ಬೆಂಗಳೂರು : ದೇಶದ ಮೊದಲ ಟ್ರೂ ಕಾಲರ್‌ ಕಛೇರಿ ಆರಂಭ..!

ಬೆಂಗಳೂರು:

   ಜಗತ್ತಿನಲ್ಲಿ ಪ್ರಸಿದ್ಧವವಾಗಿರುವ ಕಾಲರ್ ಐಡಿ ವೆರಿಫಿಕೇಶನ್ ಪ್ಲಾಟ್‌ಫಾರ್ಮ್ ಟ್ರೂಕಾಲರ್  ಬೆಂಗಳೂರಿನಲ್ಲಿ ದೇಶದ ತನ್ನ ಮೊದಲ  ಕಚೇರಿಯನ್ನು ತೆರೆದಿದೆ.

    ಕೇಂದ್ರ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಮತ್ತು ಎಲೆಕ್ಟ್ರಾನಿಕ್ಸ್ ಹಾಗೂ ಮಾಹಿತಿ ತಂತ್ರಜ್ಞಾನ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಅವರು ಕಚೇರಿಯನ್ನು ವರ್ಚುವಲ್ ಇನ್ಯಾಗುರೇಷನ್‌  ಮೂಲಕ ಉದ್ಘಾಟಿಸಿದರು. ಕಂಪನಿಯು ಹೊರಡಿಸಿದ ಪತ್ರಿಕಾ ಪ್ರಕಟಣೆಯಲ್ಲಿ ಬೆಂಗಳೂರಿನ ಕಚೇರಿಯು 30,443 ಚದರ ಅಡಿಗಳಷ್ಟು ನವೀಕರಿಸಿದ ಜಾಗವನ್ನು ಹೊಂದಿದೆ ಮತ್ತು 250 ಉದ್ಯೋಗಿಗಳಿಗೆ ಅವಕಾಶ ಕಲ್ಪಿಸುತ್ತಿದೆ. ಇದು ಉನ್ನತ ತಂತ್ರಜ್ಞಾನ ಮತ್ತು ಇತರ ಸೌಕರ್ಯಗಳನ್ನು ನೀಡುತ್ತದೆ ಎಂದು ಹೇಳಿದೆ.

    ಭಾರತದಲ್ಲಿ ಮೊದಲ ವೈಶಿಷ್ಟ್ಯಗಳನ್ನು ತಲುಪಿಸಲು ಮತ್ತು ಜಾಗತಿಕವಾಗಿ ಬಳಕೆದಾರರಿಗೆ ಸೇವೆ ಸಲ್ಲಿಸಲು ಟ್ರೂಕಾಲರ್ ಈ ಸೌಲಭ್ಯವನ್ನು ತನ್ನ ಪ್ರಾಥಮಿಕ ಕೇಂದ್ರವಾಗಿ ಬಳಸಲು ಯೋಜಿಸಿದೆ ಎಂದು ಪ್ರಕಟಣೆ ತಿಳಿಸಿದೆ.

    ಈ ಕಛೇರಿಯು ಸ್ವೀಡನ್‌ನ ಸ್ಟಾಕ್‌ಹೋಮ್‌ನಲ್ಲಿರುವ ಅದರ ಪ್ರಧಾನ ಕಛೇರಿಯ ನಂತರ ಟ್ರೂಕಾಲರ್ ನ ಅತಿ ದೊಡ್ಡ ಕಚೇರಿಯಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap