ಫಿಲಡೆಲ್ಫಿಯಾ:
ಅಮೆರಿಕಾ ಅಧ್ಯಕ್ಷೀಯ ಚುನಾವಣಾ ಕಣ ರಂಗೇರುತ್ತಿದೆ. ಇದೇ ಮೊದಲ ಬಾರಿಗೆ ಅಭ್ಯರ್ಥಿಗಳಾದ ಡೊನಾಲ್ಡ್ ಟ್ರಂಪ್ ಮತ್ತು ಕಮಲಾ ಹ್ಯಾರಿಸ್ ಸಾರ್ವಜನಿಕವಾಗಿ ಮುಖಾಮುಖಿ ಚರ್ಚೆ ನಡೆಸಿದ್ದಾರೆ.ಪರಸ್ಪರ ರಾಜಕೀಯ ಮತ್ತು ವ್ಯಕ್ತಿತ್ವದ ಮೇಲೆ ಕಿಡಿಕಾರಿರುವ ಕಮಲಾ ಹ್ಯಾರಿಸ್ ಮತ್ತು ಡೊನಾಲ್ಡ್ ಟ್ರಂಪ್ ಅವರು ದೇಶಕ್ಕಾಗಿ ತಮ್ಮ ವಿಭಿನ್ನ ದೃಷ್ಟಿಕೋನಗಳನ್ನು ಮುಂದಿಟ್ಟರು.
ಇಬ್ಬರೂ ಆರ್ಥಿಕತೆ, ಗರ್ಭಪಾತ ಹಕ್ಕುಗಳು, ಇಸ್ರೇಲ್-ಗಾಜಾ ಮತ್ತು ರಷ್ಯಾ-ಇವುಗಳ ಮೇಲೆ ಪರಸ್ಪರ ತೀವ್ರವಾಗಿ ಟೀಕೆಗಿಳಿದರು. ಉಕ್ರೇನ್ ಯುದ್ಧಗಳು, ವಲಸೆ ಕಾನೂನುಗಳು ಸಹ ಮಾತುಕತೆಗೆ ಬಂದವು.
ಟ್ರಂಪ್ ಬಿಡೆನ್-ಹ್ಯಾರಿಸ್ ಅವರನ್ನು ನಮ್ಮ ದೇಶದ ಇತಿಹಾಸದಲ್ಲಿ ಅತ್ಯಂತ ಕೆಟ್ಟ ಅಧ್ಯಕ್ಷರು, ಕೆಟ್ಟ ಉಪಾಧ್ಯಕ್ಷರು ಎಂದು ಕರೆದರೆ, ಕಮಲಾ ಹ್ಯಾರಿಸ್ ಅಮೇರಿಕನ್ ಜನರು ನಮ್ಮನ್ನು ಪ್ರತ್ಯೇಕಿಸುವುದಕ್ಕಿಂತ ಹೆಚ್ಚಿನದನ್ನು ಹೊಂದಿದ್ದೇವೆ ಎಂದು ನಮಗೆ ತಿಳಿದಿದೆ ಎಂದು ನಾನು ನಂಬುತ್ತೇನೆ. ನಾವು ಮುಂದೆ ಹೊಸ ಮಾರ್ಗವನ್ನು ದೇಶಕ್ಕೆ ಕಂಡುಹಿಡಿಯುತ್ತೇವೆ ಎಂದರು.
ಈ ಹಿಂದೆ ಡೊನಾಲ್ಡ್ ಟ್ರಂಪ್ ಅವರು ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಮಹಾ ಆರ್ಥಿಕ ಕುಸಿತದ ನಂತರ ರಾಷ್ಟ್ರವನ್ನು ಕೆಟ್ಟ ಉದ್ಯೋಗದ ಸ್ಥಿತಿಗೆ ತಂದರು ಎಂದು ಕಮಲಾ ಹ್ಯಾರಿಸ್ ಟೀಕಿಸಿದರು.