ತುಮಕೂರು :
ನಗರದ ಕೋತಿತೋಪಿನ ಮನೆಯೊಂದರಲ್ಲಿ ಸಂಗ್ರಹವಾಗಿದ್ದ ಪಟಾಕಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಮನೆಯಲ್ಲಿದ್ದ ದಿನಬಳಕೆ ಪದಾರ್ಥಗಳು ಸುಟ್ಟು ಹೋದವು. ಅಗ್ನಿಶಾಮಕ ದಳ ಸಿಬ್ಬಂದಿ ಸಕಾಲಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದರಿಂದ ಹೆಚ್ಚಿನ ಅನಾಹುತ ತಪ್ಪಿತು.
ಶುಕ್ರವಾರ ಮಧ್ಯಾಹ್ನ 3 ಗಂಟೆ ಸುಮಾರಿನಲ್ಲಿ ತಿಮ್ಮರಾಜು ಎಂಬುವವರ ಮನೆಯಲ್ಲಿ ಈ ಅವಘಡ ಸಂಭವಿಸಿತು. ಮನೆಯಲ್ಲಿ ಅನಧಿಕೃತವಾಗಿ ಲಕ್ಷಾಂತರ ರೂ. ಮೌಲ್ಯದ ಪಟಾಕಿ ಸಂಗ್ರಹ ಮಾಡಿದ್ದರು. ಬೆಂಕಿ ಅನಾಹುತದಲ್ಲಿ ಯಾವುದೇ ಪ್ರಾಣ ಹಾನಿಯಾಗಿಲ್ಲ. ಮನೆ ಒಳ ಭಾಗ, ಒಳಗಿದ್ದ ಬಟ್ಟೆಬರೆ, ಹಾಸಿಗೆ ಮತ್ತಿತರ ಮನೆಬಳಕೆ ವಸ್ತುಗಳು ಸುಟ್ಟು ಹೋಗಿವೆ ಎಂದು ಅಗ್ನಶಾಮಕ ದಳ ಅಧಿಕಾರಿ ಮಹಾಲಿಂಗಯ್ಯ ಹೇಳಿದರು.
ಹೊಸಬಡಾವಣೆ ಠಾಣೆ ಪೊಲೀಸರೂ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ, ಮುಂದಿನ ಕ್ರಮ ಕೈಗೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ