ರಾಜ್ಯ ಸಭೆಯಲ್ಲಿ ಗಮನ ಸೆಳೆದ ಇ-ಫೈಲಿಂಗ್ ಪೋರ್ಟಲ್ ಅವ್ಯವಸ್ಥೆ

 ತುಮಕೂರು :

      ತೆರಿಗೆದಾರರಿಗೆ ಅನುಕೂಲವಾಗಲೆಂದು ಜಾರಿಗೆ ತಂದ ಇ ಪೋರ್ಟಲ್ ಫೈಲಿಂಗ್ ಅವ್ಯವಸ್ಥೆ ರಾಜ್ಯಸಭೆಯಲ್ಲಿ ಪ್ರತಿಧ್ವನಿಸಿತು.

      ಕೆ.ಸಿ.ವೇಣುಗೋಪಾಲ್, ಸಂಜಯ್ ಸೇಠ್ ಅವರುಗಳು ರಾಜ್ಯಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿ ನಾಲ್ಕು ಅಂಶಗಳ ಬಗ್ಗೆ ಗಮನ ಸೆಳೆದರು. ಆದಾಯ ತೆರಿಗೆ ವ್ಯವಸ್ಥೆಯಲ್ಲಿ ಇ ಫೈಲಿಂಗ್ ಪೋರ್ಟಲ್ ಜಾರಿಗೆ ತಂದಿರುವ ಉದ್ದೇಶ, ಈ ವ್ಯವಸ್ಥೆಯಲ್ಲಿ ತೆರಿಗೆದಾರರಿಗೆ, ವೃತ್ತಿನಿರತರಿಗೆ ಎದುರಾಗಿರುವ ಸಮಸ್ಯೆಗಳು ಸರ್ಕಾರದ ಗಮನಕ್ಕೆ ಬಂದಿವೆಯೇ? ಈ ಸಮಸ್ಯೆಗಳ ನಿವಾರಣೆಗೆ ಕೈಗೊಂಡಿರುವ ಕ್ರಮಗಳೇನು? ತಾಂತ್ರಿಕ ತೊಂದರೆಗಳು ಎಷ್ಟು ಅವಧಿಯೊಳಗೆ ನಿವಾರಣೆಯಾಗುತ್ತವೆ ಎಂಬ ಬಗ್ಗೆ ವಿತ್ತ ಸಚಿವಾಲಯದ ಗಮನ ಸೆಳೆದರು.
ಇದಕ್ಕೆ ಉತ್ತರಿಸಿದ ಹಣಕಾಸು ರಾಜ್ಯ ಸಚಿವ ಪಂಕಜ್ ಚೌಧರಿ ಅವರು ಸರ್ಕಾರವು ಪ್ರಮುಖ 6 ಅಂಶಗಳ ಗುರಿಯೊಂದಿಗೆ ಇ ಫೈಲಿಂಗ್ ಪೋರ್ಟಲ್ ವ್ಯವಸ್ಥೆಯನ್ನು ಜಾರಿಗೆ ತಂದಿತು. ತೆರಿಗೆದಾರರು ತಾಂತ್ರಿಕ ತೊಂದರೆಗಳಿಂದ ಕಷ್ಟ ಅನುಭವಿಸದಿರಲಿ, ಪಾವತಿ ವಿಧಾನ ಸರಳವಾಗಿರಲಿ, ಎಲ್ಲಾ ವಹಿವಾಟು ಮತ್ತು ಅಪ್ಲೋಡ್ ಒಂದೇ ಡ್ಯಾಶ್ ಬೋರ್ಡ್‍ನಲ್ಲಿ ಗೋಚರಿಸಲಿ, ತೆರಿಗೆದಾರರಿಗೆ ಅರಿವು ಮತ್ತು ತೆರಿಗೆ ವ್ಯವಸ್ಥೆಯ ಜ್ಞಾನ ದೊರಕಲಿ ಆ ಮೂಲಕ ಸ್ವಯಂ ಪ್ರೇರಿತರಾಗಿ ತೆರಿಗೆ ಪಾವತಿಸಲು ಮುಂದಾಗಲಿ ಇತ್ಯಾದಿ ಅಂಶಗಳನ್ನು ಹೊಂದಿ ಇ ಪೋರ್ಟಲ್ ಜಾರಿಗೆ ತರಲಾಯಿತು.

      ತೆರಿಗೆದಾರರು, ತೆರಿಗೆಯ ವೃತ್ತಿನಿರತರು ಮತ್ತು ಈ ಕ್ಷೇತ್ರದಲ್ಲಿ ಇರುವ ಸ್ಟೇಕ್ ಹೋಲ್ಡರ್ಸ್‍ಗಳಿಗೆ ಇ ಪೋರ್ಟಲ್‍ನಿಂದ ಅಡಚಣೆ ಉಂಟಾಗುತ್ತಿರುವುದು ಗಮನಕ್ಕೆ ಬಂದಿದೆ ಎಂಬುದನ್ನು ಸಚಿವರು ಒಪ್ಪಿಕೊಂಡರು. ಮುಂದುವರಿದು ಮಾತನಾಡಿದ ಅವರು ರಾಷ್ಟ್ರಾದ್ಯಂತ 700 ಇ ಮೇಲ್ ಸಂದೇಶಗಳು ವಿವಿಧ ತೊಂದರೆಗಳನ್ನು ಉಲ್ಲೇಖಿಸಿ ವಿತ್ತ ಸಚಿವಾಲಯಕ್ಕೆ ಬಂದಿವೆ. ಈ ಬಗ್ಗೆ ಈಗಾಗಲೇ ವೃತ್ತಿನಿರತರೊಂದಿಗೆ ಅಡಚಣೆಗಳ ಬಗ್ಗೆ ಚರ್ಚಿಸಲಾಗಿದೆ.

      ಇ ಪೋರ್ಟಲ್ ಅಭಿವೃದ್ಧಿಪಡಿಸಿರುವ ಇನ್ಫೋಸಿಸ್ ಜೊತೆ ಮಾತನಾಡಲಾಗಿದೆ. ತಾಂತ್ರಿಕ ಅಡಚಣೆಯನ್ನು ಶೀಘ್ರವೇ ಸರಿಪಡಿಸಿಕೊಡುವುದಾಗಿ ಒಪ್ಪಿದ್ದಾರೆ. ಕೆಲವೊಂದು ಅಡಚಣೆಗಳನ್ನು ನಿವಾರಿಸಲಾಗಿದೆ. ಆದರೂ ಪೋರ್ಟಲ್ ನಿಧಾನಗತಿಯಲ್ಲಿ ಮಾಹಿತಿ ತೆಗೆದುಕೊಳ್ಳುತ್ತಿರುವುದರಿಂದ ತೆರಿಗೆದಾರರು ತೊಂದರೆಯಲ್ಲಿ ಸಿಲುಕಿರುವುದು ನಿಜ. ತೆರಿಗೆದಾರರ ಸಮಸ್ಯೆಗಳನ್ನು ಗಣನೆಗೆ ತೆಗೆದುಕೊಂಡು ಇನ್ಫೋಸಿಸ್ ಜೊತೆ ವಿತ್ತ ಸಚಿವಾಲಯವು ಚರ್ಚಿಸಿದೆ. ಶೀಘ್ರವೇ ಸಮಸ್ಯೆಗಳು ಬಗೆಹರಿಯಲಿವೆ ಎಂದು ಸಚಿವರು ಉತ್ತರಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap