ಭಾರತ ಸುಂಕ ಕಡಿತಗೊಳಿಸಲು ನಿರ್ಧರಿಸಿದೆ: ಟ್ರಂಪ್‌

ವಾಷಿಂಗ್ಟನ್‌: 

    ಭಾರತ ಸುಂಕ ಕಡಿತಗೊಳಿಸಲು ನಿರ್ಧರಿಸಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ತಿಳಿಸಿದ್ದಾರೆ.ಅಮೆರಿಕದ ಆಮದುಗಳ ಮೇಲೆ ‘ಭಾರಿ ಸುಂಕ’ ವಿಧಿಸುತ್ತಿದ್ದ ಭಾರತವು, ಸುಂಕಗಳನ್ನು ಗಣನೀಯವಾಗಿ ಕಡಿತಗೊಳಿಸಲು ಒಪ್ಪಿಕೊಂಡಿದೆ ಎಂದಿದ್ದಾರೆ.ಭಾರತ ನಮ್ಮ ಮೇಲೆ ಭಾರಿ ಸುಂಕ ವಿಧಿಸುತ್ತಿದೆ. ಭಾರತದಲ್ಲಿ ಏನನ್ನೂ ಮಾರಾಟ ಮಾಡಲು ಸಾಧ್ಯವಿಲ್ಲ. ಅಂದಹಾಗೆ, ಅವರು ಸುಂಕ ಕಡಿತಕ್ಕೆ ಒಪ್ಪಿಕೊಂಡಿದ್ದಾರೆ. ಅವರು ಈಗ ತಮ್ಮ ಸುಂಕವನ್ನು ಕಡಿಮೆ ಮಾಡಲು ಬಯಸುತ್ತಾರೆ ಎಂದಿದ್ದಾರೆ

    ಅಮೆರಿಕದಿಂದ ಕಿತ್ತುಕೊಳ್ಳಲಾಗಿದೆ, ನಿಜಕ್ಕೂ ಅನ್ಯಾಯವಾಗಿದೆ. ಅದನ್ನು ನಾವು ತಡೆಯುತ್ತೇವೆ. ಪ್ರಸುತ್ತ ಸುಂಕುಗಳು ತಾತ್ಕಾಲಿಕ ಮತ್ತು ಸಣ್ಣವು. ಏಪ್ರಿಲ್ 2 ರಿಂದ ದೊಡ್ಡ ಬದಲಾವಣೆ ಎಂದು ಟ್ರಂಪ್‌ ತಿಳಿಸಿದ್ದಾರೆ.ಅಮೆರಿಕ ಜೊತೆಗಿನ ಯೋಜಿತ ದ್ವಿಪಕ್ಷೀಯ ವ್ಯಾಪಾರ ಒಪ್ಪಂದ (ಬಿಟಿಎ) ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ವ್ಯಾಪಾರವನ್ನು ಹೆಚ್ಚಿಸುವ ಸಾಧ್ಯತೆಯಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಶನಿವಾರ ಹೇಳಿದ್ದಾರೆ.

   ಎರಡೂ ಸರ್ಕಾರಗಳು ಬಹು-ವಲಯ ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ ಕುರಿತು ಚರ್ಚೆಗಳನ್ನು ಮುಂದುವರಿಸುವ ಪ್ರಕ್ರಿಯೆಯಲ್ಲಿವೆ. ಬಿಟಿಎ ಮೂಲಕ, ಸರಕು ಮತ್ತು ಸೇವಾ ವಲಯದಲ್ಲಿ ಭಾರತ-ಯುಎಸ್ ದ್ವಿಮುಖ ವ್ಯಾಪಾರವನ್ನು ಬಲಪಡಿಸುವುದು, ಮಾರುಕಟ್ಟೆ ಪ್ರವೇಶವನ್ನು ಹೆಚ್ಚಿಸುವುದು, ಸುಂಕ ಮತ್ತು ಸುಂಕ ರಹಿತ ಅಡೆತಡೆಗಳನ್ನು ಕಡಿಮೆ ಮಾಡುವುದು, ಎರಡೂ ದೇಶಗಳ ನಡುವೆ ಪೂರೈಕೆ ಸರಪಳಿ ಏಕೀಕರಣವನ್ನು ಬಿಗಿಗೊಳಿಸುವುದು ನಮ್ಮ ಉದ್ದೇಶವಾಗಿದೆ ಎಂದು ತಿಳಿಸಿದ್ದಾರೆ.

Recent Articles

spot_img

Related Stories

Share via
Copy link