ತುಮಕೂರು :
ಜಿಲ್ಲೆಗೆ ಹೇಮಾವತಿ ನೀರು ಗೊರೂರು ಜಲಾಶಯದಿಂದ ಹರಿಯಲಾರಂಭಿಸಿದ್ದು, ತುಮಕೂರು ನಾಲಾ ವಲಯದ ಪಟ್ರಾವತನಹಳ್ಳಿ ಬಳಿಯ 106ನೇ ಎಸ್ಕೆಪ್‍ಗೇಟ್ ಗೇಟ್ ಮೂಲಕ ಕಳ್ಳಂಬೆಳ್ಳ-ಶಿರಾ ಕಡೆಗೆ ಹರಿಸಲಾಗುತ್ತಿದೆ.
ಹೇಮಾವತಿ ನದಿ ನೀರಿನ ಪಾತ್ರದಲ್ಲಿ ಹೆಚ್ಚು ಮಳೆಯಾಗುತ್ತಿದ್ದು ಈ ಸಂದರ್ಭವನ್ನು ಬಳಸಿಕೊಂಡು ನಮ್ಮ ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳು ಯಾವುದೇ ರಾಜಕೀಯ ಒಳಜಗಳಗಳಿಲ್ಲದೆ ಒಗ್ಗಟ್ಟಿನಿಂದ ನಿಗದಿತ 24 ಟಿಎಂಸಿ ನೀರನ್ನು ನಮ್ಮ ಕೆರೆಗಳಿಗೆ ತುಂಬಿಸಿಕೊಳ್ಳುವ ಪ್ರಯತ್ನ ಮಾಡಬೇಕಿದೆ ಎಂದು ಸಿರಾ ಭಾಗದ ಸಾಮಾಜಿಕ ಚಿಂತಕ ರೂಪೇಶ್ ಕೃಷ್ಣಯ್ಯ ಒತ್ತಾಯಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
