ತುಮಕೂರು :
ಜಿಲ್ಲೆಯಲ್ಲಿ ಭಾನುವಾರ ಕೋವಿಡ್ ಸೋಂಕಿತರ ಸಂಖ್ಯೆ 64ಕ್ಕೆ ಏರಿಕೆಯಾಗಿದ್ದು, ಸೋಂಕಿನೊಂದಿಗೆ ಅನ್ಯ ಕಾರಣದಿಂದ ಒಬ್ಬರು ಮೃತಪಟ್ಟಿದ್ದಾರೆ.
ಆಸ್ಪತ್ರೆಯಿಂದ 38 ಮಂದಿ ಬಿಡುಗಡೆಹೊಂದಿದ್ದು, 584 ಸಕ್ರಿಯ ಪ್ರಕರಣಗಳಿವೆ. ಇದರೊಂದಿಗೆ ಒಟ್ಟು ಸೋಂಕಿತರ ಪ್ರಮಾಣ 25379ಕ್ಕೆ ಏರಿಕೆಯಾಗಿದೆ.
ಚಿ.ನಾ.ಹಳ್ಳಿ 3, ಗುಬ್ಬಿ 1, ಕುಣಿಗಲ್ 4, ಮಧುಗಿರಿ 1, ತಿಟಪೂರಲ್ಲಿ 2 ಪ್ರಕರಣ ಕಾಣಿಸಿಕೊಂಡಿದ್ದು, ತುಮಕೂರು ತಾಲೂಕಿನಲ್ಲಿ 34 ಶಿರಾದಲ್ಲಿ 19 ಪ್ರಕರಣಗಳು ಕಂಡುಬಂದಿದ್ದು, ಅತೀ ಹೆಚ್ಚು ಪ್ರಕರಣ ದಾಖಲಾದ ತಾಲೂಕೆನಿಸಿದೆ. ತುಮಕೂರು ತಾಲೂಕು ಹೆಬ್ಬೂರಿನ ಕಾಮಾಕ್ಷಿ ದೇವಾಲಯ ರಸ್ತೆಯ 62 ವರ್ಷದ ಹಿರಿಯ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
