ತುಮಕೂರು : ಶೆಟ್ಟಿಹಳ್ಳಿ ಅಂಡರ್‍ ಪಾಸ್ ಬಂದ್

 ತುಮಕೂರು : 

      ನಗರದ ದಕ್ಷಿಣ ಭಾಗದ ಹಲವು ವಾರ್ಡ್‍ಗಳಿಗೆ ಸಂಪರ್ಕಿಸುವ ಪ್ರಮುಖ ರಸ್ತೆಯಾದ ಶೆಟ್ಟಿಹಳ್ಳಿ ರೈಲ್ವೆ ಗೇಟ್ ಅಂಡರ್‍ಪಾಸ್ ಅನ್ನು ಶನಿವಾರ ಮಧ್ಯಾಹ್ನ 3 ರಿಂದ ಮಹಾನಗರಪಾಲಿಕೆಯವರು ಬಂದ್ ಮಾಡಿದ್ದಾರೆ.

      ಶೆಟ್ಟಿಹಳ್ಳಿ ಅಂಡರ್ ಪಾಸ್ ಸುತ್ತಮುತ್ತ ಬರುವ 25, 26, 27 ಹಾಗೂ 15ನೇ ವಾರ್ಡ್‍ನಲ್ಲಿ ಸೋಂಕು ವಿಸ್ತರಣೆ ಪ್ರಮಾಣ ಹಾಗೂ ಸೋಂಕಿತರ ಸಂಖ್ಯೆ ಜಾಸ್ತಿಯಿದ್ದು, ಅದರಲ್ಲೂ ಎಸ್‍ಐಟಿ ಬಡಾವಣೆಯಲ್ಲಿ ರಸ್ತೆಗೆ 10-20 ಮಂದಿ ಸೋಂಕಿತರು ಕಂಡುಬರುತ್ತಿರುವ ಕಾರಣಕ್ಕೆ ಈ ಅಂಡರ್‍ಪಾಸ್‍ನಲ್ಲಿ ಹಾದು ಹೋಗುವ ಸೋಂಕಿತರಲ್ಲದವರಿಗೂ ಸೋಂಕು ತಗುಲುವ ಆತಂಕದಿಂದ ಹಾಗೂ ಅನಗತ್ಯ ಸಂಚರಿಸುವವರನ್ನು ನಿಯಂತ್ರಿಸುವ ದೃಷ್ಟಿಯಿಂದ ಈ ಅಂಡರ್ ಪಾಸ್ ಅನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ ಎಂದು 26ನೇ ವಾರ್ಡ್ ಸದಸ್ಯ ಮಲ್ಲಿಕಾರ್ಜುನ್ ತಿಳಿಸಿದ್ದಾರೆ.

      ಕೋವಿಡ್ ಕರ್ಫ್ಯೂ ಲಾಕ್‍ಡೌನ್ ಜಾರಿಯಲ್ಲಿದ್ದರೂ ಬೆಳಿಗ್ಗೆ 6 ರಿಂದ10ರವರೆಗಿನ ಅವಶ್ಯಕ ವಸ್ತು ಸಾಮಗ್ರಿ ಖರೀದಿಸಲು ಕಲ್ಪಿಸಿರುವ ವಿನಾಯಿತಿ ಅವಧಿಯಲ್ಲಿ ತರಕಾರಿ, ದಿನಸಿ ಖರೀದಿ ಎಟಿಎಂ ಹಣ ಡ್ರಾ ಹೆಸರಲ್ಲಿ ಶೆಟ್ಟಿ ಹಳ್ಳಿ ರಸ್ತೆ- ಸೋಮಶ್ವರಪುರಂ, ಎಸ್‍ಐಟಿ ಮುಖ್ಯರಸ್ತೆಗೆ ಆಗಮಿಸುತ್ತಿರುವವ ಸಂಖ್ಯೆ ಹೆಚ್ಚಿದ್ದು, ಸೋಂಕಿತರು, ಸೋಂಕಿತರಲ್ಲದವರು ಹೆಚ್ಚಾಗಿ ಓಡಾಡುತ್ತಿದ್ದಾರೆ. ಸೋಂಕಿತರನ್ನು ಗುರುತಿಸುವುದು ಅಸಾಧ್ಯವಾಗಿದ್ದು, 10 ಗಂಟೆ ಬಳಿಕವೂ ಕರ್ಫ್ಯೂ ಜಾರಿಯಲ್ಲಿದ್ದರೂ ಅನಗತ್ಯ ಸಂಚರಿಸುವವರ ಸಂಖ್ಯೆ ಜಾಸ್ತಿಯಿತ್ತು. ಈ ಕಾರಣಕ್ಕೆ ಸ್ಥಳೀಯರು ಹಾಗೂ ತಾವೂ ಮಾಡಿಕೊಂಡ ಮನವಿ ಮೇರೆಗೆ ಪಾಲಿಕೆ ಕ್ರಮ ವಹಿಸಿದೆ. ಇದರಲ್ಲಿ ಇತರೆ ವಾರ್ಡ್‍ನ ಜನರಿಗೆತೊಂದರೆ ಪಡಿಸುವ ಯಾವುದೇ ಉದ್ದೇಶವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಜನರ ಆರೋಗ್ಯದ ದೃಷ್ಟಿಯಿಂದ ಕ್ರಮ:

      ಈ ಅಂಡರ್‍ಪಾಸ್ ಅನ್ನು ಬಳಸುತ್ತಿದ್ದ 30-31ನೇ ವಾರ್ಡ್‍ನ ಸದಸ್ಯರು, ಸಾರ್ವಜನಿಕರು ಈ ಅಂಡರ್‍ಪಾಸ್ ಮೂಲಕವೇ ಯಾವಾಗಲೂ ಹಾದುಹೋಗುತ್ತಿದ್ದು, ತುರ್ತು ಆಂಬ್ಯುಲೆನ್ಸ್ ಹಾಗೂ ಸೋಂಕಿತರನ್ನು ಆಸ್ಪತ್ರೆಗೆ ಕರೆದೊಯ್ಯಲು ಅಂಡರ್‍ಪಾಸ್‍ನಲ್ಲಿ ಅವಕಾಶ ಮಾಡಿಕೊಡುವಂತೆ ಆಡಳಿತಕ್ಕೆ ಮನವಿ ಮಾಡಲಾಗಿದೆ. ಸೋಮೇಶ್ವರಪುರಂ, ಎಸ್‍ಐಟಿಯ ಈ ಭಾಗ ಹಾಗೂ ಶೆಟ್ಟಿಹಳ್ಳಿ ಮುಖ್ಯರಸ್ತೆ, ನೃಪತುಂಗ ಬಡಾವಣೆ, ಮಾರುತಿ ನಗರ, ಜಯನಗರ ಆ ಭಾಗದ ನಿವಾಸಿಗಳ ಆರೋಗ್ಯ ಕಳಕಳಿಯಿಂದ ಈ ಕ್ರಮವೇ ಹೊರತು ಯಾರಿಗೂ ತೊಂದರೆ ಪಡಿಸುವುದಲ್ಲ. ನಾಗರಿಕರು ಈ ತಾತ್ಕಾಲಿಕ ಕ್ರಮಕ್ಕೆ ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap