ತುಮಕೂರು :
ಪಾವಗಡ ರಾಮಕೃಷ್ಣ ಸೇವಾಶ್ರಮದ ಮುಖ್ಯಸ್ಥ ಸ್ವಾಮಿ ಜಪಾನಂದಜೀ ಅವರು ಹೆಬ್ಬೂರು ಕಾಮಾಕ್ಷಿ ಕೋದಂಡಾಶ್ರಮಕ್ಕೆ ಭೇಟಿ ಕೊಟ್ಟು ಆಶ್ರಮದ ಪೀಠಾಧಿಪತಿ ಶ್ರೀ ಮಾಧವಾಶ್ರಮ ಸ್ವಾಮೀಜಿ ಅವರೊಂದಿಗೆ ಚರ್ಚಿಸಿದರು.
ಸಂಪ್ರದಾಯಪೂರ್ವಕವಾಗಿ ಪೂರ್ಣಕುಂಭದೊಡನೆ ಶ್ರೀಗಳನ್ನು ಸ್ವಾಗತಿಸಲಾಯಿತ. ಬಳಿಕ ಮಾಧವಾಶ್ರಮ ಸ್ವಾಮೀಜಿಯವರನ್ನು ಭೇಟಿಯಾಗಿ ಅನೇಕ ವಿಚಾರಗಳನ್ನು ಹಂಚಿಕೊಂಡ ಜಪಾನಂದಜೀ ಅವರು ಶ್ರೀರಾಮಕೃಷ್ಣ ಸೇವಾಶ್ರಮದ ಸಾಮಾಜಿಕ ಹಾಗೂ ಆಧ್ಯಾತ್ಮಿಕ ಕಾರ್ಯಕ್ಷೇತ್ರಗಳ ಪರಿಚಯವನ್ನು ನೀಡಿದರು.
ಲೋಕ ಕಲ್ಯಾಣಾರ್ಥ ಹೋಮ ಹವನ :
ಇದೇ ಸಂದರ್ಭದಲ್ಲಿ ಶ್ರೀ ಮಾಧವಾಶ್ರಮ ಸ್ವಾಮಿಗಳನ್ನು ಏಪ್ರಿಲ್ ಕೊನೆಯ ವಾರದಲ್ಲಿ ಶ್ರೀರಾಮಕೃಷ್ಣ ಸೇವಾಶ್ರಮಕ್ಕೆ ಆಹ್ವಾನಿಸಿದ ಶ್ರೀಗಳು ಆ ಸಂದರ್ಭದಲ್ಲಿ ಲೋಕ ಕಲ್ಯಾಣಾರ್ಥ ವಿಶೇಷವಾಗಿ ಪಾವಗಡ ತಾಲೂಕಿಗೆ ಒಳಿತಾಗಲೆಂದು ಅನೇಕ ಪೂಜಾ ಕೈಂಕರ್ಯ ಹಾಗೂ ಹೋಮವನ್ನು ನೆರವೇರಿಸುವಂತೆ ಕೋರಿದರು. ಶ್ರೀಗಳು ಸಮ್ಮತಿಸಿದ್ದು ಭಾಗ್ಯವೆಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
