ತುಮಕೂರು : ಬಡಾವಣೆಯೊಳಗೆ ವಾಹನ ಸಂಚಾರಕ್ಕೆ ಅವಕಾಶ

 ತುಮಕೂರು : 

      ಲಾಕ್‍ಡೌನ್ ಕರ್ಫ್ಯೂ ಎರಡನೇ ದಿನವಾದ ಮಂಗಳವಾರ ಬಡಾವಣೆಯೊಳಗೆ ವಾಹನ ಸಂಚಾರಕ್ಕೆ ಅನುಮತಿಸಲಾಗಿದ್ದು, ಪೊಲೀಸರು ಸೋಮವಾರದಂತೆಯೆ ರಸ್ತೆಯಲ್ಲಿ ವಾಹನ ಸವಾರರನ್ನು ತಡೆದು ಕಾನೂನು ಕ್ರಮ ಕೈಗೊಳ್ಳುತ್ತಿದ್ದರು. ಈ ವೇಳೆ ಕೆಲವು ಕಡೆ ವಾಹನ ತಡೆದ ಪೊಲೀಸರೊಂದಿಗೆ ನಾಗರಿಕರು ವಾಗ್ವಾದ ನಡೆಸುತ್ತಿದ್ದುದು ಕಂಡು ಬಂತು.

ಲಾಕ್‍ಡೌನ್ ಮೊದಲ ದಿನ ಸೋಮವಾರ ದಿನಸಿ, ತರಕಾರಿ ತರಲು ವಾಹನ ಕೊಂಡೊಯ್ಯಬಾರದೆಂಬ ಸರಕಾರದ ಮಾರ್ಗಸೂಚಿ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸರು ನಿಯಮ ಮೀರಿ ರಸ್ತೆಗಿಳಿದಿದ್ದವಾಹನಗಳನ್ನು ಯಾವುದೇ ಮುಲಾಜಿಲ್ಲದೆ ವಶಕ್ಕೆ ಪಡೆದಿದ್ದರು. ರಾಜ್ಯದ ಕೆಲವೆಡೆ ಲಾಠಿ ಪ್ರಯೋಗವನ್ನು ಖಾಕಿ ಪಡೆ ಮಾಡಿತ್ತು. ಇದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಸೋಮವಾರ ರಾತ್ರಿಯೇ ಸರಕಾರ, ಡಿಜಿಐಜಿಪಿ ಅವರು ಬಡಾವಣೆಯೊಳಗೆ ವಾಹನ ಸಂಚಾರಕ್ಕೆ ಅನುಮತಿ ಇದೆ. ಪೊಲೀಸರು ಅನಗತ್ಯ ಬಲಪ್ರಯೋಗಕ್ಕೆ ಮುಂದಾಗಬಾರದೆಂದು ಸೂಚಿಸಿದ ಹಿನ್ನೆಲೆಯಲ್ಲಿ ಪೊಲೀಸರು ಬಡಾವಣೆಯೊಳಗೆ ವಾಹನ ಸವಾರಕ್ಕೆ ಅವಕಾಶ ಮಾಡಿಕೊಟ್ಟಿದ್ದರಿಂದ ಬೆಳಿಗ್ಗೆ 10ರವರೆಗೆ ಅವಶ್ಯಕ ವಸ್ತು ಖರೀದಿ ಹೆಸರಲ್ಲಿ ವಾಹನ ದಟ್ಟಣೆ ಜನಸಂಚಾರ ಹೆಚ್ಚಿತ್ತು.

      10ರ ಬಳಿಕ ಜಿಲ್ಲೆಯ 70 ಚೆಕ್‍ಪಾಯಿಂಟ್‍ಗಳು ವಾಹನ ಸವಾರರ ವಿಚಾರಣೆ, ಅನಗತ್ಯ ಸಂಚರಿಸುವವರಿಂದ ವಾಹನ ಕಸಿದು ಪ್ರಕರಣ ದಾಖಲಿಸುವ ಕಾರ್ಯವನ್ನು ಪೊಲೀಸರು ಮುಂದುವರಿಸಿದರು.

      ಮೇಯರ್, ಪೊಲೀಸರಿಂದ ಅರಿವು:

     ತುಮಕೂರಿನ ಮಂಜುನಾಥನಗರ 80 ಅಡಿ ರಸ್ತೆಯಲ್ಲಿ ಸ್ಥಳೀಯ ಹೋಟೆಲ್ ವ್ಯಾಪಾರಿಯೊಬ್ಬರು ಕೊತ್ತಂಬರಿ ತರಲು ಗಾಡಿಯಲ್ಲಿ ತೆರಳುತ್ತಿದ್ದಾಗ ಪೊಲೀಸರು ತಡೆದಿದ್ದಕ್ಕೆ ಅವರು ಆಕ್ಷೇಪ ವ್ಯಕ್ತಪಡಿಸಿದರು.

     ಡಿಜಿಯವರೇ ಅನುಮತಿ ಕೊಟ್ಟಿದ್ದಾರೆಂದೆಲ್ಲ ವಾದಿಸುತ್ತಿದ್ದರು. ಈ ಸಂದರ್ಭದಲ್ಲಿ ಅಲ್ಲಿಯೇ ದ್ವಿಚಕ್ರ ವಾಹನದಲ್ಲಿ ವಾರ್ಡ್ ಪರಿವೀಕ್ಷಣೆ ಮಾಡುತ್ತಿದ್ದ ಮೇಯರ್ ಬಿ.ಜಿ.ಕೃಷ್ಣಪ್ಪ ಅವರು ಸಹ ಸ್ಥಳಕ್ಕಾಗಮಿಸಿ ಪೊಲೀಸರು ಅವರ ಕಾರ್ಯ ಮಾಡುತ್ತಿದ್ದಾರೆ. ಸಾರ್ವಜನಿಕರು ಅರ್ಥೈಸಿಕೊಂಡು ಅವಶ್ಯಕವಿದ್ದರಷ್ಟೇ ವಾಹನದಲ್ಲಿ ಬರಬೇಕು. ಅನಗತ್ಯ ಸಂಚಾರ ಮಾಡಬಾರದು ಎಂದು ತಿಳಿಹೇಳಿದರು. ನಂತರ ಪೊಲೀಸರು ತಿಳಿ ಹೇಳಿ ಸವಾರನಿಗೆ ವಶಕ್ಕೆ ಪಡೆದಿದ್ದ ವಾಹನದ ಕೀ ಹಸ್ತಾಂತರಿಸಿದರು. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap