ತುಮಕೂರು : ದೂರತರಂಗ ಶಿಕ್ಷಣಕ್ಕೆ ನಾಳೆ ಶಿಕ್ಷಣ ಸಚಿವರಿಂದ ಚಾಲನೆ

ತುಮಕೂರು :

      ಕೋವಿಡ್19 ಕಾರಣಕ್ಕೆ 2020-21ನೇ ಶೈಕ್ಷಣಿಕ ವರ್ಷ ಹಲವು ಅಡೆತಡೆಗಳಿಂದ ಕೂಡಿದ್ದು, ಆನ್‍ಲೈನ್ ಶಿಕ್ಷಣ, ವಿದ್ಯಾಗಮ, ಆಫ್‍ಲೈನ್ ಹೀಗೆ ಹಲವು ಪ್ರಯೋಗಗಳನ್ನು ಶಿಕ್ಷಣ ಇಲಾಖೆ, ಶಿಕ್ಷಣ ಸಂಸ್ಥೆಗಳು ಮಾಡುತ್ತಿವೆ.

      ಈ ಹಾದಿಯಲ್ಲಿ ಮಕ್ಕಳು ಎದುರಿಸುತ್ತಿರುವ ಪರಿಣಾಮಗಳನ್ನು ಅರಿತ ಪಾವಗಡ ರಾಮಕೃಷ್ಣ ಸೇವಾಶ್ರಮದ ಸ್ವಾಮಿ ಜಪಾನಂದಜೀ ಅವರು ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾಮೂರ್ತಿ ಅವರ ಸಹಕಾರ ಪಡೆದು ಶಿಕ್ಷಣ ಇಲಾಖೆ ಸಹಕಾರದೊಂದಿಗೆ ರಾಜ್ಯದಲ್ಲಿ ಪ್ರಥಮ ಬಾರಿಗೆ ದೂರತರಂಗ ಶಿಕ್ಷಣಕ್ಕೆ ಮಧುಗಿರಿ ಶೈಕ್ಷಣಿಕ ಜಿಲ್ಲೆಯ ನಾಲ್ಕು ತಾಲೂಕುಗಳ ಅತ್ಯುತ್ತಮ ಫಲಿತಾಂಶ ನೀಡಿದ ಹಾಗೂ ಹಿಂದುಳಿದ ಶಾಲೆಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ.

      ಇನ್ಫೋಸಿಸ್ ಸಂಸ್ಥಾಪಕ ಡಾ.ನಾರಾಯಣಮೂರ್ತಿ ಅವರು ಓದಿದ ತಾಲೂಕಿನ ಸರಕಾರಿ ಜೂನಿಯರ್ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಯೋಜನೆಗೆ ಶನಿವಾರ ಬೆಳಿಗ್ಗೆ 11ಕ್ಕೆ ಶಿಕ್ಷಣ ಸಚಿವ ಸುರೇಶ್‍ಕುಮಾರ್ ಅವರು ಚಾಲನೆ ಕೊಡುತ್ತಿದ್ದು, ನಾರಾಯಣಮೂರ್ತಿ ಅವರು ವರ್ಚುಯಲ್ ಮೂಲಕ ಕಾರ್ಯಕ್ರಮಕ್ಕೆ ಪ್ರಧಾನ ಆಹ್ವಾನಿತರಾಗಿ ಪಾಲ್ಗೊಳ್ಳುತ್ತಿದ್ದಾರೆ.

       ಇನ್ಫೋಸಿಸ್ ಸಮರ್ಪಣಾ ತಂಡವು ಶೈಕ್ಷಣಿಕ ಜಿಲ್ಲೆಯ ಗ್ರಾಮಾಂತರ ಶಾಲೆಗಳಲ್ಲಿ ದೂರುತರಂಗ ಶಿಕ್ಷಣಕಲಿಕೆಗಾಗಿ ಆಯ್ದ ಶಾಲೆಗಳಳ್ಲಿ ಅತ್ಯಾಧುನಿಕ ಗಣಕ ಯಂತ್ರೋಪಕರಣಗಳ ಅಳವಡಿಕೆಯೊಂದಿಗೆ ಮಕ್ಕಳ ಶಿಕ್ಷಣದ ವ್ಯವಸ್ಥೆ ಹಾಗೂ ಪಾಠ ಪ್ರವಚನಗಳು ಅತ್ಯುತ್ತಮ ಮಟ್ಟದಲ್ಲಿ ನಡೆಯಲು ವ್ಯವಸ್ತೆ ಮಾಡಿದ್ದು, ವಿದ್ಯಾರ್ಥಿಗಳು ಒಟ್ಟಿಗೆ ಕುಳಿತು ಡಿಜಿಟಲ್ ಪರದೆಯ ಮೇಲೆ ಪಾಠ ಪ್ರವಚನಗಳಲ್ಲಿ ಭಾಗವಹಿಸಲಿದ್ದಾರೆ. ಒದಗಿಸುವ ಎಲ್ಲ ಆಧುನಿಕ ಉಪಕರಣಗಳು ಶಿಕ್ಷಣ ಇಲಾಖೆಯ ಸ್ವತ್ತಾಗುತ್ತದೆ.ಇದು ಕೇವಲ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೇ ಮೀಸಲಾಗಿರದೆ, 8 ಮತ್ತು 9ನೇ ತರಗತಿಯ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತಹ ಪಠ್ಯ ಪ್ರವಚನಗಳ ಕಾರ್ಯಕ್ರಮಗಳನ್ನು ನೀಡಲಾಗುತ್ತದೆ. ಈ ಯೋಜನೆ ಖಂಡಿತವಾಗಿ ಎಲ್ಲರ ಮನಗೆದ್ದು ಯಶಸ್ವಿಯಾಗಿ ನಾಡಿನ ಉದ್ದಗಲಕ್ಕೆ ವಿಸ್ತರಿಸಬಹುದಾಗಿದೆ. ಇದರ ಕಾರ್ಯಯೋಜನೆಯ ಹಿಂದೆ ಒಂದು ನುರಿತ ತಜ್ಞರತಂಡವೇ ಇದೆ ಎಂದು ಸ್ವಾಮಿ ಜಪಾನಂದಜೀ ತಿಳಿಸಿದ್ದಾರೆ. ಇದರೊಂದಿಗೆ ಐಟಿಐ ತರಬೇತಿ ವಿದ್ಯಾರ್ಥಿಗಳಿಗಾಗಿ ಕೌಶಲ್ಯ ನೈಪುಣ್ಯ ಯೋಜನೆ, ಗ್ರಾಮೀಣ ಬಡ ಹೆಣ್ಣು ಮಕ್ಕಳಿಗೆ ಕಂಪ್ಯೂಟರ್ ಕಲಿಕೆಗಾಗಿ ಸದ್ವಿದ್ಯಾ ಯೋಜನೆಯನ್ನು ಪಾವಗಡದಲ್ಲಿ ಅನುಷ್ಟಾನಗೊಳಿಸಲಾಗುತ್ತಿದೆ. ಈ ಎಲ್ಲಾ ಕಾರ್ಯಕ್ರಮಗಳಿಗೂ ಇನ್ಫೋಸಿಸ್ ಫೌಂಡೇಶನ್ ನೆರವಿಹ ಹಸ್ತ ಚಾಚಿದೆ.

ಯೋಜನೆಗೆ ಆಯ್ಕೆ ಮಾಡಲಾದ ಶಾಲೆಗಳ ವಿವರ:

    ಮಧುಗಿರಿ ತಾಲ್ಲೂಕು :

      ಸರ್ಕಾರಿ ಪದವಿ ಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ), ಮಧುಗಿರಿಸರ್ಕಾರಿ ಪ್ರೌಢಶಾಲೆ, ಕಡಗತ್ತೂರು ಸರ್ಕಾರಿ ಪ್ರೌಢಶಾಲೆ, ಕೊಂಡವಾಡಿ, ಸರ್ಕಾರಿ ಪ್ರೌಢಶಾಲೆ, ಐ.ಡಿ.ಹಳ್ಳಿ, ಸರ್ಕಾರಿ ಪ್ರೌಢಶಾಲೆ, ಗಿಡದಾಗಲಹಳ್ಳಿ ಸರ್ಕಾರಿ ಪ್ರೌಢಶಾಲೆ, ಚಿಕ್ಕಮಾಲೂರು.

ಪಾವಗಡ ತಾಲ್ಲೂಕು :

      ಸರ್ಕಾರಿ ಮಾದರಿ ಹಿರಿಯ ಬಾಲಕರ ಪಾಠಶಾಲೆ, ಪಾವಗಡ, ಸರ್ಕಾರಿ ಪ್ರೌಢಶಾಲೆ, ಮರಿದಾಸನಹಳ್ಳಿ, ಸರ್ಕಾರಿ ಪ್ರೌಢಶಾಲೆ, ಗೌಡೇಟಿ, ಸರ್ಕಾರಿ ಪ್ರೌಢಶಾಲೆ, ನಾಗಲಮಡಿಕೆ, ಸರ್ಕಾರಿ ಪ್ರೌಢಶಾಲೆ, ವಳ್ಳೂರು.

   ಕೊರಟಗೆರೆ ತಾಲ್ಲೂಕು :

      ಸರ್ಕಾರಿ ಪ್ರೌಢಶಾಲೆ, ಅರಸಾಪುರ, ಸರ್ಕಾರಿ ಪ್ರೌಢಶಾಲೆ, ಎಲೆರಾಂಪುರ ಸರ್ಕಾರಿ ಪ್ರೌಢಶಾಲೆ, ಯಲಚಿಗೆರೆ, ಸರ್ಕಾರಿ ಪ್ರೌಢಶಾಲೆ, ಗೊಡ್ರಹಳ್ಳಿ, ಸರ್ಕಾರಿ ಪದವಿಪೂರ್ವ ಕಾಲೇಜು (ಪ್ರೌಢಶಾಲೆ ವಿಭಾಗ), ಬಿ.ಡಿ.ಪುರ.

ಶಿರಾ ತಾಲ್ಲೂಕು :

  ಸರ್ಕಾರಿ ಪ್ರೌಢಶಾಲೆ, ಬರಗೂರು, ಸರ್ಕಾರಿ ಪ್ರೌಢಶಾಲೆ, ಲಕ್ಕನಹಳ್ಳಿ, ಸರ್ಕಾರಿ ಪ್ರೌಢಶಾಲೆ, ಹೊನ್ನಗೊಂಡನಹಳ್ಳಿ, ಸರ್ಕಾರಿ ಪ್ರೌಢಶಾಲೆ, ಚಂಗಾವರ, ಸರ್ಕಾರಿ ಪ್ರೌಢಶಾಲೆ, ಬುಕ್ಕಾಪಟ್ಟಣ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap