ತಿರುಪತಿ :
ಆಂಧ್ರಪ್ರದೇಶ ಟಿಟಿಡಿ ಒಂದು ಸಂವೇದನಾಶೀಲ ನಿರ್ಧಾರವನ್ನು ತೆಗೆದುಕೊಂಡಿದೆ. ತಿರುಮಲದಲ್ಲಿ ಅನ್ಯಧರ್ಮವನ್ನು ಉತ್ತೇಜಿಸುವ ಮೂಲಕ ತಿರುಮಲದ ಪಾವಿತ್ರ್ಯವನ್ನು ಉಲ್ಲಂಘಿಸುತ್ತಿರುವ 18 ಉದ್ಯೋಗಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ .ಟಿಟಿಡಿಯಲ್ಲಿ ವಿವಿಧ ಇಲಾಖೆಗಳಲ್ಲಿ ಇನ್ನೂ 300 ಹಿಂಧುಯೇತರ ಜನರು ಕೆಲಸ ಮಾಡುತ್ತಿದ್ದಾರೆ ಎಂದು ಆರಂಭದಲ್ಲಿ ಗುರುತಿಸಲಾಗಿದೆ. ವರ್ಗಾವಣೆಯಾದವರಲ್ಲಿ ಟಿಟಿಡಿ ಮಹಿಳಾ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲರು, ಎಸ್‌ವಿಯು ಆಯುರ್ವೇದ ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರು ಮತ್ತು ಇತರರು ಸೇರಿದ್ದಾರೆ.
