್ಮಿಲನದೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿದ ಸಂದರ್ಭದಲ್ಲಿ ಕಾಂಗ್ರೆಸ್ನ ಮುಂಚೂಣಿ ನಾಯಕರಾಗಿ ಉಪಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸಿ ರಾಜಕಾರಣದಲ್ಲಿ ಬಹಳ ದೊಡ್ಡ ಜವಾಬ್ದಾರಿ ಹೊತ್ತು ಸಮ್ಮಿಶ್ರ ಸರ್ಕಾರದಲ್ಲಿ ಕಾಂಗ್ರೆಸ್ ಒಂದು ಹಂತದಲ್ಲಿ ಪರಮೇಶ್ವರ್ ನೇತೃತ್ವದಲ್ಲಿಯೇ ಕೆಲವೊಂದು ನಿರ್ಧಾರ ತೆಗೆದುಕೊಳ್ಳುವ ಅಂತದಲ್ಲಿ ಮುನ್ನಡೆಸಿಕೊಂಡು ಹೋಗುವಂತಹ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ಕಾಂಗ್ರೆಸ್ ನ ಸಚಿವರು ಹಾಗೂ ಶಾಸಕರುಗಳು ಪಕ್ಷಾಂತರ ಮಾಡಿ ಬಿಜೆಪಿಗೆ ಬೆಂಬಲ ಸೂಚಿಸಿ ಸಮ್ಮಿಶ್ರ ಸರ್ಕಾರವನ್ನು ಬೀಳಿಸಿದ್ದಂತ ಸಂದರ್ಭವನ್ನು ಈ ಸಂದರ್ಭದಲ್ಲಿ ಅವಲೋಕಿಸಿ ಪರಮೇಶ್ವರ ಅವರು ರಾಜ್ಯ ರಾಜಕಾರಣದಲ್ಲಿ ಮುಂಚೂಣಿ ನಾಯಕ ಹಾಗೂ ಈ ಕ್ಷೇತ್ರ ಪರಮೇಶ್ವರ್ ಪ್ರತಿನಿಧಿಸುವುದರಿಂದ ಹೈ ವೋಲ್ಟೇಜ್ ಕ್ಷೇತ್ರ ಎಂದು ಪ್ರತಿಬಿಂಬಿಸಬಹುದಾಗಿದೆ.

    ಕಾಂಗ್ರೆಸ್ನ ಪರಮೇಶ್ವರ್ ಒಂದಷ್ಟು ಬದಲಾವಣೆಯಾಗಿರುವುದು ಸಹಜ, ಈ ಹಿಂದೆ ಪರಮೇಶ್ವರ್ ಯಾರಿಗೂ ಸಿಗೋದಿಲ್ಲ, ಜನರ ಬಳಿ ಹೋಗೋದಿಲ್ಲ, ಬೆಂಗಳೂರಿಗೆ ಹುಡ್ಕೊಂಡು ಹೋದ ಜನಸಾಮಾನ್ಯರಿಗೆ ದರ್ಶನದ ಭಾಗ್ಯವಿಲ್ಲ, ಜನರು ಇರುವ ಸಂದರ್ಭದಲ್ಲಿ ಕಾರಿನ ಗ್ಲಾಸ್ ಎತ್ತಿಕೊಂಡು ಮಾತನಾಡಿಸದೆ ಕಾರ್ಯಕರ್ತರನ್ನು ಕಂಡು ಕಾಣದಂತೆ ಓಡಾಡುತ್ತಾರೆ, ವೈಟ್ ಕಾಲರ್ ರಾಜಕಾರಣಿ ಎಂದೆಲ್ಲಾ ಕರಿಯುತ್ತಿದ್ದಂತ ಕಾಲ ಸದ್ಯಕ್ಕೆ ದೂರವಾಗಿದೆ, ಡಾಕ್ಟರ್ ಜಿ ಪರಮೇಶ್ವರ್ ಹಳ್ಳಿಗಳ ಕಡೆ ಮುಖ ಮಾಡಿದ್ದಾರೆ, ಜನಸಾಮಾನ್ಯರ ಬಳಿ ತೆರಳುವುದು ಒಂದಿಷ್ಟು ಜನಸಾಮಾನ್ಯರಿಗೆ ಪರಮೇಶ್ವರ್ ಕೈಗೆಟಗುವಂತಾಗೀದ್ದಾರೆ,

    ಮೊದಲಿನಷ್ಟು ಸಾರ್ವಜನಿಕವಾಗಿ ವಿರೋಧಾಲೆ ಒಂದು ಅಂತಕ್ಕೆ ಕಡಿಮೆ ಇದ್ದು, ಅಭಿವೃದ್ಧಿ ಕೆಲಸಗಳ ನೆಪದಲ್ಲಿ ಒಂದಲ್ಲ ಒಂದು ವಿಚಾರದಲ್ಲಿ ಎಡತಾಗುತ್ತಿದ್ದಾರೆ, ಇದು ಸದ್ಯಕ್ಕೆ ಸಾರ್ವಜನಿಕವಾಗಿ ಹಿಂದಿನ ಪರಮೇಶ್ವರ ಅಲ್ಲ ಬದಲಾಗಿದ್ದಾರೆ ಒಂದಷ್ಟು ಬದಲಾವಣೆಯಾಗಿದ್ದಾರೆ ಎನ್ನುವ ಒಂದಷ್ಟು ಉತ್ತಮ ವಾತಾವರಣ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದ್ದು, ಈಗ ವಿರೋಧ ಪಕ್ಷದವರಿಗೆ ಅವರ ವಿರೋಧಿಗಳಿಗೆ ಪರಮೇಶ್ವರ್ ವಿರುದ್ಧವಾಗಿ ಮಾತನಾಡಲು ಅಷ್ಟಾಗಿ ಆರೋಪಗಳು ಇಲ್ಲ ಎನ್ನುವಂತ ವಾತಾವರಣವಿದ್ದು ಉಪಮುಖ್ಯಮಂತ್ರಿಯಾಗಿದ್ದಾಗ ಒಂದಷ್ಟು ಕೆಲಸ ಮಾಡಬೇಕಿತ್ತು ಮಾಡ್ಲಿಲ್ಲ ಎಂಬ ಸಣ್ಣಪುಟ್ಟ ಆರೋಪ ಮಾತ್ರ ಪರಮೇಶ್ವರ್ ಮೇಲೆ ಕೇಳಿ ಬರುತ್ತಿರುವುದು ಸಾಮಾನ್ಯ,

     ಉಳಿದಂತೆ ಜೆಡಿಎಸ್ ನಲ್ಲಿ ಪಿ ಆರ್ ಸುಧಾಕರ್ ಲಾಲ್ ಗೆ ಈ ಹಿಂದೆ ಸೋತಿರುವ ಸಿಂಪತಿ ಸ್ವಲ್ಪ ಮಟ್ಟಕ್ಕೆ ಜನರಲ್ಲಿದೆ ಸುಧಾಕರ್ ಲಾಲ್ ಎಲ್ಲರೊಂದಿಗೆ ಬೆರೆಯುವಂತಹ ಮನುಷ್ಯ, ಎಲ್ಲಾ ಕಾರ್ಯಕ್ರಮಗಳನ್ನು ಭಾಗವಹಿಸುವ ಜನಸಾಮಾನ್ಯರ ಬಳಿ ಬರುವ ಒಂದಿಷ್ಟು ಜನಸಾಮಾನ್ಯರ ಸಮಸ್ಯೆ ಆಲಿಸುವ ವ್ಯವಧಾನವಿರುವ ರಾಜಕಾರಣಿ ಎಂದು ಒಂದಷ್ಟು ಜನ ಸುಧಾಕರ್ ಲಾಲ್ ಪರವಾಗಿ ಮಾತನಾಡುವುದು ಉಂಟು ಇದರಲ್ಲಿ ಒಂದಷ್ಟು ಹಿನ್ನಡೆಯ ವಿಚಾರವೆಂದರೆ ಪರಮೇಶ್ವರ್ ಗೆದ್ದರೆ ಮುಖ್ಯಮಂತ್ರಿ ಇಲ್ಲವೇ ಉನ್ನತ ಹುದ್ದೆಯ ಮಂತ್ರಿ ಆಗುವುದು ನಿಶ್ಚಿತ ಇದರಿಂದ ಕ್ಷೇತ್ರ ಅಭಿವೃದ್ಧಿಯಾಗಲಿದೆ ಸುಧಾಕರ್ ಲಾಲ್ ಗೆದ್ರೆ ಕೇವಲ ಶಾಸಕರಾಗಿ ಇರಲಿದ್ದಾರೆ ಎಂಬುದು ಜನಸಾಮಾನ್ಯರ ವಾದ ಇನ್ನೂ ಕೆಲವರು ಸುಧಾಕರ್ ಲಾಲ್ ಗೆದ್ದರೆ ನಾವು ಗೆದ್ದಂತೆ ನಮ್ಮ ಕೆಲಸ ಬಹಳ ಹತ್ತಿರದಿಂದ ಆಲಿಸುವಂತ ವ್ಯಕ್ತಿ ಪರಮೇಶ್ವರ್ ಕೆಲಸ ಕೇಳಲು ಒಂದಷ್ಟು ಅಡೆತಡೆಗಳು ಇರುತ್ತವೆ ಅವರು ರಾಜ್ಯ ರಾಜಕಾರಣದಲ್ಲಿ ಉನ್ನತ ಸ್ಥಾನದಲ್ಲಿ ಇರುವಂತ ವ್ಯಕ್ತಿಯಾಗಿರುವುದರಿಂದ ಅವರ ಬಳಿ ಹೋಗಿ ಕೆಲಸ ಮಾಡಿಕೊಳ್ಳುವುದು ಕಷ್ಟ ಎಂಬುದೇ ಒಂದು ದೊಡ್ಡ ನೆಗೆಟಿವ್ ಪರಮೇಶ್ವರ ಅವರಿಗೆ ಎನ್ನಲಾಗುತ್ತಿದೆ, ಉಳಿದಂತೆ ಬಿಜೆಪಿ ಯಾರಿಗೆ ಟಿಕೆಟ್ ಕೊಡಲಿದ್ದಾರೆ ಎಂಬುದರ ಮೇಲೆ ಅಭ್ಯರ್ಥಿಗಳ ಹಣೆ ಬರ ನಿರ್ಧಾರವಾಗಲಿದೆ ಎಂಬ ವಾದ ಸಹಾಯ ಕೇಳಿ ಬರುತ್ತದೆ,

    ಇನ್ನು ಬಿಜೆಪಿ ಕೊರಟಗೆರೆ ಕ್ಷೇತ್ರದಲ್ಲಿ ಒಡೆದ ಮನೆಯಾಗಿದ್ದು, ಆಕಾಂಕ್ಷಿಗಳ ದಂಡೆ ಬಿಜೆಪಿಯಲ್ಲಿ ಹನುಮನ ಬಾಲದಂತೆ ಬೆಳೆದಿದ್ದು, ಇವರ ಅಸಮಾಧಾನ ಸ್ಪೋಟ ಮುಂದಿನ ದಿನಗಳಲ್ಲಿ ಬಿಜೆಪಿಗೆ ಮುಳ್ಳಾಗಬಹುದು ಎಂಬ ಆತಂಕ ಬಿಜೆಪಿ ಗಟ್ಟಿಯಾಗಿ ಸಂಘಟನೆ ಮಾಡುವವರಿಗೆ ತಲೆ ನೋವಾಗಿ ಪರಿಣಮಿಸುತ್ತಿದೆ, ಇದನ್ನ ನಿಭಾಯಿಸುವುದೇ ತಾಲೂಕ್ ಹಾಗೂ ಜಿಲ್ಲಾಧ್ಯಕ್ಷರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದ್ದು,

    ಹಲವು ಬಾರಿ ಜಿಲ್ಲಾಧ್ಯಕ್ಷರಾದ ಬಿಕೆ ಮಂಜುನಾಥ್ ಆಕಾಂಕ್ಷಿಗಳನ್ನೆಲ್ಲ ಒಂದೆಡೆ ಸೇರಿಸಿ ಒಗ್ಗಟ್ಟಿನ ಮಂತ್ರ ಪಡಿಸುವ ರೀತಿಯಲ್ಲಿ ಒಗ್ಗಟ್ಟಿನಿಂದ 6 ಜನರನ್ನ ಫೋಟೋ ಸೆಶನ್ ನಲ್ಲಿ ಕೂರಿಸಿ ಫೋಟೋಗಳನ್ನು ಬಿಜೆಪಿ ವಲಯದಲ್ಲಿ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಅರಿಬಿಟ್ಟು ನಾವು ಬಿಜೆಪಿಯಲ್ಲಿ ಒಟ್ಟಾಗಿದ್ದೇವೆ ಯಾರಿಗೆ ಟಿಕೆಟ್ ನೀಡಿದರು ಒಗ್ಗಟ್ಟಾಗಿ ಕೆಲಸ ಮಾಡಲಿದ್ದಾರೆ ಎಂದು ಹಲವು ಬಾರಿ ಜಿಲ್ಲಾಧ್ಯಕ್ಷರು ಹೇಳಿಕೆ ನೀಡುತ್ತಿದ್ದರು ಸಹ ಬಿಜೆಪಿ ಆಕಾಂಕ್ಷಿಗಳು ತಮ್ಮ ಮಟ್ಟಿಗೆ ತಾವು ಕೆಲವರು ಸಂಘಟನೆಯಲ್ಲಿ ತೊಡಗಿಕೊಂಡು ನಮಗೆ ಟಿಕೆಟ್ ಎನ್ನುವ ರೀತಿಯಲ್ಲಿ ಬೀಗುತ್ತಿರುವುದು ಸರ್ವೆ ಸಾಮಾನ್ಯವಾಗಿದೆ.

    ಕೊರಟಗೆರೆ ಕ್ಷೇತ್ರದಲ್ಲಿ ಬಿಜೆಪಿ ಮೊದಲ ಹಂತದಲ್ಲಿ ಮಾಜಿ ಶಾಸಕರಾದ ಗಂಗಹನುಮಯ್ಯ, ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಹುಚ್ಚಯ್ಯ, ಪೆದ್ದರಾಜು ಕಳೆದ ಚುನಾವಣೆಗಳಲ್ಲಿ ಬಿಜೆಪಿಯಿಂದ ಸ್ಪರ್ಧೆ ಮಾಡಿ ಗಂಗ ಹನುಮಯ್ಯ 30,000 ಮತ ಗಳಿಸಿದ್ದು ಬಿಟ್ಟರೆ ಅದೇ ಸಮುದಾಯದ ಹುಚ್ಚಯ್ಯ 12000 ಉಳಿದಂತೆ ಪೆದ್ದರಾಜು ಕೇವಲ ಮೂರು ನಾಲ್ಕು ಸಾವಿರ ಮತ ಪಡೆಯುವ ಮೂಲಕ ಠೇವಣಿ ಸಹ ಕಳೆದುಕೊಂಡಂತದ್ದು ಕೊರಟಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ನೆಲೆ ಇಲ್ಲ ಎನ್ನುವಂತೆ ಕಾರ್ಯಕರ್ತರನ್ನ ಕಂಗೆಡುವ ರೀತಿಯಲ್ಲಿ ಪರಿಸ್ಥಿತಿ ಮೂಡಿಬಂದದ್ದು,

     ಕಾಂಗ್ರೆಸ್ ಹಾಗೂ ಜೆಡಿಎಸ್ ಗೆ ಅನಿವಾರ್ಯವಾಗಿ ಬಿಜೆಪಿಯ ಕಾರ್ಯಕರ್ತರು ಸಮರ್ಥ ನಾಯಕರಿಲ್ಲದ ಕಾರಣ ವಿಧಿ ಇಲ್ಲದೆ ಕಾಂಗ್ರೆಸ್ ಹಾಗೂ ಜೆಡಿಎಸ್ಗೆ ಮತ ಚಲಾಯಿಸುವ ಅನಿವಾರ್ಯತೆ ಒದಗಿದನ್ನ ನೆನಪಿಸಿಕೊಳ್ಳಬಹುದು, ಈಗ ಪ್ರಸಕ್ತವಾಗಿ ಕೊರಟಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಸಮರ್ಥ ನಾಯಕನಿಗೆ ಟಿಕೆಟ್ ನೀಡಿ ಎಂದು ಕಾರ್ಯಕರ್ತರ ಹಾಗೂ ಮುಖಂಡರುಗಳು ಬಿಜೆಪಿಗೆ ಒತ್ತಡ ಹಾಕುತ್ತಿರುವುದು ಸರ್ವೇಸಾಮಾನ್ಯವಾಗಿದೆ,

     ಕೊರಟಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಲ್ಲಿ ಒಂದಷ್ಟು ಸ್ಥಿತಿವಂತ ಅಭ್ಯರ್ಥಿಯನ್ನ ಹುಡುಕುವ ಸಂದರ್ಭದಲ್ಲಿ ತುಮಕೂರಿನ ಸೂರ್ಯ ಆಸ್ಪತ್ರೆಯ ಡಾ. ಲಕ್ಷಿ ಕಾಂತ್ ಒಂದು ರೀತಿ ಹೊಸ ಚೈತನ್ಯ ರೂಪದಲ್ಲಿ ಕ್ಷೇತ್ರದಲ್ಲಿ ಕಂಡರಾದ್ರು ಕಳೆದ ಬಾರಿ ಹುಚ್ಚಯ್ಯನ ವಿರುದ್ಧವಾಗಿ ಟಿಕೆಟ್ ಪಡೆಯುವಲ್ಲಿ ಯಶಸ್ವಿ ಕಾಣ್ಲಿಲ್ಲ ಜೊತೆಗೆ ಡಾ ಲಕ್ಷಿ ಕಾಂತ್ ಅವರನ್ನ ಪಾವಗಡಕ್ಕೆ ಹೋಗುವಂತೆ ಒಂದು ಹಂತದಲ್ಲಿ ಸೂಚಿಸಿದಾಗ ಅವರು ಕೊರಟಗೆರೆ ಗೆ ಕೊಡುವುದಾದರೆ ಟಿಕೆಟ್ ನೀಡಿ ಪಾವಗಡಕ್ಕೆ ಹೋಗುವುದಿಲ್ಲ ಎಂದು ತಿರಸ್ಕರಿಸಿ ಕೊರಟಗೆರೆ ಟಿಕೆಟ್ ನೀಡುವಂತೆ ಈ ಬಾರಿಯೂ ಟಿಕೆಟ್ ಗಾಗಿ ಹೈಕಮಾಂಡ್ ಅಂತದಲ್ಲಿಯೂ ಲಾಭಿಯಲ್ಲಿ ತೊಡಗಿರುವುದು ಕಂಡುಬರುತ್ತದೆ,

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap