ಮುಂಬೈ:
ಬಾಲಿವುಡ್ ನಟಿ ತೃಪ್ತಿ ದಿಮ್ರಿ ಮುಂಬೈನಲ್ಲಿ ತನ್ನ ಗೆಳೆಯ ಸ್ಯಾಮ್ ಮರ್ಚೆಂಟ್ ಅವರೊಂದಿಗೆ ಬೈಕ್‍ನಲ್ಲಿ ಲಾಂಗ್ ರೈಡ್ ಹೋಗೂವ ಮೂಲಕ ಸಖತ್ ಎಂಜಾಯ್ ಮಾಡಿದ್ದಾರೆ. ಆದರೆ ನಟಿ ಸ್ಯಾಮ್ ಬೈಕ್ ಸ್ಟಾರ್ಟ್ ಮಾಡುತ್ತಿದ್ದಂತೆ ಮುಖಕ್ಕೆ ಮಾಸ್ಕ್ ಹಾಕಿಕೊಂಡಿದ್ದಾರೆ. ಸ್ಯಾಮ್ ಅವರ ಹೋಂಡಾ ಎಕ್ಸ್ ಎಡಿವಿ 750 ಬೈಕ್‍ನಲ್ಲಿ ತೃಪ್ತಿ ಹಿಂಬದಿಯಲ್ಲಿ ಕುಳಿತುಕೊಂಡು ಸವಾರಿ ಮಾಡುತ್ತಿರುವ ವಿಡಿಯೊಗಳು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿವೆ.
ಈ ಬೈಕ್ ಅರುಣಾಚಲ ಪ್ರದೇಶದಲ್ಲಿ ನೋಂದಣಿಯಾಗಿದ್ದು, ಇದರ ಬೆಲೆ 12 ಲಕ್ಷ ರೂ ಎನ್ನಲಾಗಿದೆ. ತೃಪ್ತಿ ಮತ್ತು ಸ್ಯಾಮ್ ಇಬ್ಬರೂ ಬಿಳಿ ಮತ್ತು ನೀಲಿ ಬಣ್ಣದ ಬಟ್ಟೆಗಳನ್ನು ಧರಿಸಿಕೊಂಡು ಮ್ಯಾಚಿಂಗ್ ಮಾಡಿದ್ದರು. ಸ್ಯಾಮ್ ಬಿಳಿ ಶರ್ಟ್ ಮತ್ತು ತಿಳಿ ನೀಲಿ ಜೀನ್ಸ್ ಧರಿಸಿದ್ದರೆ, ನಟಿ ಬಿಳಿ ಟಾಪ್ ಮತ್ತು ನೇವಿ ಬ್ಲೂ ಪ್ಯಾಂಟ್‍ನಲ್ಲಿ ಧರಿಸಿದ್ದರು. ಜೊತೆಗೆ ಅವರು ತನ್ನ ಮುಖವನ್ನು ಕಪ್ಪು ಬಣ್ಣದ ಮಾಸ್ಕ್‌ನಿಂದ ಮುಚ್ಚಿಕೊಂಡಿದ್ದಾರೆ. ಕ್ಯಾಮೆರಾಗಳಿಂದ ತಪ್ಪಿಸಿಕೊಳ್ಳಲು ಅವರು ತನ್ನ ಮುಖವನ್ನು ಕ್ಯಾಮೆರಾಗಳಿಂದ ಮರೆಮಾಚಿದ್ದಾರೆ.
ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಬಳಿಕ , ನೆಟ್ಟಿಗರು ಮುಂಬೈ ಟ್ರಾಫಿಕ್ ದಟ್ಟಣೆಯಲ್ಲಿ ಇಬ್ಬರೂ ಹೆಲ್ಮೆಟ್ ಇಲ್ಲದೆ ಹೇಗೆ ಸವಾರಿ ಮಾಡಿದ್ದಾರೆ. ಇದರಿಂದಾಗಿ ಪ್ರಮುಖ ನಿಯಮವನ್ನು ಉಲ್ಲಂಘಿಸಿದ್ದಾರೆ ಎಂದು ಟೀಕಿಸಿದ್ದಾರೆ. “ಹೆಲ್ಮೆಟ್ ಎಲ್ಲಿದೆ?” ಎಂದು ಬಳಕೆದಾರರೊಬ್ಬರು ಇನ್ಸ್ಟಾಗ್ರಾಂನಲ್ಲಿ ಕೇಳಿದರೆ, ಇನ್ನೊಬ್ಬರು “ಇಂತಹ ವಿದ್ಯಾವಂತ ಜನರು ಹೆಲ್ಮೆಟ್ ಧರಿಸದಿರುವುದನ್ನು ನೋಡಿ ದುಃಖವಾಗಿದೆ” ಎಂದು ಬರೆದಿದ್ದಾರೆ.
ತೃಪ್ತಿ ಮತ್ತು ಸ್ಯಾಮ್ ತಮ್ಮ ಸಂಬಂಧವನ್ನು ಸಾರ್ವಜನಿಕವಾಗಿ ಘೋಷಿಸದಿದ್ದರೂ, ಇಬ್ಬರೂ ಆಗಾಗ್ಗೆ ನಗರದಲ್ಲಿ ಸುತ್ತಾಡುತ್ತಾ ಡಿನ್ನರ್ ಡೇಟಿಂಗ್ ಅನ್ನು ಆನಂದಿಸುತ್ತ ಮತ್ತು ತಮ್ಮ ರಜಾ ದಿನಗಳಲ್ಲಿ ಒಟ್ಟಿಗೆ ಕಳೆಯುತ್ತಾರೆ.ಈ ನಡುವೆ ತೃಪ್ತಿ ಅನಿಮಲ್ ಚಿತ್ರದ ಒಂದು ವರ್ಷದ ಸಂಭ್ರಮವನ್ನು ಆಚರಿಸಿದ್ದಾರೆ. ಈ ಚಿತ್ರವು ಅವರನ್ನು “ನ್ಯಾಷನಲ್ ಕ್ರಶ್” ಆಗಿ ಮಾಡಿತು. “ಸೀಮ್ಸ್ ಲೈಕ್ ಎಸ್ಟರ್ಡೆ” ಎಂಬ ಶೀರ್ಷಿಕೆಯೊಂದಿಗೆ ಅನಿಮಲ್ ಚಿತ್ರದ ಸೆಟ್‍ಗಳಲ್ಲಿನ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಂ ಪೇಜ್‍ನಲ್ಲಿ ಹಂಚಿಕೊಂಡಿದ್ದಾರೆ.
ಅವರು ಹಲವಾರು ವರ್ಷಗಳಿಂದ ಶೋಬಿಜ್‍ನಲ್ಲಿದ್ದರೂ ಕೂಡ ಅವರು ಹೆಚ್ಚು ಜನಪ್ರಿಯವಾಗಿದ್ದು ಅನಿಮಲ್ ಚಿತ್ರದಿಂದ. ಈ ಚಿತ್ರದಲ್ಲಿ ಅವರು ಸಣ್ಣ ಪಾತ್ರ ಮಾಡಿದ್ದರೂ, ಆದರೆ ಈ ಮಹತ್ವದ ಪಾತ್ರವು ಅವರನ್ನು ರಾತ್ರೋರಾತ್ರಿ ಖ್ಯಾತಿ ಗಳಿಸುವಂತೆ ಮಾಡಿದೆ.