ಜ್ಯೂನಿಯರ್ ಕಾಲೇಜು ಮೈದಾನದ ವೇದಿಕೆ ಅಭಿವೃದ್ಧಿಪಡಿಸಲು ಶಾಸಕ ಸೂಚನೆ

ತುಮಕೂರು : 

      ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದ ವೇದಿಕೆಯ ಅಭಿವೃದ್ದಿಪಡಿಸುವ ಸಂಬಂಧ ಶಾಸಕ ಜಿ.ಬಿ.ಜ್ಯೋತಿಗಣೇಶ್ ಗುರುವಾರ ಸ್ಥಳ ಪರಿಶೀಲನೆ ನಡೆಸಿದರು. ಈ ವೇಳೆ ಕ್ರೀಡಾ ತರಬೇತಿದಾರರು ನುರಿತ ಕ್ರೀಡಾಪಟುಗಳು ಹಾಗೂ ಹಿರಿಯ ನಾಗರಿಕರೊಂದಿಗೆ ಸ್ಟೇಜ್ ಅಭಿವೃದ್ಧಿ ಪಡಿಸುವ ವಿಚಾರವನ್ನು ಚರ್ಚಿಸಿದರು.

      ಕಾಲೇಜು ಮೈದಾನವು 10 ಎಕರೆಯಲ್ಲಿ ವಿಶಾಲವಾಗಿದೆ, ಈ ಮೈದಾನವು ಹಲವು ಕ್ರೀಡಾ ಚಟುವಟಿಕೆಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುವುದಕ್ಕಾಗಿ ಇರುವ ವೇದಿಕೆ ಹಾಗೂ ಅದಕ್ಕೆ ಹೊಂದಿಕೊಂಡಿರುವ ಗ್ರೀನ್ ರೂಮ್‍ಗಳನ್ನು ವ್ಯವಸ್ಥಿತವಾಗಿ ಅಭಿವೃದ್ಧಿಗೊಳಿಸಿ ಮುಂದಿನ 20 ವರ್ಷಗಳಿಗೆ ಹೊಂದಿಕೊಳ್ಳುವಂತೆ ಎಲ್ಲಾ ಸುಸಜ್ಜಿತಗೊಳಿಸಬೇಕು. ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕವಾಗಿ ಗ್ರೀನ್ ರೂಮ್ ಮತ್ತು ಅತಿಥಿಗಳಿಗಾಗಿ ಗ್ರೀನ್ ರೂಮ್ ನಿರ್ಮಾಣ ಮಾಡಲು, ಮೊದಲನೇ ಮಹಡಿಯಲ್ಲಿ ಮಿನಿ ಸಭಾಂಗಣವನ್ನು ನಿರ್ಮಿಸಿ ವಿಶ್ರಾಂತಿ ಕೊಠಡಿ ಮತ್ತು ಶೌಚಾಲಯಗಳನ್ನು ನಿರ್ಮಿಸಲು ಸೂಕ್ತ ವಿನ್ಯಾಸಗಳೊಂದಿಗೆ ತುಮಕೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ಆರ್ಕಿಟೆಕ್ಟ್, ಯೋಜನೆ ಸಲಹೆಗಾರರಿಗೆ ವಿನ್ಯಾಸ ನೀಡಲು ತಿಳಿಸಿದರು.

      ಈ ಕಾರ್ಯಕ್ಕೆ ಅಗತ್ಯವಿರುವ ಅನುದಾನವನ್ನು ಒದಗಿಸುವುದಕ್ಕೆ ತುಮಕೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಸೂಚನೆ ನೀಡಿದರು. ವಿನ್ಯಾಸಗಳನ್ನು ಅಂತಿಮಗೊಳಿಸಲು ಎಲ್ಲಾ ಬಳಕೆದಾರರೊಂದಿಗೆ ಚರ್ಚಿಸಿ ಅಂತಿಮ ತೀರ್ಮಾನ ನೀಡಲು ಶಾಸಕರು ಸೂಚಿಸಿದರು.

      ಸ್ಟೇಜ್ ವಿನ್ಯಾಸವನ್ನು ಅಗತ್ಯತಕ್ಕಂತೆ ವಿಶಾಲಗೊಳಿಸಲು ಸೂಚನೆಗಳನ್ನು ನೀಡಿದರು. ಮೈದಾನದಲ್ಲಿ ತೆರೆದ ಸ್ಟೇಜ್ ಇದ್ದು, ಪ್ರತಿಬಾರಿ ಕಾರ್ಯಕ್ರಮಕ್ಕೆ ಸ್ಟೇಜ್ ಪೆಂಡಲ್ ನಿರ್ಮಿಸಬೇಕಾಗುತ್ತದೆ. ಕಾರ್ಯಕ್ರಮ ಆಯೋಜಕರಿಗೆ ಪ್ರಯೋಜನವನ್ನು ಅರಿತು ಪ್ರಸ್ತುತವಿರುವ ಹೆರಿಟೇಜ್ ಕಟ್ಟಡದ ಮಾದರಿಯಲ್ಲಿ ಮೇಲ್ಚಾವಣಿಯನ್ನು ವಿನ್ಯಾಸಗೊಳಿಸಲು ತಿಳಿಸಿದರು. ಬೆಳಗ್ಗೆ ಹಾಗೂ ಸಂಜೆ ಸಮಯದಲ್ಲಿ ವಾಯು ವಿಹಾರಕ್ಕೆ ನೆರವಾಗುವಂತೆ ಅಲ್ಲಿ ಲೈಟಿಂಗ್ ವ್ಯವಸ್ಥೆಯನ್ನು ಮಾಡಿಕೊಡಲು ಸೂಚಿಸಿದರು.

      ಈ ಸಂದರ್ಭದಲ್ಲಿ ಜಿಲ್ಲಾ ಹಾಗೂ ರಾಜ್ಯ ರೆಡ್‍ಕ್ರಾಸ್ ಸಭಾಪತಿಗಳಾದ ಎಸ್.ನಾಗಣ್ಣ, ಸ್ಮಾರ್ಟ್‍ಸಿಟಿ ಲಿಮಿಟೆಡ್‍ನ ವ್ಯವಸ್ಥಾಪಕ ನಿರ್ದೇಶಕರು ಮತ್ತು ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಾದ ಬಿ.ಟಿ.ರಂಗಸ್ವಾಮಿ, ಕಾರ್ಯಪಾಲಕ ಅಭಿಯಂತರರಾದ ಕೆ.ಬಸವರಾಜೇಗೌಡ, ಯೋಜನಾ ಸಲಹಗಾರರಾದ ಪವನ್ ಸೈನಿ, ಆರ್ಕಿಟೆಕ್ಟ್ ಜಾವಿದ್, ಕ್ರೀಡಾಪಟುಗಳಾದ ಸುನಿಲ್, ರವಿಕುಮಾರ್, ಪ್ರದೀಪ್, ಗುರು ಮುಂತಾದವರು ಹಾಜರಿದ್ದರು. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link