ತುಮಕೂರು :
ಸ್ಪೈನ್ ಸಮಸ್ಯೆಯಿಂದ ನಡೆಯಲಾಗದೆ ರಕ್ತದೊತ್ತಡ, ಮಧುಮೇಹದಿಂದ ಬಳಲುತ್ತಿದ್ದ 70 ವರ್ಷದ ವೃದ್ಧರೊಬ್ಬರಿಗೆ ಸ್ಪೈನ್‍ನ ಮೂರು ಭಾಗಕ್ಕೆ ಏಕಕಾಲಕ್ಕೆ ಶಸ್ತ್ರಚಿಕಿತ್ಸೆ ಮಾಡುವಲ್ಲಿ ತುಮಕೂರಿನ ದೊಡ್ಡಮನೆ ಆರ್ಥೋ ಅಂಡ್ ಸ್ಪೈನ್ ಸೆಂಟರ್ ಮುಖ್ಯಸ್ಥ ಡಾ.ಕೆ.ವಿಜಯಕುಮಾರ್ ಯಶಸ್ವಿಯಾಗಿದ್ದಾರೆ.
ಸಿರಾ ಮೂಲದ ದಸ್ತಗಿರ್ ಎಂಬ ವೃದ್ಧರು ಸೊಂಟ ಬೆನ್ನು ಕುತ್ತಿಗೆ ನೋವಿನಿಂದ ನರಳುತ್ತಿದ್ದು, ಎರಡೂ ಕಾಲು ಸ್ವಾಧೀನ ಕಳೆದುಕೊಂಡು, ನಿತ್ಯಕರ್ಮವನ್ನು ಮಾಡಲಾದೆ ನಾಲ್ಕು ತಿಂಗಳಿಂದ ಹಾಸಿಗೆ ಹಿಡಿದಿದ್ದರು. ಈ ಹಿಂದೆ ಅನೇಕ ಆಸ್ಪತ್ರೆಗಳಿಗೆ ಹೋಗಿ ಬಂದಿದ್ದು, ಚೇತರಿಕೆಯಾಗಿರಲಿಲ್ಲ. ಕ್ಲಿಷ್ಟಕರ ಶಸ್ತ್ರಚಿಕಿತ್ಸೆ ನಡೆಸಬೇಕಾದ್ದು ಅನಿವಾರ್ಯವಾಗಿತ್ತು, ಕಳೆದ ವಾರ ಆಸ್ಪತ್ರೆಗೆ ದಾಖಲಾಗಿದ್ದ ಇವರನ್ನು ಪರೀಕ್ಷಿಸಿ ಕೋವಿಡ್ ಕಾಲಘಟ್ಟದಲ್ಲಿ ಹೆಚ್ಚು ಸುರಕ್ಷತಾ ಕ್ರಮಗಳನ್ನು ಪಾಲಿಸಿ ಶಸ್ತ್ರ ಚಿಕಿತ್ಸೆ ಮಾಡಿ 2ದಿನಕ್ಕೆ ರೋಗಿ ಚೇತರಿಸಿಕೊಳ್ಳುವಂತಾಗಿದೆ.
ಏಕಕಾಲಕ್ಕೆ ಅದರಲ್ಲೂ ಕೋವಿಡ್ ಕಾಲಘಟ್ಟದ ಈ ಸಂದರ್ಭದಲ್ಲಿ ವೃದ್ಧರಿಗೆ 3 ಶಸ್ತ್ರಚಿಕಿತ್ಸೆಯನ್ನು ಒಂದೇ ಬಾರಿಗೆ ನೆರವೇರಿಸುವುದು ಸವಾಲಿನ ಸಂಗತಿಯೇ ಸರಿ. ರೋಗಿಯ ಆತ್ಮವಿಶ್ವಾಸದಿಂದ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು ನಮ್ಮೆಲ್ಲ ವೈದ್ಯಕೀಯ ತಂಡಕ್ಕೆ ಖುಷಿ ತಂದಿದೆ.
-ಡಾ.ಕೆ.ವಿಜಯಕುಮಾರ್, ಕೀಲು, ಮೂಳೆ ರೋಗ ತಜ್ಞರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ