ತುಮಕೂರು : ಸಂಚಾರಿ ನಿಯಮ ಉಲ್ಲಂಘಿಸಿದ 9 ಪೊಲೀಸರಿಗೆ ದಂಡ!!

 ತುಮಕೂರು : 

      ಹೆಲ್ಮೆಟ್ ರಹಿತ ಚಾಲನೆ, ಡಿಎಲ್ ಇಲ್ಲದಿರುವುದು ಸೇರಿ ಸಂಚಾರಿ ನಿಯಮ ಉಲ್ಲಂಘನೆ ಸಂಬಂಧ ರಸ್ತೆಯಲ್ಲೇ ಕಾರ್ಯಚರಣೆಗಿಳಿದು ದಂಡ ಕಟ್ಟಿಸಿಕೊಳ್ಳುತ್ತಿರುವ ಪೊಲೀಸ್ ಇಲಾಖೆ ಮಂಗಳವಾರ ನಗರದ ವಿವಿಧ ಪೊಲೀಸ್ ಠಾಣೆಯ 9 ಮಂದಿ ಪೊಲೀಸರಿಗೆ ದಂಡ ವಿಧಿಸುವ ಮೂಲಕ ನಮ್ಮ ಇಲಾಖೆಯವರಿಗೂ ವಿನಾಯಿತಿ ತೋರುವುದಿಲ್ಲ ಎಂಬ ಸಂದೇಶ ರವಾನೆಗೆ ಮುಂದಾಗಿದ್ದಾರೆ.

     423 ಪ್ರಕರಣ :

      ಸೋಮವಾರ ತುಮಕೂರು ನಗರದ ವಿವಿಧ ಪೊಲಿಸ್ ಠಾಣೆಯ ಪೊಲೀಸರು ದ್ವಿಚಕ್ರ ವಾಹನ ಚಾಲನೆ ಮಾಡುವಾಗ ಅರ್ಧ ಹೆಲ್ಮೆಟ್ ಧರಿಸಿ ಹಾಗೂ ಹೆಲ್ಮೆಟ್ ಇಲ್ಲದೇ ಬೈಕ್ ಚಾಲನೆ ಮಾಡುವಾಗ ತಡೆದು 9 ಜನರಿಗೆ ಪ್ರಕರಣ ದಾಖಲಿಸಿ, 4,500 ರೂ. ದಂಡ ವಿಧಿಸಿದ್ದು, ನಗರದಲ್ಲಿ ವಿಶೇಷ ಅಭಿಯಾನ ನಡೆಸಿದ ಸಂದರ್ಭದಲ್ಲ್ದಿ ಒಟ್ಟು 423 ಪ್ರಕರಣಗಳನ್ನು ದಾಖಲು ಮಾಡಿ 2,06,100 ರೂ. ದಂಡ ವಿಧಿಸಲಾಗಿರುತ್ತದೆ ಎಂದು ಎಸ್ಪಿ ಡಾ.ಕೆ. ವಂಸಿಕೃಷ್ಣ ಮಾಹಿತಿ ನೀಡಿದ್ದಾರೆ.

      ಇಲ್ಲಿನ ಮಹಾನಗರ ವ್ಯಾಪ್ತಿಯಲ್ಲಿ ದ್ವಿಚಕ್ರ ವಾಹನಗಳನ್ನು ಚಾಲನೆ ಮಾಡುವಾಗ ಪೂರ್ಣ ಪ್ರಮಾಣದ ಹೆಲ್ಮೆಟ್‍ಗಳನ್ನು(ಐ.ಎಸ್.ಐ. ಮುದ್ರೆ) ಧರಿಸಿ ಬೈಕ್ ಚಾಲನೆ ಮಾಡಲು ಈಗಾಗಲೇ ಸರ್ಕಾರದಿಂದ ಆದೇಶವಾಗಿರುತ್ತದೆ. ಆದರೆ, ಹಲವಾರು ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್‍ಗಳನ್ನು ಧರಿಸದೆ ಸಂಚರಿಸುತ್ತಿರುವುದರಿಂದ ರಸ್ತೆ ಅಪಘಾತಗಳು ಜರುಗಿದಾಗ ಮಾರಣಾಂತಿಕ ರಸ್ತೆ ಅಪಘಾತಗಳು ಸಂಭವಿಸುತ್ತಿರುತ್ತವೆ. ಈ ಬಗ್ಗೆ ಸಾರ್ವನಿಕರಿಗೆ ಹಲವಾರು ಬಾರಿ ಅರಿವು ಮೂಡಿಸಿದರೂ ಸಹ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸದೆ ಇರುವುದು ಕಂಡು ಬಂದಿರುತ್ತದೆ.

     ಅಲ್ಲದೇ ಎಲ್ಲಾ ಶಾಲಾ-ಕಾಲೇಜು ವಿದ್ಯಾರ್ಥಿಗಳ ಪೋಷಕರು ತಮ್ಮ ಅಪ್ರಾಪ್ತ ಮಕ್ಕಳಿಗೆ ಮತ್ತು ಚಾಲನ ಪರವಾನಗಿ ಇಲ್ಲದೇ ಇರುವವರಿಗೆ ವಾಹನಗಳನ್ನು ಚಾಲನೆ ಮಾಡಲು ನೀಡಬಾರದಾಗಿ ತುಮಕೂರು ಜಿಲ್ಲಾ ಪೊಲೀಸ್ ಅಧೀಕ್ಷಕರು ಸಾರ್ವಜನಿಕರಲ್ಲಿ ಕೋರಿರುತ್ತಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap