ವಾಹನದ ಗ್ಲಾಸ್‍ಗಳನ್ನು ಹೊಡೆದು ಕಳವು ; ಆರೋಪಿ ಸೆರೆ

 ತುಮಕೂರು : 

      ನಗರದ ವಿವಿಧೆಡೆ ಮನೆ ಮುಂದೆ ನಿಲ್ಲಿಸಿದ್ದ ಕಾರು, ಆಟೊಗಳ ಡೋರ್‍ಗ್ಲಾಸ್‍ಗಳನ್ನು ಹೊಡೆದು ಹಾಕಿ ಡ್ಯಾಜ್‍ಬೋರ್ಡ್‍ನಲ್ಲಿ ವಸ್ತುಗಳನ್ನು ಕದಿಯಲೆತ್ನಿಸುತ್ತಿದ್ದ ಆರೊಪಿಯನ್ನು ನಗರಠಾಣೆ ಪೊಲೀಸರು ಸೆರೆಹಿಡಿದಿದ್ದಾರೆ.

     ಬಂಧಿತನನ್ನು ನಗರದ ಎನ್.ಆರ್.ಕಾಲೋನಿ ವಾಸಿ 21 ವರ್ಷದ ಸುದೀಪ್ ಅಲಿಯಾಸ್ ಗಣೇಶ್ ಎಂದು ಗುರುತಿಸಲಾಗಿದ್ದು ಈತ ಜೂ.21 ಹಾಗೂ 22ರಂದು ರಾತ್ರಿ ವೇಳೆಯಲ್ಲಿತುಮಕೂರು ನಗರ ಪೊಲೀಸ್‍ಠಾಣಾ ವ್ಯಾಪ್ತಿಯರಿಲೇಬಲ್ ಲೇಔಟ್, ಸಾಯಿ ಬಡಾವಣೆ ಮತ್ತುಶ್ರೀರಾಮನಗರ ಹಾಗೂ ಹೊಸಬಡಾವಣೆ ಪೊಲೀಸ್‍ಠಾಣಾ ವ್ಯಾಪ್ತಿಯ ಆರ್.ಟಿ ನಗರದಲ್ಲಿ ಮನೆಯ ಮುಂದೆ ನಿಲ್ಲಿಸಿದ್ದಕಾರು ಮತ್ತು ಗೂಡ್ಸ್ ಆಟೊಗಳ ಡೋರ್ ಗ್ಲಾಸ್‍ಗಳನ್ನು ಹೊಡೆದು ಹಾಕಿ ಸಾರ್ವಜನಿಕರಲ್ಲಿ ಭೀತಿ ಸೃಷ್ಟಿಸುತ್ತಿದ್ದ.

      ಎಳನೀರು ಮಾರುತ್ತಿದ್ದ ಈತ ಗ್ರಾಮಾಂತರ ಠಾಣಾ ವ್ಯಾಪ್ತಿಯ ಆಟೊ ಕಳವು ಪ್ರಕರಣಗಳಲ್ಲಿ ಭಾಗಿಯಾಗಿ 4 ತಿಂಗಳ ಹಿಂದೆ ಜೈಲಿನಿಂದ ಬಿಡುಗಡೆಯಾಗಿದ್ದ. ಲಾಕ್‍ಡೌನ್ ಕಾರಣದಿಂದ ಕೆಲಸವಿಲ್ಲದೆ ವಾಹನಗಳ ಡ್ಯಾಶ್‍ಬೋರ್ಡ್‍ನಲ್ಲಿ ಮೊಬೈಲ್, ಹಣ ಬೆಲೆಬಾಳುವ ವಸ್ತುಗಳಿನ್ನಿಟ್ಟಿರುತ್ತಾರೆ. ಅದಕ್ಕೆ ಕದಿಯಬಹುದೆಂದು ಗ್ಲಾಸ್ ಹೊಡೆಯುವ ಕೃತ್ಯವೆಸಗುತ್ತಿದ್ದಾಗಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ.
ಆರೋಪಿಯನ್ನು ಎಎಸ್ಪಿ ಟಿ.ಜೆ.ಉದೇಶ್, ಡಿವೈಎಸ್ಪಿ ಶ್ರೀನಿವಾಸ್ ಮಾರ್ಗದರ್ಶನದಲ್ಲಿ ನಗರ ಸಿಪಿಐ ನವೀನ್,ಪಿಎಸ್‍ಐ ಮಂಜುನಾಥ್ ಹಾಗೂ ಸಿಬ್ಬಂದಿಗಳಾದ ರಾಜಣ್ಣ, ರಂಗನಾಥಕೆ, ಪ್ರಕಾಶ್, ನವೀನ್‍ಕುಮಾರ್, ಶಿವಶಂಕರ್, ಯೋಗೀಶ್ ಜಗದೀಶಯ್ಯರವರುಗಳ ತಂಡ ಬಂಧಿಸಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap