ಅಮೆರಿಕದ ವಾಯುನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದ ಇರಾನ್‌; ಟ್ರಂಪ್‌ ತುರ್ತು ಸಭೆ

ದೋಹಾ:

    ಭಾನುವಾರ ಇರಾನ್‌ ಇಸ್ರೇಲ್‌ನ   ಪರಮಾಣು ನೆಲೆಗಳ ದಾಳಿ ನೆಡಸಿದ ಬೆನ್ನಲ್ಲೇ ಇರಾನ್‌ ಇದೀಗ ಅಮೆರಿಕದ ವಾಯುನೆಲೆಗಳ ಮೇಲೆ ದಾಳಿಯನ್ನು ಮಾಡಿದೆ. ಸೋಮವಾರ ಕತಾರ್‌ನಲ್ಲಿರುವ ಅಮೆರಿಕದ ನೆಲೆಗಳ ಮೇಲೆ ಕನಿಷ್ಠ ಆರು ಕ್ಷಿಪಣಿಗಳನ್ನು ಹಾರಿಸಿತು. ಇರಾಕ್ ಮತ್ತು ಕತಾರ್‌ನಲ್ಲಿರುವ ಅಮೆರಿಕದ ನೆಲೆಗಳ ಮೇಲೆ ‘ಆಪರೇಷನ್ ಬಶರತ್ ಅಲ್-ಫಾತ್‌  ಎಂಬ ಹೆಸರಿನೊಂದಿಗೆ ಶುರು ಮಾಡಿದೆ. ಕತಾರ್‌ನಲ್ಲಿರುವ ಅಮೆರಿಕದ ನೆಲೆಯ ಮೇಲೆ ಇರಾನ್ ವೈಮಾನಿಕ ದಾಳಿ ಕುರಿತು ಇರಾನ್‌ನ ಸರ್ಕಾರಿ ಮಾಧ್ಯಮಗಳು ವರದಿ ಮಾಡಿವೆ.

    ಸೋಮವಾರ ರಾತ್ರಿ, ಕತಾರ್ ತನ್ನ ವಾಯುಪ್ರದೇಶವನ್ನು ಮುನ್ನೆಚ್ಚರಿಕೆಯಾಗಿ ಮುಚ್ಚಿದ ಸ್ವಲ್ಪ ಸಮಯದ ನಂತರ, ಕತಾರ್‌ನಲ್ಲಿರುವ ಅಲ್ ಉದೈದ್ ವಾಯುನೆಲೆಯಲ್ಲಿ ಬೀಡುಬಿಟ್ಟಿರುವ ಅಮೇರಿಕನ್ ಪಡೆಗಳ ಮೇಲೆ ಕ್ಷಿಪಣಿ ದಾಳಿಯನ್ನು ನಡೆಸಿದೆ ಎಂದು ಇರಾನ್ ಹೇಳಿದೆ. ಉಡಾಯಿಸಲಾದ ಕ್ಷಿಪಣಿಗಳ ಸಂಖ್ಯೆಯು ಯುಎಸ್ ಬಾಂಬ್‌ಗಳ ಸಂಖ್ಯೆಗೆ ಹೊಂದಿಕೆಯಾಗುತ್ತದೆ ಎಂದು ಇರಾನ್‌ನ ಸುಪ್ರೀಂ ರಾಷ್ಟ್ರೀಯ ಭದ್ರತಾ ಮಂಡಳಿ ಹೇಳಿದೆ. ಘಟನೆಯಲ್ಲಿ ಯಾವುದೇ ಸಾವು ನೋವುಗಳು ಸಂಭವಿಸಿಲ್ಲ. ಕ್ಷಿಪಣಿಗಳು ಬರುತ್ತಿದ್ದಂತೆ ಅದನ್ನು ಅಮೆರಿಕದ ಏರ್‌ಸಿಸ್ಟ್‌ಮ್‌ಗಳು ತಡೆ ಹಿಡಿದಿವೆ.

    ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಸ್ತುತ ಶ್ವೇತಭವನದ ಪರಿಸ್ಥಿತಿ ಕೋಣೆಯಲ್ಲಿ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಮತ್ತು ಜಂಟಿ ಮುಖ್ಯಸ್ಥರ ಅಧ್ಯಕ್ಷ ಜನರಲ್ ಡಾನ್ ಕೈನ್ ಚರ್ಚೆ ನಡೆಸುತ್ತಿದ್ದಾರೆ. ಪರಮಾಣು ಘಟಕಗಳ ಮೇಲೆ ನಡೆಸಿದ ದಾಳಿಯನ್ನು ಇರಾನ್ ಸುಪ್ರೀಂ ನಾಯಕ ಆಯತೊಲ್ಲಾ ಖಮೇನಿ ತೀವ್ರವಾಗಿ ಖಂಡಿಸಿದ್ದರು. ಶತ್ರುಗಳು ದೊಡ್ಡ ಅಪರಾಧ ಮಾಡಿದ್ದಾರೆ. ಆ ತಪ್ಪಿಗೆ ಶಿಕ್ಷೆ ಹೇಗೆ ನೀಡಬೇಕು ಎಂಬುದು ಇರಾನ್‌ಗೆ ಚೆನ್ನಾಗಿ ತಿಳಿದಿದೆ ಎಂದು ಖಮೇನಿ ಹೇಳಿದ್ದರು. 

   ಇಸ್ರೇಲ್‌ ದಾಳಿ ಪ್ರಾರಂಭವಾದ ಬಳಿಕ ಹತ್ಯೆಯ ಭೀತಿಯಿಂದ ಇರಾನಿನ ಸರ್ವೋಚ್ಚ ನಾಯಕ ಪ್ರಸ್ತುತ ಭೂಗತ ಬಂಕರ್‌ನಲ್ಲಿ ಅಡಗಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಅವರು ಹೆಚ್ಚಾಗಿ ತಮ್ಮ ಕಮಾಂಡರ್‌ಗಳೊಂದಿಗೆ ವಿಶ್ವಾಸಾರ್ಹ ಸಹಾಯಕರ ಮೂಲಕ ಮಾತನಾಡುತ್ತಾರೆ ಮತ್ತು ಎಲೆಕ್ಟ್ರಾನಿಕ್ ಸಂವಹನಗಳನ್ನು ಸ್ಥಗಿತಗೊಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

Recent Articles

spot_img

Related Stories

Share via
Copy link