ತುಮಕೂರು : ಕೊರೊನಾ ಪ್ರಮಾಣ ಇಳಿಕೆ!

 ತುಮಕೂರು : 

      ನಗರದಲ್ಲಿ ಕೋವಿಡ್ ಪ್ರಮಾಣ ಇಳಿಮುಖದತ್ತ ಸಾಗಿದ್ದು, ಪಾಸಿಟಿವಿಟಿ ಪ್ರಮಾಣ ಶೇ.0.5ರಷ್ಟಿದೆ ಎಂದು ಮಹಾನಗರಪಾಲಿಕೆ ಆಯುಕ್ತೆ ರೇಣುಕಾ ತಿಳಿಸಿದ್ದಾರೆ.

      ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು 18 ವರ್ಷ ಮೇಲ್ಪಟ್ಟ 2,25, 948 ಮಂದಿಗೆ ಮೊದಲ ಡೋಜ್ ಲಸಿಕೆ ಹಾಕಿದ್ದು, 2 ಡೋಜ್ ಲಸಿಕೆ ಹಾಕಿರುವ ಪ್ರಮಾಣ 1, 95,000ದಷ್ಟಿದೆ. 3.5 ಲಕ್ಷ ನಗರದ ಜನಸಂಖ್ಯೆಗೆ ಲಸಿಕಾ ಸುರಕ್ಷೆ ಒದಗಿಸಲು ಕ್ರಮ ವಹಿಸಲಾಗುತ್ತಿದೆ. ಸೆ.5ರಿಂದ ಲಸಿಕಾ ಅಭಿಯಾನ ಚುರುಕು ಪಡೆದಿದಿದೆ ಎಂದರು.

      ಅಲೆಮಾರಿಗಳು, ವಲಸೆ ಕಾರ್ಮಿಕರಿಗೂ ಕಾರ್ಮಿಕ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಪಿಡಬ್ಲ್ಯೂಡಿ ಇಲಾಖೆಯವರ ಸಹಕಾರದೊಂದಿಗೆ ಆರೋಗ್ಯ ಕಾರ್ಯಕರ್ತರ ಮೂಲಕ ಲಸಿಕೆ ಹಾಕಲಾಗುತ್ತಿದೆ. ನಗರದಲ್ಲಿ ಯಾರೆ ನೆಲೆಸಿದ್ದರೂ ಅವರು ಲಸಿಕೆಯಿಂದ ವಂಚಿತರಾಗಬಾರದು. ಹತ್ತಿರದ ಲಸಿಕಾ ಕೇಂದ್ರಕ್ಕೆ ತೆರಳಿ ಕಡ್ಡಾಯ ಲಸಿಕೆ ಹಾಕಿಸಿಕೊಳ್ಳಬೇಕು. ನಗರಕ್ಕೆ ಪ್ರವೇಶಿಸುವ ಹೊರ ರಾಜ್ಯದವರ ಮೇಲೂ ನಿಗಾ ಇಡಲಾಗುತ್ತಿದೆ ಎಂದರು.

ತೆರವಿಗೆ 23 ಕೇಂದ್ರಗಳ ಗುರುತು:

      ತುಮಕೂರು ನಗರದಲ್ಲಿ ಅನಧಿಕೃತ ಧಾರ್ಮಿಕ ಕೇಂದ್ರಗಳ ತೆರವು ಸಂಬಂಧ ದೇವಾಲಯ,ಮಸೀದಿ, ಚರ್ಚ್ ಸೇರಿ 23 ಕ್ಷೇತ್ರಗಳನ್ನು ಸಂಬಂಧಪಟ್ಟ ಪ್ರಾಧಿಕಾರ ಗುರುತಿಸಿದ್ದು, ತೆರವಿಗೆ ಕಾಲಮಿತಿ ಹಾಕಲಾಗಿದೆ ಎಂದು ಆಯುಕ್ತರು ಮಾಹಿತಿ ನೀಡಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap