ತುಮಕೂರು : ಜಿಲ್ಲೆಯ ನೂತನ ಸಚಿವರ ಪರಿಚಯ

ಜೆ.ಸಿ.ಮಾಧುಸ್ವಾಮಿ 

ಶಾಸಕರು ಚಿಕ್ಕನಾಯಕನಹಳ್ಳಿ ಕ್ಷೇತ್ರ
ವಯಸ್ಸು: 68 ವರ್ಷ
ವಿದ್ಯಾರ್ಹತೆ: ಬಿ.ಎಸ್ಸಿ, ಎಂಎ, ಎಲ್‍ಎಲ್‍ಬಿ.
ವೃತ್ತಿ: ವಕೀಲರು, ಕೃಷಿಕರು.
ಕುಟುಂಬ:
ತಂದೆ: ಎಸ್.ಚಂದ್ರಶೇಖರಯ್ಯ, ತಾಯಿ: ಜೆ.ಎಸ್.ಸುವರ್ಣಮ್ಮ. ಪತ್ನಿ: ಎಂ.ಪಿ.ತ್ರಿವೇಣಿ. ಪುತ್ರ: ಡಾ.ಅಭಿಜ್ಞ, ಪುತ್ರಿ: ಡಾ.ಅಪೇಕ್ಷಾ.

ಸಹಕಾರ -ರಾಜಕೀಯ ಜೀವನ:

     ಸಹಕಾರಿ ರಂಗದ ಮೂಲಕ ಸಾಮಾಜಿಕ ಸೇವಾ ಜೀವನ ಆರಂಭ. 1987-1993ರವರೆಗೆ ಕೆಎಂಎಫ್ ಅಧ್ಯಕ್ಷ.
1980ರಲ್ಲಿ ಜನತಾ ಪಕ್ಷದ ಜಿಲ್ಲಾಧ್ಯಕ್ಷ. 1986ರಲ್ಲಿ ಜಿಲ್ಲಾ ಪರಿಷತ್ ಸದಸ್ಯ. ಸಿಎಂ ಆಗಿದ್ದ ರಾಮಕೃಷ್ಣ ಹೆಗ್ಗಡೆ ಅವರ ನೀಲಗಣ್ಣಿನ ಹುಡುಗನೆಂದೇ ಬಿಂಬಿತವಾಗಿದ್ದ ಜೆಸಿಎಂ 1989ರಲ್ಲಿ ಶಾಸಕರಾಗಿ ಮೊದಲ ಬಾರಿಗೆ ಜನತಾದಳದಿಂದ ಆಯ್ಕೆ. 1997ರಲ್ಲಿ ಉಪಚುನಾವಣೆ, 2004 ಹಾಗೂ 2018ರ ಸಾರ್ವತ್ರಿಕ ಚುನಾವಣೆಯಲ್ಲಿ ಆಯ್ಕೆ. ಜೆಡಿಯು, ಕೆಜೆಪಿ ಬಳಿಕ ಬಿಜೆಪಿ ಪಕ್ಷ ಸೇರ್ಪಡೆ. ಬಿ.ಎಸ್.ಯಡಿಯೂರಪ್ಪ ಸರಕಾರದಲ್ಲಿ ಕಾನೂನು ಸಂಸದೀಯ ವ್ಯವಹಾರ, ಸಣ್ಣ ನೀರಾವರಿ ಹಾಗೂ ತುಮಕೂರು, ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾಗಿ ಕಾರ್ಯನಿರ್ವಹಣೆ.

ವಿಶೇಷತೆ:  ಸಂವಿಧಾನ, ಕಾನೂನುಗಳ ಆಳ ಜ್ಞಾನ. ನೇರ ನಡೆ. ಉತ್ತಮ ಸಂಸದೀಯ ಪಟುವೆಂಬ ಹೆಗ್ಗಳಿಕೆ.

 ಬಿ.ಸಿ.ನಾಗೇಶ್

ಶಾಸಕರು,  ತಿಪಟೂರು ಕ್ಷೇತ್ರ
ವಯಸ್ಸು: 62.
ವಿದ್ಯಾರ್ಹತೆ: ಬಿ.ಇ. ಪದವೀಧರರು.
ಮೂಲ ವೃತ್ತಿ: ಕೃಷಿ, ಕೊಬ್ಬರಿ ವ್ಯಾಪಾರ:
ಕುಟುಂಬ: ತಂದೆ: ಲೇಟ್ ಬಿ.ಎಸ್.ಚಂದ್ರಶೇಖರಯ್ಯ, ಮಾಜಿ ಶಾಸಕರು, ತಾಯಿ: ಲೇಟ್ ಸಾವಿತ್ರಮ್ಮ.
ಪತ್ನಿ: ವೀಣಾ, ಓರ್ವ ಪುತ್ರ, ಪುತ್ರಿ.

ಸಂಘಟನೆ, ರಾಜಕೀಯದ ಹಾದಿ:

     ವಿದ್ಯಾರ್ಥಿ ದಿನಗಳಲ್ಲೇ 1975ರಲ್ಲಿ ತುರ್ತು ಪರಿಸ್ಥಿತಿ ವಿರುದ್ಧದ ಹೋರಾಟದಲ್ಲಿ ಸೆರೆಮನೆ ವಾಸ
ಎಬಿವಿಪಿ ಬೆಂಗಳೂರು ವಿಭಾಗದ ಕಾರ್ಯದರ್ಶಿಯಾಗಿ ಸೇವೆ.
ಬಿಜೆಪಿ ತುಮಕೂರು ಜಿಲ್ಲಾ ಪ್ರಧಾನಕಾರ್ಯದರ್ಶಿಯಾಗಿ ಸೇವೆ.
2008ರಲ್ಲಿ ತಿಪಟೂರು ಶಾಸಕರಾಗಿ ಮೊದಲಬಾರಿಗೆ ಆಯ್ಕೆ, 2018ರಲ್ಲಿ 25000ಕ್ಕೂ ಮತಗಳ ಅಂತರದಿಂದ 2ನೇ ಬಾರಿಗೆ ವಿಜಯಿ.
ವಿಶೇಷತೆ: ಸರಳ ಸಜ್ಜನಿಕೆಗೆ ಹೆಸರುವಾಸಿ, ಶ್ರೀ ಸಾಮಾನ್ಯನ ಜೊತೆಗೆ ಸಂವಹಿಸುವ, ಸಮಸ್ಯೆಗಳ ಪರಿಹರಿಸುವ ರೀತಿಗೆ ಜನರ ಮೆಚ್ಚುಗೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link