ತುಮಕೂರು : ಕೋವಿಡ್ ಪರೀಕ್ಷೆಗಳಿಗೆ ಹೊಸ ದರ ನಿಗಧಿ!!

 ತುಮಕೂರು:

      ಕೋವಿಡ್-19 ಪತ್ತೆ ಹಚ್ಚಲು ನಡೆಸುವ ಆರ್‍ಟಿಪಿಸಿಆರ್, ಟ್ರೂ-ನ್ಯಾಟ್, ಸಿಬಿ ನ್ಯಾಟ್, ರ್ಯಾಪಿಡ್-ಆಂಟಿಜನ್ ಹಾಗೂ ರ್ಯಾಪಿಡ್ ಆಂಟಿಬಾಡಿ ಪರೀಕ್ಷೆಗಳ ದರವನ್ನು ಸರ್ಕಾರ ಮರು ನಿಗದಿ ಪಡಿಸಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ತಿಳಿಸಿದ್ದಾರೆ.

      ಸರ್ಕಾರಿ ಆಸ್ಪತ್ರೆಗಳಿಂದ ಖಾಸಗಿ ಪ್ರಯೋಗಶಾಲೆಗಳಿಗೆ ಮಾದರಿಗಳನ್ನು ಕಳುಹಿಸುವ ಆರ್‍ಟಿ-ಪಿಸಿಆರ್ ಪರೀಕ್ಷೆಗೆ 500 ರೂ., ಖಾಸಗಿ ಆಸ್ಪತ್ರೆಗಳಿಂದ ಸ್ವೀಕೃತವಾದ ಮಾದರಿಗಳನ್ನು ಖಾಸಗಿ ಪ್ರಯೋಗ ಶಾಲೆಗಳಲ್ಲಿ ಪರೀಕ್ಷಿಸಿಸುವ ಆರ್‍ಟಿ-ಪಿಸಿಆರ್ ಪರೀಕ್ಷೆಗೆ 800ರೂ., ಖಾಸಗಿ ಆಸ್ಪತ್ರೆಗಳಿಂದ ಸ್ವೀಕೃತವಾದ ಮಾದರಿಗಳನ್ನು ಖಾಸಗಿ ಪ್ರಯೋಗಶಾಲೆಗಳಲ್ಲಿ ಪರೀಕ್ಷಿಸಿಸುವ ಟ್ರೂ-ನ್ಯಾಟ್ ಪರೀಕ್ಷೆಗೆ 1,250ರೂ., ಖಾಸಗಿ ಆಸ್ಪತ್ರೆಗಳಿಂದ ಸ್ವೀಕೃತವಾದ ಮಾದರಿಗಳನ್ನು ಖಾಸಗಿ ಪ್ರಯೋಗಶಾಲೆಗಳಲ್ಲಿ ಪರೀಕ್ಷಿಸುವ ಸಿಬಿ-ನ್ಯಾಟ್ ಪರೀಕ್ಷೆಗೆ 2,400ರೂ., ಖಾಸಗಿ ಪ್ರಯೋಗಶಾಲೆ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ನಡೆಸುವ ರ್ಯಾಪಿಡ್ ಆಂಟಿಜೆನ್ ಪರೀಕ್ಷೆಗೆ 400ರೂ., ಖಾಸಗಿ ಪ್ರಯೋಗಶಾಲೆ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ನಡೆಸುವ ರ್ಯಾಪಿಡ್ 500 ರೂ.ದರವನ್ನು ನಿಗದಿಪಡಿಸಲಾಗಿದೆ.

      ಈ ಎಲ್ಲಾ ಪರೀಕ್ಷೆಗಳ ಮಾದರಿಯನ್ನು ಮನೆಯಿಂದ ಸಂಗ್ರಹಿಸಬೇಕಾದಲ್ಲಿ ಒಂದು ಮನೆಯ ಸಂಗ್ರಹ ದರ 400 ರೂ.ಗಳನ್ನು ಮೀರಬಾರದು. ಆರ್‍ಟಿ-ಪಿಸಿಆರ್, ಟ್ರೂ-ನ್ಯಾಟ್, ಸಿಟಿ-ನ್ಯಾಟ್, ರ್ಯಾಪಿಡ್-ಆಂಟಿಜೆನ್ ಹಾಗೂ ರ್ಯಾಪಿಡ್-ಆಂಟಿಬಾಡಿ ಪರೀಕ್ಷೆಗಳನ್ನು ಐಸಿಎಂಆರ್ ಪ್ರಮಾಣಿತ ಪ್ರಯೋಗ ಶಾಲೆಗಳಲ್ಲಿಯೇ ನಡೆಸಬೇಕು ಎಂದು ಅವರು ತಿಳಿಸಿದ್ದಾರೆ.

Recent Articles

spot_img

Related Stories

Share via
Copy link