ತುಮಕೂರು :
ಹಳೆಯ ದ್ವೇಷ ಮತ್ತು ಜಮೀನು ವಿವಾದದ ಹಿನ್ನೆಲೆಯಲ್ಲಿ ಮಹಿಳೆಯನ್ನು ಕೊಲೆಗೈದಿದ್ದ ಆರೋಪಿಯನ್ನು ಕೋರಾ ಪೊಲೀಸರು ಬಂಧಿಸಿದ್ದಾರೆ.
ತಾಲ್ಲೂಕಿನ ಕೋಡಿ ತಿಮ್ಮನಹಳ್ಳಿ ಗ್ರಾಮದ ನಾಗರಾಜು ಎಂಬಾತನೆ ಬಂಧಿತ ಆರೋಪಿಯಾಗಿದ್ದಾನೆ. ಈತ ಕಳೆದ 13 ದಿನಗಳ ಹಿಂದೆ ಕೋಡಿ ತಿಮ್ಮನಹಳ್ಳಿ ಗ್ರಾಮದ ಸಿದ್ಧಗಂಗಮ್ಮ ಎಂಬ ಮಹಿಳೆ ಕುರಿಗಳನ್ನು ಮೇಯಿಸಲು ಹೋಗಿದ್ದಾಗ ಈಕೆಯ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿ ಕೊಲೆಗೈದು ಪರಾರಿಯಾಗಿದ್ದನು. ಈ ಸಂಬಂಧ ಕೋರಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು.
ಬಂಧಿತ ಆರೋಪಿ ನಾಗರಾಜು ಸಿದ್ಧಗಂಗಮ್ಮನವರ ಪತಿಯ ಸೋದರ ಸಂಬಂಧಿಯಾಗಿದ್ದು, ಈ ಎರಡು ಕುಟುಂಬಗಳ ಮಧ್ಯೆ ಜಮೀನಿನ ವಿಷಯವಾಗಿ ಆಗಿಂದಾಗ್ಗೆ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ದ್ವೇಷ, ವೈಮನಸ್ಯ ಇವರ ನಡುವೆ ಇತ್ತು ಎನ್ನಲಾಗಿದೆ. ಈ ವಿಷಯವಾಗಿ ಸಿದ್ಧಗಂಗಮ್ಮ ಅವರ ಮೇಲೆ ಏಕಾಏಕಿ ಮಚ್ಚಿನಿಂದ ದಾಳಿ ನಡೆಸಿದ ಆರೋಪಿ ನಾಗರಾಜು ಕೊಲೆ ಮಾಡಿ ಪರಾರಿಯಾಗಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ