ತುಮಕೂರು :
ಕೋವಿಡ್ ಸೋಂಕಿನ ನಿಯಂತ್ರಣಕ್ಕೆ ಮಹಾನಗರಪಾಲಿಕೆ ಹಲವು ಕ್ರಮಗಳನ್ನು ಜಾರಿಗೊಳಿಸುತ್ತಿದ್ದು, ಮೂರು ವಾರ್ಡಿಗೊಂದು ಕೋವಿಡ್ ಕೇರ್ ಕಮಿಟಿ ರಚಿಸಿವ್ಯಾಕ್ಸಿನೇಷನ್, ಗಂಟಲುದ್ರವ ಪರೀಕ್ಷೆ, ಮೆಡಿಕಲ್ ಕಿಟ್ ವಿತರಣೆಯ ಜವಾಬ್ದಾರಿ ವಹಿಸಲಾಗುವುದು ಎಂದು ಮಹಾನಗರಪಾಲಿಕೆ ಮೇಯರ್ ಬಿ.ಜಿ.ಕೃಷ್ಣಪ್ಪ ತಿಳಿಸಿದರು.
ಗೂಗಲ್ ಮೀಟ್‍ನಲ್ಲಿ ನಡೆದ ತುಮಕೂರು ಮಹಾನಗರಪಾಲಿಕೆಯ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಕೋವಿಡ್ ಸೋಂಕು ನಿಯಂತ್ರಣ ಸಂಬಂಧ ವಾರ್ಡ್‍ವಾರು ಸಮಿತಿ ರಚಿಸಿ ವ್ಯಾಕ್ಸಿನ್ , ಪರೀಕ್ಷೆಗಳು ಹೆಚ್ಚಳ ಮಾಡಬೇಕೆಂಬ ಸದಸ್ಯರ ಬೇಡಿಕೆಗೆ ಪ್ರತಿಕ್ರಿಯಿಸಿದ ಮೇಯರ್ ಅವರು ನಗರ ವ್ಯಾಪ್ತಿಯಲ್ಲಿ ಆಶಾ, ಎಎನ್‍ಎಂ ಕಾರ್ಯಕರ್ತರ ಕೊರತೆಯಿದೆ. ಸ್ವಯಂ ಸೇವಕರ ನೆರವಿನೊಂದಿಗೆ ಮೂರು ವಾರ್ಡಿಗೊಂದು ಕೋವಿಡ್ ಕೇರ್ ಕಮಿಟಿ ರಚಿಸಿ ಸೋಂಕು ನಿಯಂತ್ರಣ ಕ್ರಮಗಳ ಜಾರಿಗೆ ಯತ್ನಿಸಲಾಗುವುದು ಎಂದರು.
ಪಾಲಿಕೆ ಕೈಗೊಂಡ ಪರಿಣಾಮಕಾರಿ ಕ್ರಮಗಳಿಂದ ನಗರದಲ್ಲಿ ಸೋಂಕಿನ ಪಾಸಿಟಿವಿಟಿ ಪ್ರಮಾಣ ಕಡಿಮೆಯಾಗುತ್ತಿದೆ. ನಗರ ಕೆಂಪು ವಲಯದಿಂದ ಕಿತ್ತಳೆ ವಲಯಕ್ಕೆ ಬಂದಿದ್ದು, ಇದನ್ನು ಹಸಿರು ವಲಯಕ್ಕೆ ತರಲು ಎಲ್ಲಾ ರೀತಿ ಶ್ರಮ ಹಾಕಲಾಗುತ್ತಿದೆ ಎಂದರು. ಚರ್ಚಿಸಲಾಗುವುದು ಎಂದರು.
ರಸ್ತೆ, ವೃತ್ತಕ್ಕೆ ನಾಮಕರಣ ಮುಂದಿನ ಸಭೆಯಲ್ಲಿ ತೀರ್ಮಾನ: ನಗರದ ವಿವಿಧ ವೃತ್ತಗಳಿಗೆ ಹಾಗೂ ರಸ್ತೆಗಳಿಗೆ ಹೆಸರಿಡುವ ಸಂಬಂಧ ವಿವಿಧ ಸದಸ್ಯರು, ನಾಗರಿಕ ಸಮಿತಿಗಳು, ಹಾಲಿ, ಮಾಜಿ ಜನಪ್ರತಿನಿಧಿಗಳಿಂದ ಬಂದಿರುವ ಪ್ರಸ್ತಾವನೆಯನ್ನು ಮುಂದಿನ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ತೀರ್ಮಾನಿಸಲಾಗುವುದು ಎಂದರು.
ಶಾಸಕರು, ಸಚಿವರಿಗೆ ಕೃತಜ್ಞತೆ:ಬರಿದಾಗುತ್ತಿದ್ದ ನಗರದ ಬುಗುಡನಹಳ್ಳಿ ಜ¯ ಸಂಗ್ರಹಗಾರಕ್ಕೆ ಹೇಮೆ ನೀರು ಹರಿಸಲು ಸಹಕರಿಸಿದ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ನಗರದ ಶಾಸಕರಿಗೆ ಜನತೆಯ ಪರವಾಗಿ ಧನ್ಯವಾದ ಅರ್ಪಿಸುವುದಾಗಿ ಮೇಯರ್ ಸಭೆಯಲ್ಲಿ ತಿಳಿಸಿದರು.
ಪೌರಕಾರ್ಮಿಕರಿಗೆ ಸ್ನಾನದ ಕೊಠಡಿಗಳ ಹಾಗೂ ವಿಶ್ರಾಂತಿಗೃಹ ನಿರ್ಮಾಣ ಕಾಮಗಾರಿಗೆ ಅನುಮೋದನೆ ನೀಡಲಾಯಿತು. ಸಂಸದ ಜಿ.ಎಸ್.ಬಸವರಾಜ್, ಉಪ ಮೇಯರ್ ನಾಜಿಮಾಬಿ, ಸ್ಥಾಯಿ ಸಮಿತಿ ಅಧ್ಯಕ್ಷರಾದ ನಯಾಜ್ ಅಹಮದ್, ನಳಿನಾ ಇಂದ್ರಕುಮಾರ್, ಧರಣೇಂದ್ರಕುಮಾರ್, ಮುಜಿದಾಖಾನಂ ಹಾಗೂ ಸದಸ್ಯರುಗಳು ಪಾಲ್ಗೊಂಡರು.
ಬೇರೆ ಇಲಾಖೆ ಕಾಮಗಾರಿಗಳಿಗೆ ಪಾಲಿಕೆ ಎನ್‍ಒಸಿ ಕಡ್ಡಾಯ :
ಸ್ಮಾರ್ಟ್ ಸಿಟಿ ಕಾಮಗಾರಿಗಳ ಕುರಿತು ಸ್ಮಾರ್ಟ್ ಸಿಟಿ ಅಧಿಕಾರಿ ಹಾಗೂ ಪಾಲಿಕೆ ಅಧಿಕಾರಿಗಳನ್ನು ಒಳಗೊಂಡಂತೆ ಲಾಕ್‍ಡೌನ್ ಮುಗಿದ ನಂತರ ಒಂದು ಸಭೆ ಕರೆದು ಚರ್ಚಿಸಲಾಗುವುದು ಎಂದು ತಿಳಿಸಿದ ಮೇಯರ್ ಅವರು ಸ್ಮಾರ್ಟ್ ಸಿಟಿ, ಪಿಡಬ್ಲ್ಯೂಡಿ, ಬೆಸ್ಕಾಂ ಕಾಮಗಾರಿಗಳಿಗೆ ಪಾಲಿಕೆಯಿಂದ ಎನ್‍ಒಸಿ ಪಡೆಯುವುದು ಕಡ್ಡಾಯ ಎಂದರು.