ಭಾರತೀಯ ವಲಸಿಗರನ್ನು ಅಮೆರಿಕದಿಂದ ಗಡಿಪಾರು ಮಾಡಲು ಆರಂಭಿಸಿದ ಟ್ರಂಪ್

ಅಮೆರಿಕ

    ನೂತನ ಅಧ್ಯಕ್ಷರಾಗಿ ಡೊನಾಲ್ಡ್​ ಟ್ರಂಪ್ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಭಾರತೀಯ ವಲಸಿಗರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ. ಇತ್ತೀಚೆಗಷ್ಟೇ 500 ಕ್ಕೂ ಹೆಚ್ಚು ಅಕ್ರಮ ವಲಸಿಗರನ್ನು ಬಂಧಿಸಿದ್ದರು. ಇತ್ತೀಚೆಗಷ್ಟೇ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಟ್ರಂಪ್‌ ಹಲವು ಮಹತ್ವದ ಕಾರ್ಯಕಾರಿ ಆದೇಶಗಳಿಗೆ ಸಹಿ ಹಾಕಿದ್ದರು. ಈ ಪೈಕಿ ಅಕ್ರಮ ವಲಸಿಗರನ್ನು ಗಡಿಪಾರು ಮಾಡುವ ಆದೇಶವು ಪ್ರಮುಖವಾಗಿತ್ತು, ಇದೀಗ ಅದರ ಎರಡನೇ ಭಾಗದ ಕಾರ್ಯಾಚರಣೆ ನಡೆಯುತ್ತಿದೆ.

    ಅಕ್ರಮ ವಲಸಿಗರನ್ನು ಹೊತ್ತ ಮಿಲಿಟರಿ ವಿಮಾನ ಭಾರತಕ್ಕೆ ಹೊರಟಿದೆ. ಸಿ -17 ವಿಮಾನವು ವಲಸಿಗರೊಂದಿಗೆ ಭಾರತಕ್ಕೆ ಹೊರಟಿತ್ತು ಆದರೆ ಕನಿಷ್ಠ 24 ಗಂಟೆಗಳಾದರೂ ಅದು ತಲುಪಲಿಲ್ಲ ಎಂದು ಹೇಳಿದರು. ಅಮೆರಿಕದ ಇತಿಹಾಸದಲ್ಲಿಯೇ ಅತಿ ಹೆಚ್ಚು ಮಂದಿ ಅಕ್ರಮ ವಲಸಿಗರನ್ನು ಗಡಿಪಾರು ಮಾಡುವುದಾಗಿ ಟ್ರಂಪ್ ಪ್ರತಿಜ್ಞೆ ಮಾಡಿದ್ದರು. ವಿಮಾನದಲ್ಲಿ ಎಷ್ಟು ಮಂದಿ ಇದ್ದರು ಎಂಬುದಿನ್ನೂ ಸ್ಪಷ್ಟವಾಗಿಲ್ಲ.

   ಪ್ಯೂ ಸಂಶೋಧನಾ ಕೇಂದ್ರದ ಅಂಕಿಅಂಶಗಳ ಪ್ರಕಾರ, ಭಾರತದಿಂದ ಬಂದ ಸರಿಸುಮಾರು 725,000 ಅಕ್ರಮ ವಲಸಿಗರು ಅಮೆರಿಕದಲ್ಲಿ ವಾಸಿಸುತ್ತಿದ್ದಾರೆ , ಇದು ಮೆಕ್ಸಿಕೊ ಮತ್ತು ಎಲ್ ಸಾಲ್ವಡಾರ್ ನಂತರ ಅನಧಿಕೃತ ವಲಸಿಗರ ಮೂರನೇ ಅತಿದೊಡ್ಡ ಜನಸಂಖ್ಯೆಯಾಗಿದೆ. 

   ದಾಖಲೆರಹಿತ ಭಾರತೀಯರನ್ನು ತಮ್ಮ ದೇಶಕ್ಕೆ ಕಾನೂನುಬದ್ಧವಾಗಿ ಹಿಂದಕ್ಕೆ ಕರೆದುಕೊಳ್ಳಲು ಭಾರತ ಯಾವಾಗಲೂ ಸಿದ್ಧವಾಗಿದೆ ಎಂದು ರಾಯಭಾರ ಕಚೇರಿ ತಿಳಿಸಿತ್ತು. ಅಮೆರಿಕದಿಂದ ಯಾರನ್ನು ಭಾರತಕ್ಕೆ ಗಡೀಪಾರು ಮಾಡಬಹುದು ಎಂಬುದನ್ನು ಭಾರತ ಪರಿಶೀಲಿಸುತ್ತಿದೆ ಎಂದು ವಿದೇಶಾಂಗ ಸಚಿವ ಎಸ್​ ಜೈಶಂಕರ್ ಹೇಳಿದ್ದಾರೆ.

   ಪ್ರತಿಯೊಂದು ದೇಶದಲ್ಲೂ, ಮತ್ತು ಅಮೆರಿಕವೂ ಇದಕ್ಕೆ ಹೊರತಾಗಿಲ್ಲ, ನಮ್ಮ ನಾಗರಿಕರಲ್ಲಿ ಯಾರಾದರೂ ಅಕ್ರಮವಾಗಿ ಅಲ್ಲಿಗೆ ಬಂದರೆ ಮತ್ತು ಅವರು ನಮ್ಮ ನಾಗರಿಕರು ಎಂದು ನಮಗೆ ಖಚಿತವಾಗಿದ್ದರೆ, ಅವರು ಭಾರತಕ್ಕೆ ಕಾನೂನುಬದ್ಧವಾಗಿ ಮರಳಲು ನಾವು ಅವಕಾಶ ಮಾಡಿಕೊಡುತ್ತೇವೆ ಎಂದು ಹೇಳಿದ್ದಾರೆ.

   ಅಮೆರಿಕಕ್ಕೆ ಅಕ್ರಮವಾಗಿ ಹೋಗಿರುವ ಭಾರತೀಯ ವಲಸಿಗರನ್ನು ವಾಪಸ್ ಕರೆಸಿಕೊಳ್ಳುವ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಎಂದೂ ಸರಿಯಾದುದ್ದನ್ನೇ ಮಾಡುತ್ತಾರೆ ಎಂದು ಟ್ರಂಪ್ ಇತ್ತೀಚೆಗೆ ಹೇಳಿದ್ದರು. ಇಬ್ಬರು ನಾಯಕರ ನಡುವಿನ ದೂರವಾಣಿ ಕರೆಯ ನಂತರ ಈ ಹೇಳಿಕೆಗಳು ಬಂದಿದ್ದು, ಅವರು ಹಲವಾರು ವಿಷಯಗಳ ಬಗ್ಗೆ ಚರ್ಚಿಸಿದ್ದರು.

   ಟೆಕ್ಸಾಸ್‌ನ ಎಲ್ ಪಾಸೊ ಮತ್ತು ಕ್ಯಾಲಿಫೋರ್ನಿಯಾದ ಸ್ಯಾನ್ ಡಿಯಾಗೋದಲ್ಲಿ ಅಮೆರಿಕದ ಅಧಿಕಾರಿಗಳು ಬಂಧಿಸಿರುವ 5,000 ಕ್ಕೂ ಹೆಚ್ಚು ವಲಸಿಗರನ್ನು ಗಡಿಪಾರು ಮಾಡಲು ಪೆಂಟಗನ್ ವಿಮಾನಗಳ ಸೇವೆಯನ್ನು ಪ್ರಾರಂಭಿಸಿದೆ.

Recent Articles

spot_img

Related Stories

Share via
Copy link