ತುಮಕೂರು :
ಮನೆ ಕಳವು ಮಾಡುತ್ತಿದ್ದ ಅಂತರ್‍ರಾಜ್ಯ ಆರೋಪಿಯನ್ನು ಸೆರೆಹಿಡಿದಿರುವ ಕೋಳಾಲ ಪೊಲೀಸರು, ದಶಕದಷ್ಟು ಹಳೆಯ ಕಳ್ಳತನ ಪ್ರಕರಣವನ್ನು ಬಯಲಿಗೆಳಿದಿದ್ದಾರೆ.
ಸೆರೆಸಿಕ್ಕ ಆರೋಪಿಯನ್ನು ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಚಿಕ್ಕಬ್ಬೀಕೆರೆ ಗ್ರಾಮದ ಧರ್ಮರಾಜ್ (46)ಎಂದು ಗುರುತಿಸಲಾಗಿದ್ದು, ಈತ ರಾಜ್ಯದ ವಿವಿಧೆಡೆಯೆಲ್ಲದೆ ಆಂಧ್ರ, ಚಿತ್ತೂರಿನ ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದ. ತುಮಕೂರು ಜಿಲ್ಲೆಯ ಕೊರಟಗೆರೆಯ ನೇಗಲಾಲ ಗ್ರಾಮದ ನಾಗರಾಜು ಎಂಬುವರೆ ಮನೆಯ ಬೀಗ ಹೊಡೆದು 2011 ಆ.2ರಂದು 2.50 ಲಕ್ಷ ರೂ.ಮೌಲ್ಯದ ಚಿನ್ನಾಭರಣ ಬೀರುವಿನಲ್ಲಿದ್ದ 89 ಸಾವಿರ ನಗದು ಕಸಿದು ಪರಾರಿಯಾಗಿದ್ದ. ಈತನಿಗೆ ಬಲೆ ಬೀಸಿದ್ದ ಪೊಲೀಸರಿಗೆ ದಶಕ ಸಮೀಪಿಸಿದರೂ ಸಿಗದೆ ತಲೆಮರೆಸಿಕೊಂಡು ಕಳ್ಳತನ ಕೃತ್ಯವೆಸಗುತ್ತಿದ್ದ.
ಸದ್ಯ ಆರೋಪಿ ಸೆರೆ ಸಿಕ್ಕಿದ್ದು, ಬಂಧಿತನಂದ 1.80 ಲಕ್ಷ ಮೌಲ್ಯದ ಚಿನ್ನದ ಮಾಂಗ್ಯಲ ಸರ ವಶಕ್ಕೆ ಪಡೆಯಲಾಗಿದೆ. ಆರೋಪಿಯನ್ನು ಎಸ್ಪಿ ಹಾಗೂ ಎಎಎಸ್ಪಿ ಅವರ ಮಾರ್ಗದರ್ಶನದಲ್ಲಿ ಮಧುಗಿರಿ ಡಿವೈಎಸ್ಪಿ ಪ್ರವೀಣ್, ಸಿಪಿಐ ಎಫ್.ಕೆ.ನದಾಫ್ ನೇತೃತ್ವದಲ್ಲಿ ಕೋಳಾಲ ಠಾಣೆ ಪಿಎಸ್ಸೈ ನವೀನ್‍ಕುಮಾರ್ ಹಾಗೂ ಸಿಬ್ಬಂದಿಗಳಾದ ಮೋಹನ್‍ಕುಮಾರ್, ಪುಟ್ಟಸ್ವಾಮಿ, ಮಂಜುನಾಥ್ ಗಂಗಾಧರ್ ಅವರುಗಳು ಬಂಧಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ