ಉದಾಸೀನತೆಯಿಂದ ಸಾಮಾಜಿಕ ಪಿಡುಗಾಗಿರುವ ಕ್ಷಯರೋಗ

 ವಿಶ್ವ ಟಿ.ಬಿ. ಜಾಗೃತಿ ದಿನ:

ಪ್ರಮುಖ ಮಾರಣಾಂತಿಕ ರೋಗಗಳ ಸಾಲಿನಲ್ಲಿ 13ನೆ ಸ್ಥಾನದಲ್ಲಿ ಪಟ್ಟಭದ್ರವಾಗಿರುವ ಕ್ಷಯ (ಟಿ.ಬಿ.) ರೋಗ, 2020 ರಲ್ಲಿ ವಿಶ್ವದಲ್ಲಿ 10 ದಶಲಕ್ಷ ಜನರನ್ನು ಸೋಂಕಿತರನ್ನಾಗಿಸಿ, 15 ಲಕ್ಷ ಜನರನ್ನು ಬಲಿ ತೆಗೆದುಕೊಂಡು ಗಹಗಹಿಸುತ್ತಿದೆ.

ಸೋಂಕಿತರನ್ನು ಕೊಲ್ಲುವ ಪ್ರಮುಖ ಸ್ಥಾನವು ಕೊರೊನಾ ವೈರಾಣುವಿನದಾದರೆ, ಸೋಂಕಿತರನ್ನು ಕೊಲ್ಲುವ ಗತಿಯಲ್ಲಿ ಎರಡನೇ ಸ್ಥಾನವನ್ನು ಟಿ.ಬಿ. ತನ್ನದಾಗಿಸಿಕೊಂಡಿರುವುದು ಪ್ರಮುಖ ಸಾರ್ವಜನಿಕ ಆರೋಗ್ಯ ಸಮಸ್ಯೆಯಾಗಿ ಪರಿಣಮಿಸಿದೆ.

ಟಿ.ಬಿ. ಅಥವಾ ಕೋಚ್ಸ್ ಕಾಯಿಲೆಯನ್ನು ಕನ್ನಡದಲ್ಲಿ “ಕ್ಷಯ’’ ಎಂದು ಕರೆಯಲಾಗುತ್ತಿದ್ದು, ಈ ಕಾಯಿಲೆ ಮೈಕೋ ಬ್ಯಾಕ್ಟೀರಿಯಾ ಟ್ಯೂಬರ್‍ಕ್ಯೂಲೋಸಿಸ್  ಎಂಬ ಬ್ಯಾಕ್ಟೀರಿಯಾದಿಂದ ಹರಡುತ್ತದೆ. ಈ ಬ್ಯಾಕ್ಟೀರಿಯಾಗಳು ಸೋಂಕಿತರಲ್ಲಿ ಟ್ಯೂಬರ್‍ಕ್ಯೂಲಿನ್  ಎಂಬ ರೋಗಕಾರಕ ವಿಷವನ್ನು  ಸ್ರವಿಸುವುದರಿಂದ ದೇಹದಲ್ಲಿನ ಜೀವಕೋಶಗಳು ಹಾನಿಗೊಳಗಾಗುತ್ತವೆ. ಶ್ವಾಸಕೋಶ, ಮೂಳೆ, ಕೀಲು ಹಾಗೂ ದುಗ್ದರಸವನ್ನು ಸ್ರವಿಸುವ ದುಗ್ದ ಗ್ರಂಥಿಗಳಿಗೆ ಈ ರೋಗಾಕಾರಕ ವಿಷ ಹಾನಿ ಮಾಡುವುದರಿಂದ ಸೋಂಕಿತ ಮಂದಿ ಅತ್ಯಂತ ನಿತ್ರಾಣಿಗಳಾಗುತ್ತಾರೆ.

ಪಾಕ್ ಗೆ ನಿದ್ದೆಗೆಡಿಸುವ ಸುದ್ದಿ, ಭಾರತದ ಈ ‘ಬಾಹುಬಲಿ’ ಮಿಸೈಲ್ ಪರೀಕ್ಷೆ ಯಶಸ್ವಿ

ಈ ಬ್ಯಾಕ್ಟೀರಿಯಾಗಳು ಸೋಂಕಿತರ ಸೀನು, ಉಗುಳು, ಕಫದಲ್ಲಿದ್ದು ಗಾಳಿಯ ಮೂಲಕ ಹರಡುತ್ತದೆ. ಈ ರೋಗಾಣುವಿನಿಂದ ಕಲುಷಿತಗೊಂಡ ಆಹಾರ –ದ್ರವ್ಯಗಳನ್ನು ಸೇವಿಸುವುದರಿಂದ ಹಾಗೂ ಸೋಂಕಿತ ಹಸುವಿನ ಹಾಲಿನಿಂದಲೂ ಹರಡುವುದರಿಂದ ಜಾಗ್ರತೆ ಅತ್ಯವಶ್ಯ.

ಚುಂಬನದಿಂದಲೂ ಹರಡುವ ಈ ರೋಗ, ಪಾನೀಯಗಳನ್ನು ಹಂಚಿಕೊಂಡು ಕುಡಿಯುವುದರಿಂದ ಎಂಜಲಿನ ಮೂಲಕ ಹರಡುತ್ತದೆ. ರಸ್ತೆ ಬದಿಗಳಲ್ಲಿ ಪಾದಚಾರಿ ರಸ್ತೆಗಳ ಮೇಲೆ ಸಿಗುವ ಕೊಯ್ದ ಹಣ್ಣುಗಳ ಸೇವನೆ, ಕಬ್ಬಿನ ರಸ, ಪಾನಿಪೂರಿಗಳಿಂದ ದೂರ ಉಳಿದಷ್ಟು ಕ್ಷೇಮವೆಂಬುದು ಪ್ರತಿಯೊಬ್ಬರಿಗೂ ಮನದಟ್ಟಾಗಬೇಕು.

3 ವಾರಗಳ ಕಾಲ ಸತತ ಕೆಮ್ಮು ಇದ್ದರೆ ಟಿ.ಬಿ. ಸೋಂಕಿತರೆಂದು ಪರಿಗಣಿಸಲಾಗುತ್ತದೆ. ಈ ರೋಗದ ಮೂಲ ಗುಣ ಲಕ್ಷಣಗಳಲ್ಲಿ ಒಣಕೆಮ್ಮು, ರಕ್ತ ಮಿಶ್ರಿತ ಕಫ, ಜ್ವರ, ಉಗುಳಿನಲ್ಲಿ ರಕ್ತ, ಎದೆಗೂಡಿನಲ್ಲಿ ನೋವು, ದೇಹದ ತೂಕದಲ್ಲಿ ಇಳಿಕೆ, ವಿಪರೀತ ಸುಸ್ತು, ಸಂಜೆಯ ಹೊತ್ತು ದೇಹದ ತಾಪ ಅಲ್ಪ ಪ್ರಮಾಣದಲ್ಲಿ ಹೆಚ್ಚಾಗುವುದು, ರಾತ್ರಿಯ ಹೊತ್ತು ಬೆವರುವುದು, ನಾಡಿ ಮಿಡಿತ ಹೆಚ್ಚಾಗುವುದು, ಗಂಟಲಿನಲ್ಲಿ ಕೆರೆತ, ಕರ್ಕಶ ಧ್ವ್ವನಿ, ಮಕ್ಕಳ ದೇಹದಲ್ಲಿ ಕುಂಠಿತ ಬೆಳವಣಿಗೆಗೆ ಮುಖ್ಯವಾದವು.

ಶ್ರೀಲಂಕಾದಲ್ಲಿ ಆಹಾರದ ಕೊರತೆ: ಗಗನಕ್ಕೇರಿದ ಅಕ್ಕಿ, ಸಕ್ಕರೆ, ಹಾಲಿನ ಪುಡಿ ಬೆಲೆ!. ಇಲ್ಲಿ ಯಾವ ವಸ್ತುವಿನ ಬೆಲೆ ಎಷ್ಟಿದೆ ಗೊತ್ತಾ?

ಕ್ಷಯ ರೋಗದ ಬಹಳಷ್ಟು ಗುಣಲಕ್ಷಣಗಳು ಕೊರೊನಾ ರೋಗದಲ್ಲೂ ಕಂಡುಬರುವುದರಿಂದ ಹಾಗೂ ಈ ಎರಡೂ ಕಾಯಿಲೆಗಳು ಸೋಂಕಿತ ಹರಡುವಿಕೆಯಲ್ಲಿ ಏಕರೂಪಿಯಗಿರುವುದರಿಂದ ಸೂಕ್ತ ವೈದ್ಯಕೀಯ ತಪಾಸಣೆ ನಡೆಸಿ ರೋಗವನ್ನು ದೃಢಪಡಿಸಿಕೊಳ್ಳಬೇಕಾಗುತ್ತದೆ.
ಶ್ವಾಸಕೋಶ ಟಿ.ಬಿ.  ಧೂಮಪಾನ,, ಸುರಾಪಾನ, ಮದ್ಯಪಾನ ಮಾಡುವವರಲ್ಲಿ ಹೆಚ್ಚಾಗಿ ಕಾಣುತ್ತಿದ್ದು, ಭಾರತದ ಹೆಚ್ಚಿನ ಗ್ರಾಮೀಣ ಪ್ರದೇಶಗಳಲ್ಲಿ ಗ್ರಾಮಸ್ಥರು ಕ್ಷಯದಿಂದ ಸಾವನ್ನಪ್ಪುತ್ತಿರುವುದು ಹೆಚ್ಚಾಗಿದೆ. ಜಾಗ್ರತಾ ಶಿಬಿರಗಳ ಮೂಲಕ ಅನಕ್ಷರಸ್ತರ ಜೊತೆ ಅಕ್ಷರಸ್ತರನ್ನೂ ಎಚ್ಚರಿಸಬೇಕಾಗುತ್ತದೆ. ಗ್ರಾಮ ಪಂಚಾಯತಿಗಳ ಮಂದಿ ಕುಂಭಕರ್ಣಾವಸ್ಥೆಯಿಂದ ಹೊರಬರಬೇಕಾಗಿದೆ.

35 ರಿಂದ 64 ವರ್ಷದವರಲ್ಲಿ ಧೂಮಪಾನ ಮಾಡುವವರಿಗಿಂತ ಮೂರುಪಟ್ಟು ಹೆಚ್ಚು ಧೂಮಪಾನಿಗಳೆ ಟಿ.ಬಿ.ಯಿಂದ ಸಾವಿಗೀಡಾಗುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ 15 ರಿಂದ 24 ವಯೋಮಿತಿಯವರಲ್ಲೂ ಟಿ.ಬಿ. ಪತ್ತೆಯಾಗುತ್ತಿರುವುದರ ಮೂಲಕಾರಣ ಮದ್ಯಪಾನ ಹಾಗೂ ಧೂಮಪಾನ ಹವ್ಯಾಸವೆಂದು ವೈದ್ಯಕೀಯವಾಗಿ ರುಜುವಾತಾಗಿದೆ. ನಗರಗಳ ಯುವ ಜನತೆಯ ಆಯುರಾರೋಗ್ಯಕ್ಕೆ ಎಚ್ಚರಿಕೆಯ ಗಂಟೆ ಬಾರಿಸಿದೆ.

ಹಾಲು ಉತ್ಪಾದಕರಿಗೆ ಸಿಹಿ ಸುದ್ದಿ: ಸಾಲ ಸೌಲಭ್ಯಕ್ಕಾಗಿ ದೇಶದಲ್ಲೇ ಮೊದಲ ಬಾರಿಗೆ ಕ್ಷೀರ ಸಮೃದ್ಧಿ ಬ್ಯಾಂಕ್ ಸ್ಥಾಪನೆ

ದಕ್ಷಿಣ ಭಾರತದ ರಾಜ್ಯಗಳಲ್ಲಿ ಕ್ಷಯದಿಂದ ಸತ್ತವರ ಸಂಖ್ಯೆಯಲ್ಲಿ ನಾಲ್ಕುಪಟ್ಟು ಹೆಚ್ಚು ಧೂಮಪಾನಿಗಳೆ ಆದುದರಿಂದ ಬೀಡಿ, ಸಿಗರೇಟು, ಹುಕ್ಕಾ ಹವ್ಯಾಸಗಳಿಂದ ದೂರವಿದ್ದಷ್ಟೂ ಒಳ್ಳೆಯದು.

ಸುರಪಾನ ಹಾಗೂ ಮದ್ಯಪಾನಿಗಳಲ್ಲಿ ಶೇ.10 ರಷ್ಟು ಮಂದಿ ಟಿ.ಬಿ.ಯಿಂದ ಬಳಲುತ್ತಿದ್ದರೆ, ಸಕ್ರಿಯ ಧೂಮಪಾನಿಗಳಲ್ಲಿ ಟಿ.ಬಿ. ಅತ್ಯಂತ ಸಾಮಾನ್ಯವಾಗಿದ್ದು, ಧೂಮಪಾನ ಮಾಡದ ಮಂದಿಗೆ ಸಕ್ರಿಯ ಧೂಮಪಾನಿಗಳಿಂದ ರೋಗ ತಗಲುತ್ತಿರುವುದು ವೈಜ್ಞಾನಿಕವಾಗಿ ಸಾಬೀತಾಗಿರುವುದರಿಂದ ಪ್ರತಿಯೊಬ್ಬರೂ ಎಚ್ಚರದಿಂದಿರಬೇಕು. ನಿಷಿದ್ಧ ಮಾದಕ ವಸ್ತುಗಳನ್ನು ಸೇವಿಸುವವರಲ್ಲಿ ಕೂಡ ಟಿ.ಬಿ. ಕಂಡುಬರುತ್ತಿದ್ದು, ಹುಕ್ಕ ಬಳಸುವ ಮಂದಿಯಲ್ಲಿ ಶ್ವಾಸಕೋಶ ಟಿ.ಬಿ. ಕಟ್ಟಿಟ್ಟ ಬುತ್ತಿ.

ಹುಕ್ಕ ಬಳಸುವವರಲ್ಲಿ ಬಾಯಿ, ಶ್ವಾಸಕೋಶ, ಪ್ರಾಸ್ಟೇಟ್ ಗ್ರಂಥಿ  ಗಳ ಕ್ಯಾನ್ಸರ್‍ಗೆ ತುತ್ತಾಗುವುದರೊಂದಿಗೆ ಹೃದಯ ಸಂಬಂಧಿ ಕಾಯಿಲೆಗಳೂ ಒತ್ತಾಗಿ ಬರುತ್ತದೆ. ಹಲವು ಬಗೆಯ ಸುವಾಸನಾಯುಕ್ತ ಹುಕ್ಕಗಳ ಬಳಕೆ ಹೆಚ್ಚಾಗುತ್ತಿದ್ದು, ಇದರಿಂದ ಹೃದಯಾಘಾತ ಹಾಗೂ ಲಕ್ವದಂತ ಕಾಯಿಲೆಗಳಿಗೆ ದಾರಿ ಮಾಡಿಕೊಡುತ್ತದೆ. ಈ ಹವ್ಯಾಸಗಳಲ್ಲಿ ಎದೆನೋವು, ಕೆಮ್ಮು, ಉಸಿರಾಡುವಾಗ ಎದೆಗೂಡಿನಲ್ಲಿ ನೋವು ಸರ್ವೇಸಾಮಾನ್ಯವಾಗಿದ್ದು, 35 ರಿಂದ 64 ವರ್ಷದವರಲ್ಲಿ ಶ್ವಾಸಕೋಶದ ಟಿ.ಬಿ. ಪ್ರಮುಖವಾಗಿ ಕಂಡುಬರುತ್ತಿದೆ.

ತಂದೆ-ತಾಯಿ ಕಳೆದುಕೊಂಡು ಹಾಸ್ಟೆಲ್‌ನಲ್ಲೇ ಉಳಿದಾಕೆ, ವ್ಯಾಸಂಗ ಮಾಡಿ 9 ಚಿನ್ನದ ಪದಕ ಗೆದ್ದಳು

ಇಂದಿನ ಯುವ ಜನತೆಯಲ್ಲಿ ಮದ್ಯಪಾನ, ಧೂಮಪಾನ, ನಿಷಿದ್ಧ ನಶೆ ಪದಾರ್ಥಗಳ ಬಳಕೆ ಹುಕ್ಕ ಹವ್ಯಾಸ ಎಗ್ಗಿಲ್ಲದೆ ನಡೆಯುತ್ತಿದ್ದು, ಇವರುಗಳ ದೇಹಾರೋಗ್ಯ ಹಾಗೂ ಭವಿಷ್ಯದ ಚಿಂತೆ ಇವರಿಗಾಗಲಿ, ಇವರ ವಿಶ್ವಾಸ ಘಾತಕತೆಗೆ ಒಳಗಾದ ಪೋಷಕರಿಂದಾಗಲೀ, ಮತ್ತು ಸಮಾಜಕ್ಕಾಗಲೀ ಇಲ್ಲದೆ ಇರುವುದು ದೊಡ್ಡ ಸಾಮಾಜಿಕ ದುರಂತ.

ಈ ಎಲ್ಲಾ ವ್ಯಸನಕ್ಕೆ ಯುವ ಹೆಣ್ಣು ಮಕ್ಕಳೂ ಸಾಮೂಹಿಕ ವಶೀಕರಣಕ್ಕೆ ಒಳಗಾದವರಂತೆ ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುತ್ತಿರುವುದು ನಗ್ನಸತ್ಯ. ಈ ಎಲ್ಲಾ ಹವ್ಯಾಸಗಳಿಂದ ಹೆಂಗಳೆಯರಲ್ಲಿ ಗರ್ಭಾವಸ್ಥೆಯಲ್ಲಿ ತೊಡಕುಗಳು ಬಾಧಿಸುವುದರಿಂದ ಎಚ್ಚರ ಅತ್ಯವಶ್ಯ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಬತ್ತಳಿಕೆಗಳಲ್ಲಿ ಈ ಎಲ್ಲಾ ಅನಾರೋಗ್ಯ ಚಟುವಟಿಕೆಗಳನ್ನು ತಡೆಗಟ್ಟಲು ಯಾವ ಚತುರ್ಬಾಣಗಳಿವೆ ಎನ್ನುವುದು ಮಾತ್ರ ಯಕ್ಷಪ್ರಶ್ನೆಯಾಗೇ ಉಳಿಯುತ್ತದೆ.

ಯಾರಲ್ಲಿ ರೋಗ ನಿರೋಧಕ ಶಕ್ತಿ ಇರುವುದೋ ಅಂತಹವರ ದೇಹವನ್ನು ಟಿ.ಬಿ. ರೋಗಾಣು ಒಳಹೊಕ್ಕರೂ ರೋಗ ಲಕ್ಷಣಗಳು ಕಾಣವುದಿಲ್ಲ. ದೇಹದ ರೋಗ ನಿರೋಧಕ ಶಕ್ತಿ ಈ ಬ್ಯಾಕ್ಟೀರಿಯಾಗಳು ಉಲ್ಬಣಗೊಳ್ಳದಂತೆ ತಡೆಯುತ್ತದೆ.

ಇಡೀ ವಿಶ್ವದಲ್ಲಿ ಶೇ.15 ರಷ್ಟು ಮಧುಮೇಹಿಗಳಲ್ಲಿ ಟಿ.ಬಿ. ಕಂಡುಬಂದಿದ್ದು, ಸಾಮಾನ್ಯರಿಗಿಂತ ಮಧುಮೇಹಿಗಳಲ್ಲಿ ಟಿ.ಬಿ. ಕಾಯಿಲೆ 3 ಪಟ್ಟು ಹೆಚ್ಚಾಗಿರುವುದರಿಂದ ಮಧುಮೇಹಿಗಳು ಹುಷಾರಾಗಿರಬೇಕು.

 ಯುಗಾದಿ ಇನ್ಮುಂದೆ ಕರ್ನಾಟಕದ ‘ಧಾರ್ಮಿಕ ದಿನ’; ರಾಜ್ಯ ಸರ್ಕಾರದಿಂದ ಮಾರ್ಗಸೂಚಿ ಬಿಡುಗಡೆ

ವಿಶ್ವ ಆರೋಗ್ಯ ಸಂಸ್ಥೆ ಟಿ.ಬಿ.ಯಿಂದ ಬಳಲುತ್ತಿರುವವರಿಗೆ ಸಕ್ಕರೆ ಕಾಯಿಲೆಯ ಪರೀಕ್ಷೆ ಹಾಗೂ ಟಿ.ಬಿ.ಪರೀಕ್ಷೆ ಅತ್ಯಗತ್ಯ ಎಂದು ಶಿಫಾರಸ್ಸು ಕೂಡ ಮಾಡಿರುವ ಹಿನ್ನೆಲೆಯಲ್ಲಿ ತಪಾಸಣೆಗಾಗಿ ಹೋಗುವ ಸೋಂಕಿತರು ಹಾಗೂ ತಪಾಸಿಸುವ ವೈದ್ಯರು ಅತ್ಯಂತ ಮುತುವರ್ಜಿ ವಹಿಸಬೇಕು.

ಕೆಲವು ವೈದ್ಯಕೀಯ ಚಿಕಿತ್ಸೆಗಳಲ್ಲಿ ದೇಹದ ರೋಗ ನಿರೋಧಕ ಶಕ್ತಿಯನ್ನು ದುರ್ಬಲಗೊಳಿಸಿ ಅಥವಾ ಸಂಪೂರ್ಣ ನಿಷ್ಕ್ರಿಯಗೊಳಿಸಿ ಚಿಕಿತ್ಸೆ ಕೊಡಬೇಕಾದ ಸಂದರ್ಭಗಳಲ್ಲಿ ಟಿ.ಬಿ. ಸಕ್ರಿಯವಾಗುತ್ತದೆ. ದೇಹದ ವಿವಿಧ ಅಂಗಗಳನ್ನು ಕಸಿ ಮಾಡುವ  ಸಂದರ್ಭಗಳಲ್ಲಿ ದೇಹದ ಪ್ರತಿ ರಕ್ಷಣಾ ಶಕ್ತಿ ನಿರೋಧಕಗಳನ್ನು ಉಪಯೋಗಿಸುವುದರಿಂದ ಟಿ.ಬಿ. ಸೋಂಕು ತಗಲುವ ಸಾಧ್ಯತೆ ಅತಿ ಹೆಚ್ಚು.ಬ್ರೈಕೋಡರ್ಮ ಪಾಲಿಸ್ಟೋರಮ್  ಎಂಬ ಶಿಲೀಂಧ್ರ್ರದಿಂದ ಸೈಕ್ಲೋಸ್ಪೋರಿನ್  ಎಂಬ ದೇಹದ ಪ್ರತಿ ರಕ್ಷಣಾಶಕ್ತಿ ನಿರೋಧಕವನ್ನು ಪಡೆಯಲಾಗುತ್ತದೆ.

ಟಿ.ಬಿ. ಸಂಪೂರ್ಣ ಗುಣಮುಖವಾಗುವ ಕಾಯಿಲೆ. ಆದರೆ ಯಾರ ದೇಹದಲ್ಲಿ ಟಿ.ಬಿ.ಗೆ ಕೊಡುವ ಔಷಧಿಗಳ ಮೇಲೆ ಪ್ರತಿರೋಧ ಸಮಸ್ಯೆ ಇರುವುದೋ ಅಂತಹವರಲ್ಲಿ ಈ ಕಾಯಿಲೆ ಗುಣವಾಗುವುದಿಲ್ಲ.ಹೆಚ್.ಐ.ವಿ. ಸೋಂಕಿತರಲ್ಲಿ, ಬಡತನ ರೇಖೆಗಿಂತ ಕೆಳಗಿದ್ದು “ಭೂಮಿಯೇ ಹಾಸಿಗೆ ಆಗಸವೇ ಹೊದಿಕೆ’’ ಎಂದು ವಸತಿರಹಿತ ಜೀವನ ನಡೆಸುವ ಮಂದಿಯಲ್ಲಿ ಅಧಿಕೃತ ಹಾಗೂ ಅನಧಿಕೃತ ಕೊಳಗೇರಿಗರಲ್ಲಿ ಗಾಳಿ ಬೆಳಕಿನ ಸುಗಮ ಸಂಚಾರಕ್ಕೆ ಅಡ್ಡಿ ಬರುವುದರಿಂದ ಟಿ.ಬಿ. ಸೋಂಕು ತಗಲುವುದರಲ್ಲಿ ಯಾವ ಸಂದೇಹವೂ ಇಲ್ಲ.

ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ಜನರನ್ನು ಸಾವಿನ ದವಡೆಗೆ ನೂಕುವ ಪ್ರಮುಖ ರೋಗಗಳಲ್ಲಿ ಟಿ.ಬಿ.ಗೆ ಅಗ್ರಸ್ಥಾನ. ಶ್ವಾಸಕೋಶದ ಟಿ.ಬಿ.  ಗ್ರಾಮೀಣರಲ್ಲಿ ಅತ್ಯಂತ ಸಾಮಾನ್ಯವಾಗುತ್ತಿದ್ದು, ಸಂಬಂಧಪಟ್ಟ ಎಲ್ಲಾ ಸರ್ಕಾರಿ ಇಲಾಖೆಗಳೂ ಈ ಪ್ರಮುಖ ಆರೋಗ್ಯ ಸಮಸ್ಯೆಯನ್ನು ಸಂಪೂರ್ಣ ಹೋಗಲಾಡಿಸಲೆಬೇಕು.

ST’ ಮೀಸಲಾತಿ ಹೆಚ್ಚಳದ ಕುರಿತಂತೆ ಸಿಎಂ ಬೊಮ್ಮಾಯಿ ಮಹತ್ವದ ಹೇಳಿಕೆ

ಟಿ.ಬಿ. ಕೇವಲ ಶ್ವಾಸಕೋಶಗಳನ್ನೇ ಅಲ್ಲದೆ ದೇಹದ ಯಾವುದೇ ಭಾಗಗಳಿಗೂ ಹರಡುತ್ತೆ. ಮೆದುಳು, ಮೂತ್ರಪಿಂಡ  ಬೆನ್ನಮೂಳೆ, ಟಿ.ಬಿ.ಯಲ್ಲಿ 3 ಹಂತಗಳಿದ್ದು, ಧರ್ಮ, ರಕ್ತ ಹಾಗೂ ಎದೆಯ ಎಕ್ಸರೇಗಳಿಂದ ಕಾಯಿಲೆಯನ್ನು ದೃಢೀಕರಿಸಲಾಗುತ್ತದೆ.

• ಮೊದಲನೆ ಹಂತ ಪ್ರಭಾವಸ್ಥೆ:

ಯಾರು ಈ ಬ್ಯಾಕ್ಟೀರಿಯಾಗಳಿಗೆ ಒಡ್ಡಿಗೊಳ್ಳುತ್ತಾರೋ ಅಂತಹವರಲ್ಲಿ ಚರ್ಮದ ಪರೀಕ್ಷೆ ನಕಾರಾತ್ಮಕವಾಗಿದ್ದು, ಎದೆಯ ಎಕ್ಸ್‍ರೇ ಸಾಧಾರಣವಾಗಿರುತ್ತದೆ.

• ಎರಡನೇ ಹಂತ ಸುಪ್ತಾವಸ್ಥೆ

:ಈ ಹಂತದಲ್ಲಿ ರೋಗ ಲಕ್ಷಣಗಳು ಕಾಣುವುದಿಲ್ಲ. ಆದರೆ, ಜೀವನ ಪರ್ಯಂತ ದೇಹದಲ್ಲೂ ಈ ರೋಗಾಣುಗಳು ಸಕ್ರಿಯವಾಗದೆ ಇರುತ್ತವೆ. ಚರ್ಮದ ಪರೀಕ್ಷೆ ಸಕಾರಾತ್ಮಕವಾಗಿ ಬಂದರೆ ಎದೆಯ ಎಕ್ಸ್ ರೇ ಸಾಧಾರಣವಾಗಿರುತ್ತದೆ.

• ಮೂರನೇ ಹಂತ ಸಕ್ರಿಯಾವಸ್ಥೆ  :

ಈ ಹಂತದಲ್ಲಿ ರೋಗಲಕ್ಷಣಗಳು ಕಾಣುವುದರೊಂದಿಗೆ ಚರ್ಮದ ಪರೀಕ್ಷೆ ಹಾಗೂ ಎದೆಯ ಎಕ್ಸ್ ರೇ ಎರಡರಲ್ಲೂ ರೋಗ ಪ್ರಭಾವಪೂರ್ಣವಾಗಿರುತ್ತದೆ.

ಸೋಂಕಿತ ಲಕ್ಷಣಗಳು ಕಂಡ ಕೂಡಲೇ ಸೂಕ್ತ ಚಿಕಿತ್ಸೆಯನ್ನು ಪಡೆದುಕೊಂಡು ಚಿಕಿತ್ಸಾ ಕ್ರಮವನ್ನು ಚಾಚೂ ತಪ್ಪದೆ ಪಾಲಿಸಿದಲ್ಲಿ ಟಿ.ಬಿ.ಯಿಂದ ಸಂಪೂರ್ಣ ಮುಕ್ತಿ ಹೊಂದಬಹುದು. ಇಲ್ಲದಿದ್ದಲ್ಲಿ ಶ್ವಾಸಕೋಶಗಳು ಸಂಪೂರ್ಣವಾಗಿ ಹಾನಿಗೊಳಗಾಗುತ್ತವೆ. ಕೆಲವಾರು ವಾರಗಳ ಸುದೀರ್ಘ ಸೂಕ್ತ ಔಷಧೋಪಚಾರದ ನಂತರ ವೈದ್ಯರು ಸೂಕ್ತ ತಪಾಸಣೆಯನ್ನು ನಡೆಸಿ ರೋಗಿ ರೋಗಮುಕ್ತವಾಗಿದ್ದಾನೋ ಇಲ್ಲವೋ ಎಂದು ತೀರ್ಮಾನಿಸುತ್ತಾರೆ. ಸೋಂಕಿತರು ಕಡೆಯ ಪಕ್ಷ 6 ತಿಂಗಳುಗಳ ಕಾಲ ಸೂಕ್ತ ಔಷಧಿಗಳನ್ನು ತೆಗೆದುಕೊಳ್ಳಬೇಕು. ಖಾಸಗಿ ವೈದ್ಯರುಗಳು ಈ ಕಾಯಿಲೆಗೆ ಚಿಕಿತ್ಸೆ ನೀಡಲು ಹಿಂಜರಿಯುವುದರಿಂದ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಪೂರ್ಣ ಪ್ರಮಾಣದ ಚಿಕಿತ್ಸೆ ಲಭ್ಯವಿದ್ದು, ಟಿ.ಬಿ. ರೋಗ ಪರೀಕ್ಷೆ ಹಾಗೂ ಚಿಕಿತ್ಸೆ ಸಂಪೂರ್ಣ ಉಚಿತವಾಗಿದ್ದು, ಈ ಸÀದಾವಕಾಶವನ್ನು ಉಪಯೋಗಿಸಿಕೊಂಡು ರೋಗಮುಕ್ತರಾಗಬೇಕು.

ಇಂದಿಯ ಯುವ ಜನತೆ ಆನೆ ನಡೆದದ್ದೇ ದಾರಿ ಎಂಬಂತೆ ಸಂಸ್ಕಾರ, ಸಂಸ್ಕøತಿ ಮರೆತು ಸ್ವೇಚ್ಛತೆಯ ಉತ್ತುಂಗದಲ್ಲಿ ಮೆರೆಯುತ್ತಾ ಅನೈಸರ್ಗಿಕ ಚಟುವಟಿಕೆಗಳಲ್ಲಿ ಪರಮಾನಂದ ಪಡೆದಯುತ್ತಿರುವುದನ್ನು ಕಂಡಾಗ ಇವರುಗಳು  ಎಂದರೆ ತಪ್ಪೇ? ಕಳೆದು ಹೋದ ದಿನಗಳು ಮತ್ತೆ ಬರುವುದಿಲ್ಲ. ಇದೇ ರೀತಿ ದೈವದತ್ತವಾಗಿ ಬಂದ ದೇಹದ ಒಳಾರೋಗ್ಯ ಒಂದು ಬಾರಿ ಕಳೆದುಕೊಂಡರೆ ಮತ್ತೆ ಯಥಾಸ್ಥಿತಿಗೆ ಬರುವುದಿಲ್ಲ. ಈ ನಗ್ನಸತ್ಯದ ಅರಿವು ಎಲ್ಲರಿಗೂ ಇರಬೇಕು.

ಶಾಲಾ ಕಾಲೇಜುಗಳಲ್ಲಿ ಟಿ.ಬಿ. ರೋಗದ ಉದ್ಬವ ಹಾಗೂ ನಿಯಂತ್ರಣದ ಬಗ್ಗೆ ನುರಿತ ವೈದ್ಯರುಗಳಿಂದ ಉಪನ್ಯಾಸಗಳನ್ನು ನಡೆಸಬೇಕು. ಹೀಗಾದಲ್ಲಿ ಮಾತ್ರ ಜಾಗ್ರತೆಯ ಜಾಗಟೆ ಬಾರಿಸಲು ಸಾಧ್ಯ.

-ಡಾ.ಡಿ.ಜೆ.ಮೋಹನ್, ಪರಿಸರ ವಿಜ್ಞಾನಿಗಳು, 97129 49955.

 

Recent Articles

spot_img

Related Stories

Share via
Copy link
Powered by Social Snap