ತುಮಕೂರು :
ನಗರ ಮತ್ತು ಪಟ್ಟಣ ಪ್ರದೇಶಗಳಿಗೆ ಸೀಮಿತವಾಗಿದ್ದ ಕೊರೊನಾ ಸೋಂಕು ಪ್ರಸಕ್ತ 2ನೇ ಅಲೆಯಲ್ಲಿ ಗ್ರಾಮೀಣ ಭಾಗಕ್ಕೆ ಹೆಚ್ಚಾಗಿ ಹಬ್ಬಿರುವುದು ಕಳವಳ ಮೂಡಿಸಿದ್ದು, ಈ ಸಂದರ್ಭದಲ್ಲಿ ಜಾಗೃತಿಯ ಜೊತೆಗೆ ಅಶಕ್ತರಿಗೆ ನೆರವಾಗುವ ಕಾರ್ಯ ಸರಕಾರದಿಂದ ತುರ್ತಾಗಿ ಆಗಬೇಕಿದೆ ಎಂದು ಪಾವಗಡ ಶ್ರೀ ರಾಮಕೃಷ್ಣ ಸೇವಾಶ್ರಮದ ಮುಖ್ಯಸ್ಥ ಸ್ವಾಮಿ ಜಪಾನಂದಜಿ ಹೇಳಿದರು.
ನಗರದ ಪತ್ರಿಕಾ ಭವನ ದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಗ್ರಾಮೀಣ ಭಾಗದಲ್ಲಿ ಸರ್ಕಾರ ಬರೀ ಟಾಸ್ಕ್‍ಫೋರ್ಸ್ ರಚಿಸಿ ಸುಮ್ಮನಾಗದೆ ತುರ್ತು ಜಾಗೃತಿ ಮೂಡಿಸಬೇಕಿದೆ. ಇಲ್ಲವಾದ ಹಳ್ಳಿಗಳ ಪರಿಸ್ಥಿತಿ ಭೀಕರವಾಗಲಿದೆ ು. ಗ್ರಾಮೀಣ ಭಾಗದ ಜನರು ಸರಿಯಾಗಿ ಮಾಸ್ಕ್ ಧರಿಸುತ್ತಿಲ್ಲ, ಸಾಮಾಜಿಕ ಅಂತರ ಕಾಪಾಡುತ್ತಿಲ್ಲ. ಸೋಂಕಿತರು ಸೂಕ್ತ ಕಾಲದಲ್ಲಿ ಸರಿಯಾದ ಚಿಕಿತ್ಸೆ ಪಡೆಯುತ್ತಿಲ್ಲ. ಇದು ಕೊರೊನಾ ಹೆಚ್ಚಳಕ್ಕೆ ಕಾರಣ ವಾಗಿದೆ ಎಂದರು.
ಔಷಧಿ ಕೊರತೆ ನೀಗಿಸಿ, ನಾನ್ ಕೋವಿಡ್ ಚಿಕಿತ್ಸೆ ಲಭ್ಯವಾಗಲಿ :
ರಾಜ್ಯದ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಕೋವಿ ಡ್‍ಗೆ ಸಂಬಂಧಿಸಿದ ಔಷಧಿ, ಮಾತ್ರೆಗಳ ಕೊರತೆಯಾಗದಂತೆ ನೋಡಿಕೊಳ್ಳಬೇಕು. ರೋಟರಿ, ಲಯನ್ಸ್, ಕಾರ್ಪೋರೇಟ್ ಸಂಸ್ಥೆಗಳು ಸೇರಿದಂತೆ ಎಲ್ಲ ರೀತಿಯ ಸಂಘ, ಸಂಸ್ಥೆಗಳು, ಸಂಘಟನೆಗಳ ಸಹಕಾರ ಪಡೆದರೆ ಮತ್ತು ಇದಕ್ಕೆ ಪೂರಕವಾಗಿ ಸಾರ್ವಜನಿಕರು ಸ್ಪಂದಿಸಿದರೆ ಕೋವಿಡ್ ಗೆಲ್ಲಲು ಸಾಧ್ಯ ಎಂದು ಅಭಿಪ್ರಾಯಪಟ್ಟ ಶ್ರೀಗಳು ಸರಕಾರಿ ಆಸ್ಪತ್ರೆಗಳಲ್ಲಿ ಬರೀ ಕೋವಿಡ್ ಚಿಕಿತ್ಸೆಯನ್ನು ಕೇಂದ್ರೀಕರಿಸಿ ಉಳಿದ ಚಿಕಿತ್ಸೆಗಳನ್ನು ನಗಣ್ಯವಾಗಿಸಿದ್ದು, ಹಲವರಿಗೆ ತೊಂದರೆಯಾಗಿದೆ. ನಾನ್ ಕೋವಿಡ್ ಚಿಕಿತ್ಸೆಗೂ ಕ್ರಮ ವಹಿಸಬೇಕು ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
