ತುಮಕೂರು : ಗ್ರಾಮ ಪಂಚಾಯಿತಿಯಲ್ಲಿ ನಾರಿಯರದ್ದೇ ಮೇಲುಗೈ!

 ತುಮಕೂರು :

      ಚುನಾವಣೆ ಬಹಿಷ್ಕರಿಸಿದ ಮೂರು ಪಂಚಾಯಿತಿಗಳನ್ನು ಹೊರತುಪಡಿಸಿ 327 ಗ್ರಾಮ ಪಂಚಾಯಿತಿಯ 5262 ಸ್ಥಾನಗಳಿಗೆ ಹೊಸ ಸದಸ್ಯರು ಆಯ್ಕೆಯಾಗಿದ್ದು, ಈ ಪೈಕಿ 2543ರಲ್ಲಿ ಪುರುಷರು, 2719ರಲ್ಲಿ ಮಹಿಳೆಯರು ಗೆದ್ದಿದ್ದು, ಪುರುಷರಿಗಿಂತ 176 ಸ್ಥಾನಗಳಲ್ಲಿ ಮಹಿಳೆಯರೇ ಆಯ್ಕೆಯಾಗಿರುವುದು ಗ್ರಾಮ ಪಂಚಾಯಿತಿಯಲ್ಲಿ ನಾರಿಯರೇ ಮೇಲುಗೈ ಸಾಧಿಸುವಂತಾಗಿದೆ.

    ವರ್ಗವಾರಲ್ಲೂ ಮಹಿಳಾ ಸದಸ್ಯರೇ ಹೆಚ್ಚು:

      ಜಿಲ್ಲೆಯಲ್ಲಿ ಆಯ್ಕೆಯಾದ 5262 ಸದಸ್ಯರಲ್ಲಿ ಅನುಸೂಚಿತ ಜಾತಿ 1,101 ಸದಸ್ಯರಿದÀ್ದು, ಈ ಪೈಕಿ 462 ಪುರುಷರು, 639 ಮಹಿಳೆಯರಾಗಿದ್ದಾರೆ. ಅನುಸೂಚಿತ ಪಂಗಡದಲ್ಲಿ 534 ಸದಸ್ಯರು ಆಯ್ಕೆಯಾಗಿದ್ದು, ಈ ಪೈಕಿ 147 ಪುರುಷರು, 387 ಮಹಿಳೆಯರು ಸೇರಿದ್ದಾರೆ. ಹಿಂದುಳಿದ ಅ ವರ್ಗದ 745 ಸದಸ್ಯರು ಆಯ್ಕೆಯಾಗಿದ್ದು, ಇವರಲ್ಲಿ 257 ಪುರುಷರು, 488 ಮಹಿಳೆಯರು ಸೇರಿದ್ದಾರೆ. ಹಿಂದುಳಿದ ಬಿ ವರ್ಗದಲ್ಲಿ 745 ಸದಸ್ಯರು ಆಯ್ಕೆಯಾಗಿದ್ದು, 257 ಸಾಮಾನ್ಯ, 488 ಮಹಿಳಾ ಸದಸ್ಯರಿದ್ದಾರೆ.

   ಸಾಮಾನ್ಯ ವರ್ಗದಲ್ಲಿ ಪುರುಷರಿಗೆ ಮಣೆ:

     ಸಾಮಾನ್ಯ ವರ್ಗದಲ್ಲಿ 2663 ಸದಸ್ಯರು ಆಯ್ಕೆಯಾಗಿದ್ದು, ಇವರಲ್ಲಿ ಮಹಿಳಾ ಸದಸ್ಯರು 1138 ಸ್ಥಾನಗಳಲ್ಲಿ ಆಯ್ಕೆಯಾಗಿದ್ದರೆ, ಪುರುಷ ಸದಸ್ಯರು 1545 ಸ್ಥಾನಗಳಲ್ಲಿ ಆಯ್ಕೆಯಾಗಿದ್ದು, ಪುರುಷ ಸದಸ್ಯರ ಬಲವೇ ಜಾಸ್ತಿಯಿದೆ.

   ತಾಲೂಕುವಾರು ಫಲಿತಾಂಶ:

      ತುಮಕೂರು ತಾಲ್ಲೂಕಿನ 41 ಪಂಚಾಯಿತಿಯಿಂದ ಆಯ್ಕೆಯಾಗಿರುವ 746 ಸದಸ್ಯರ ಪೈಕಿ 361 ಪುರುಷರು, 385 ಮಹಿಳೆಯರಿದ್ದರೆ, ಕುಣಿಗಲ್ ತಾಲ್ಲೂಕಿನ 36 ಪಂಚಾಯಿತಿಯಿಂದ ಆಯ್ಕೆಯಾದ 496 ಸದಸ್ಯರ ಪೈಕಿ 241ರಲ್ಲಿ ಪುರುಷರು, 255ಕಡೆ ಮಹಿಳೆಯರು ಆಯ್ಕೆಯಾಗಿದ್ದಾರೆ.ಗುಬ್ಬಿ ತಾಲ್ಲೂಕಿನ 34 ಪಂಚಾಯಿತಿಯ 590 ಸ್ಥಾನಗಳ ಪೈಕಿ 286ರಲ್ಲಿ ಮಹಿಳೆಯರು, 304ರಲ್ಲಿ ಪುರುಷರು ಗೆದ್ದಿದ್ದು, ಕೊರಟಗೆರೆ ತಾಲ್ಲೂಕಿನ 24 ಪಂಚಾಯಿತಿಗಳ 392 ಸ್ಥಾನಗಳ ಪೈಕಿ 190ರಲ್ಲಿ ಪುರುಷರು, 202ರಲ್ಲಿ ಮಹಿಳೆಯರು ಗೆಲುವು ಸಾಧಿಸಿದ್ದಾರೆ. ಪಾವಗಡ ತಾಲ್ಲೂಕಿನ 33 ಪಂಚಾಯಿತಿಯ 526 ಸ್ಥಾನಗಳ ಪೈಕಿ 273ರಲ್ಲಿ ಮಹಿಳೆಯರು, 253ರಲ್ಲಿ ಪುರುಷರು ಗೆದ್ದಿದ್ದು, ಮಧುಗಿರಿ ತಾಲ್ಲೂಕಿನ 39 ಪಂಚಾಯಿತಿಗಳ 392 ಸ್ಥಾನಗಳ ಪೈಕಿ 296ರಲ್ಲಿ ಪುರುಷರು, 319ರಲ್ಲಿ ಮಹಿಳೆಯರು ಗೆಲುವು ಸಾಧಿಸಿದ್ದಾರೆ.

      ಶಿರಾ ತಾಲ್ಲೂಕಿನ 42 ಪಂಚಾಯಿತಿಯಿಂದ ಆಯ್ಕೆಯಾಗಿರುವ 644 ಸದಸ್ಯರ ಪೈಕಿ 312 ಪುರುಷರು, 332 ಮಹಿಳೆಯರಿದ್ದರೆ, ತಿಪಟೂರು ತಾಲ್ಲೂಕಿನ 26 ಪಂಚಾಯಿತಿಯಿಂದ ಆಯ್ಕೆಯಾದ 405 ಸದಸ್ಯರ ಪೈಕಿ 194ರಲ್ಲಿ ಪುರುಷರು, 215ರಲ್ಲಿ ಮಹಿಳೆಯರು ಆಯ್ಕೆಯಾಗಿದ್ದಾರೆ. ತುರುವೇಕೆರೆ ತಾಲ್ಲೂಕಿನ 27 ಪಂಚಾಯಿತಿಯ 400 ಸ್ಥಾನಗಳ ಪೈಕಿ 205ರಲ್ಲಿ ಮಹಿಳೆಯರು, 195ರಲ್ಲಿ ಪುರುಷರು ಗೆದ್ದಿದ್ದು, ಚಿಕ್ಕನಾಯಕನಹಳ್ಳಿ ತಾಲ್ಲೂಕಿನ 27 ಪಂಚಾಯಿತಿಗಳ 3448 ಸ್ಥಾನಗಳ ಪೈಕಿ 215ರಲ್ಲಿ ಪುರುಷರು, 233ರಲ್ಲಿ ಮಹಿಳೆಯರು ಗೆಲುವು ಸಾಧಿಸಿದ್ದಾರೆ.

 
ಮಹಿಳೆ ಸದಸ್ಯರ ಹೆಸರಲ್ಲಿ ಪುರುಷರ ದರ್ಬಾರ್ ನಿಲ್ಲಲಿ:

      ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳಾ ಪ್ರಾತಿನಿಧ್ಯವನ್ನು ಶೇ.50ಕ್ಕೆ ಹೆಚ್ಚಿಸದ ಮೇಲೆ ಮಹಿಳಾ ಸದಸ್ಯರು ಪುರುಷರಿಗಿಂತ ಅಧಿಕ ಸಂಖ್ಯೆಯಲ್ಲಿ ಆಯ್ಕೆಯಾಗುತ್ತಿದ್ದಾರೆ. ಆದರೆ ವಾಸ್ತವದಲ್ಲಿ ಅದರಲ್ಲೂ ಪಂಚಾಯಿತಿ ಮಟ್ಟದಲ್ಲಿ ಮಹಿಳಾ ಸದಸ್ಯರ ಹೆಸರಲ್ಲಿ ಅವರ ಗಂಡದಿರು, ಮಕ್ಕಳೇ ಆಡಳಿತದಲ್ಲಿ ಹಸ್ತಕ್ಷೇಪ ಮಾಡುವುದೇ ಹೆಚ್ಚು. ಹೀಗಾಗಿ ಮಹಿಳಾ ಸದಸ್ಯರು ಸಾಂಕೇತಿಕ ಪ್ರತಿನಿಧಿಗಳಾದರೆ ನೈಜ ಪ್ರತಿನಿಧಿಗಳಾಗಿ ಆಡಳಿತ ನಡೆಸಬೇಕಿದೆ. ಇದಕ್ಕೂ ಪುರುಷರು ಅವಕಾಶ ಮಾಡಿಕೊಡಬೇಕಿದೆ. ರಾಷ್ಟ್ರದ ಪ್ರಧಾನಿ, ರಾಷ್ಟ್ರಪತಿ ಹುದ್ದೆಯನ್ನು ಮಹಿಳೆಯರು ಅಲಂಕರಿಸಿ ಯಶಸ್ವಿ ಆಡಳಿತ ನಡೆಸಿರುವ ಉದಾಹರಣೆಗಳಿರುವಾಗ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮಹಿಳೆಗೆ ಒಳ್ಳೆಯ ಆಡಳಿತ ನೀಡಲು ಸಾಧ್ಯವಿಲ್ಲವೆನ್ನಲಾಗುದು. ಹಾಗಾಗಿ ಪುರುಷ ಸಮಾಜ ಮಹಿಳಾ ಸದಸ್ಯರಿಗೆ ಸ್ವತಂತ್ರ ಆಡಳಿತದ ಜವಾಬ್ದಾರಿ ವಹಿಸಬೇಕಿದೆ. ಗ್ರಾಮಸಭೆ, ಪಂಚಾಯಿತಿ ಮೀಟಿಂಗ್‍ಗಳಲ್ಲೂ ಮಹಿಳೆಯರು ಪ್ರಖರ ಧ್ವನಿ ಎತ್ತಬೇಕಿದೆ.

ಜಿಲ್ಲೆಯ ಸಮಗ್ರ ಗ್ರಾಮ ಪಂಚಾಯಿತಿ ಫಲಿತಾಂಶ

ತಾಲೂಕು              ಪಂಚಾಯಿತಿ           ಅವಿರೋಧ                          ಆಯ್ಕೆಯಾದವರು
ತುಮಕೂರು               41                     13                                        733
ಕುಣಿಗಲ್                  36                      37                                        496
ಗುಬ್ಬಿ                       34                       65                                        590
ಕೊರಟಗೆರೆ                24                      25                                       367
ಪಾವಗಡ                  33                      16                                        510
ಮಧುಗಿರಿ                  39                      15                                        600
ಶಿರಾ                        42                       26                                        618
ತಿಪಟೂರು                 26                       23                                       382
ತುರುವೇಕೆರೆ               27                      31                                       369
ಚಿ.ನಾ.ಹಳ್ಳಿ                27                      21                                        427
ಒಟ್ಟು                      329                      67                                        4990

 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ