ತುಮಕೂರು :
ಕಳೆದಮೂರು ದಿನಗಳಿಂದ ಕೋವಿಡ್ ವ್ಯಾಕ್ಸಿನ್ ಇಲ್ಲದೆ ಪರದಾಡಿದ್ದ ಜಿಲ್ಲೆಯ ಜನರಿಗೆ ಹಾಕಲು ಬುಧವಾರ ಸಂಜೆ 20500 ವ್ಯಾಕ್ಸಿನ್ ಏನೋ ಜಿಲ್ಲೆಗೆ ರವಾನೆಯಾಯಿತು. ಆದರೆ ಒಂದೇ ದಿನಕ್ಕೆ ವ್ಯಾಕ್ಸಿನ್ ಶೇ.95ರಷ್ಟು ಖಾಲಿಯಾಗಿದ್ದು, ಲಸಿಕೆಗಿರುವ ಬೇಡಿಕೆಗೆ ಸಾಕ್ಷಿ ಎನಿಸಿದೆ.
18 ರಿಂದ 44 ವರ್ಷದೊಳಗಿನವರಿಗಾಗಿ 1100 ಹಾಗೂ 45 ವರ್ಷ ಮೇಲ್ಪಟ್ಟವರಿಗಾಗಿ 9500 ಡೋಜ್ ವ್ಯಾಕ್ಸಿನ್ ಜಿಲ್ಲೆಗೆ ಲಭ್ಯವಾಗಿತ್ತು. ಈ ಪೈಕಿ 19,661 ಡೋಸೆಜ್ ಲಸಿಕೆಯನ್ನು ಜಿಲ್ಲೆಯಾದ್ಯಂತ 260 ಸೆಂಟರ್‍ಗಳಲ್ಲಿ ವಿತರಿಸಿದ್ದು, ಈ ಪೈಕಿ 18,775 ಮೊದಲಡೋಜ್ ಹಾಗೂ ಅವಧಿ ಪೂರೈಸಿದ 875 ಮಂದಿಗೆ ಎರಡನೇ ಡೋಜ್ ಲಸಿಕೆ ಹಾಕಲಾಗಿದೆ. ಇದರೊಂದಿಗೆ ಜಿಲ್ಲೆಯಾದ್ಯಂತ ಈವರೆಗೆ 5.18,527 ಲಕ್ಷ ಮಂದಿಗೆ ಮೊದಲ ಡೋಜ್ ಲಸಿಕೆ ನೀಡಿದ್ದು, ಎರಡು ಡೋಜ್ ಲಸಿಕೆ ಪಡೆದವರ ಸಂಖ್ಯೆ 1,16,384ರಷ್ಟಿದೆ. ಜಿಲ್ಲೆಯ ಒಟ್ಟು 27 ಲಕ್ಷ ಜನಸಂಖ್ಯೆಯಲ್ಲಿ ಈವರೆಗೆ 6, 34,911 ಮಂದಿಗೆ ಲಸಿಕೆ ನೀಡಲಾಗಿದೆ.
ಕೋವ್ಯಾಕ್ಸಿನ್ 2ನೇ ಡೋಜ್ ಜಿಲ್ಲಾ, ತಾಲೂಕು ಕೇಂದ್ರದಲ್ಲಿ ಲಭ್ಯ:
ಕೋವ್ಯಾಕ್ಸಿನ್ ಮೊದಲ ಡೋಜ್ ಪಡೆದವರ ಪೈಕಿ 3500ರಷ್ಟು ಮಂದಿ ಇನ್ನೂ ಎರಡನೇ ಡೋಜ್ ಲಸಿಕೆ ಪಡೆಯುವುದು ಬಾಕಿಯಿದ್ದು, ಸದ್ಯ ಜಿಲ್ಲಾ ಹಾಗೂ ತಾಲೂಕು ಕೇಂದ್ರದ ಆಸ್ಪತ್ರೆಯ ವ್ಯಾಕ್ಸಿನ್ ಸೆಂಟರ್‍ನಲ್ಲಿ ಮಾತ್ರ ಕೋವ್ಯಾಕ್ಸಿನ್ 2ನೇ ಡೋಜ್ ಲಸಿಕೆ ಲಭ್ಯವಿದೆ. ಕೋವ್ಯಾಕ್ಸಿನ್ ಲಸಿಕೆ ಪಡೆದು 4 ವಾರ ಕಳೆದಿರುವವರು ಕಡ್ಡಾಯವಾಗಿ 2ನೇಡೋಜ್ ಜಿಲ್ಲಾ ಹಾಗೂ ತಾಲೂಕು ಕೇಂದ್ರಕ್ಕೆ ಬಂದು ಪಡೆಯಬೇಕು.ಇಲ್ಲವಾದಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಸುವುದಿಲ್ಲ ಎಂದು ಜಿಲ್ಲಾ ಆರ್‍ಸಿಎಚ್ ಅಧಿಕಾರಿ ಡಾ.ಕೇಶವರಾಜು ತಿಳಿಸಿದ್ದಾರೆ.
ಬುಧವಾರ ಸಂಜೆ ಬಂದ 20,500 ಡೋಜ್ ಲಸಿಕೆಯನ್ನು ಗುರುವಾರ ಜಿಲ್ಲೆಯ 260 ಸೆಂಟರ್‍ಗೂ ಹಂಚಿಕೆ ಮಾಡಿ 19,661 ಮಂದಿಗೆ ಲಸಿಕೆ ಹಾಕಲಾಗಿದ್ದು, ಒಂದೇ ದಿನವೇ ಶೇ.95ರಷ್ಟು ಲಸಿಕೆ ಹಾಕಲಾಗಿದೆ. ಲಸಿಕೆ ಪೂರೈಕೆಯಾದರೆ ಶುಕ್ರವಾರ ಮತ್ತೆ ಲಸಿಕೆ ಹಾಕಲಾಗುವುದು. ಕೋವ್ಯಾಕ್ಸಿನ್ 2ನೇ ಡೋಜ್ ಲಸಿಕೆ ಲಭ್ಯವಿದ್ದು, ಅವಧಿಪೂರೈಸಿರುವವರು ತಪ್ಪದೇ ಜಿಲ್ಲಾ ಹಾಗೂ ತಾಲೂಕು ಕೇಂದ್ರದಲ್ಲಿ ಕೋವ್ಯಾಕ್ಸಿನ್ ಲಸಿಕೆ ಪಡೆಯಿರಿ.
-ಡಾ.ಕೇಶವರಾಜು, ಜಿಲ್ಲಾ ಆರ್‍ಸಿಎಚ್ ಅಧಿಕಾರಿ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
