ತುಮಕೂರು ಸಿದ್ಧಾರ್ಥ ಹಾರ್ಟ್ ಸೆಂಟರ್‍ನಲ್ಲಿ ತೆರೆದ ಹೃದಯ ಶಸ್ತ್ರಚಿಕಿತ್ಸೆ ಯಶಸ್ವಿ

 ತುಮಕೂರು :

      ನಗರ ಹೊರವಲಯದ ಹೆಗ್ಗೆರೆಯ ಸಿದ್ಧಾರ್ಥ ವೈದ್ಯಕೀಯ ಕಾಲೇಜಿನಲ್ಲಿ ಸ್ಥಾಪಿಸಿರುವ ಸಿದ್ಧಾರ್ಥ ಅಡ್ವಾನ್ಸಡ್ ಹಾರ್ಟ್ ಸೆಂಟರ್‍ನಲ್ಲಿ ತುಮಕೂರು-ಹಾಸನ-ಶಿವಮೊಗ್ಗ-ಚಿತ್ರದುರ್ಗ ಭಾಗದಲ್ಲೇ ಪ್ರಥಮ ದಾಖಲೆಯೆನಿಸಿದ ಯಶಸ್ವಿ ಶಸ್ತ್ರ ಚಿಕಿತ್ಸೆಯನ್ನು ನೆರವೇರಿಸಿದ್ದು, ಮೊದಲ ಶಸ್ತ್ರಚಿಕಿತ್ಸೆಗೊಳಗಾದ ತುಮಕೂರು ತಾಲೂಕಿನ ಮರಳೇನಹಳ್ಳಿ ರೈತ ರಂಗಸ್ವಾಮಿ (60) ಅವರಿಗೆ ಸಂಸ್ಥೆಯೇ ವೆಚ್ಚ ಭರಿಸಿ ಅವರನ್ನು ಹೃದ್ರೋಗ ತೊಂದರೆಯಿಂದ ಗುಣಪಡಿಸಿದೆ ಎಂದು ಸಾಹೆ ಕುಲಾಧಿಪತಿ ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ ತಿಳಿಸಿದರು.

      ಕಾಲೇಜಿನ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೆದ 33 ವರ್ಷಗಳಿಂದ ಸಿದ್ಧಾರ್ಥ ವೈದ್ಯಕೀಯ ಕಾಲೇಜು ಆಸ್ಪತ್ರೆ ಆರೋಗ್ಯ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸುತ್ತಾ ಜನಸಾಮಾನ್ಯರಿಗೆ ಅತ್ಯಂತ ಕಡಿಮೆ ದರದಲ್ಲಿ ಶುಶ್ರೂಷೆ ಮಾಡುತ್ತಾ ಬಂದಿದ್ದು, ಸಂಸ್ಥೆಯ ಸಂಸ್ಥಾಪಕ ಡಾ.ಎಚ್.ಎಂ.ಗಂಗಾಧರಯ್ಯ ಹಾಗೂ ಡಾ.ಜಿ.ಶಿವಪ್ರಸಾದ್ ಅವರ ಆಶಯದಂತೆ ವೈದ್ಯಕೀಯ ಕಾಲೇಜಿನಲ್ಲಿ ಸುಧಾರಿತ ಹೃದ್ರೋಗ ಕೇಂದ್ರ ಸ್ಥಾಪಿಸಿದ್ದು, ಬೆಂಗಳೂರಿನ ಕಾರ್ಡಿಯಾಕ್ ಫ್ರಾಂಟಿಡಾ ಸಂಸ್ಥೆಯ ನಿರ್ದೇಶಕ ಡಾ.ತಮೀಮ್ ಅಹಮದ್ ನೇತೃತ್ವದ ತಂಡ ದಿನದ 24 ತಾಸು ಹೃದ್ರೋಗಿಗಳ ಸೇವೆಗೆ ಸಜ್ಜಾಗಿ ನಿಂತಿದೆ.

     ರಾಜಧಾನಿಗಿಂತಲೂ ಅತ್ಯಂತ ಕಡಿಮೆ ದರದಲ್ಲಿ ಉತ್ಕøಷ್ಟ ಗುಣಮಟ್ಟದ ಚಿಕಿತ್ಸಾ ಸೇವೆ ಒದಗಿಸಲಿದ್ದು, ಮುಂದಿನ ದಿನಗಳಲ್ಲಿ ಗ್ರಾಮೀಣ ಭಾಗದಲ್ಲಿ ತಪಾಸಣಾ ಶಿಬಿರಗಳು ಹಾಗೂ ಹೊರಾಂಗಣ ಚಿಕಿತ್ಸಾ ಘಟಕಗಳನ್ನು ತೆರೆಯಲಾಗುವುದು. ತುಮಕೂರು ಸುತ್ತಮುತ್ತಲ ಜಿಲ್ಲೆಯ ನಾಗರಿಕರು ಹೃದ್ರೋಗ ಸಮಸ್ಯೆ ಕಂಡ ಕೂಡಲೇ ರಾಜಧಾನಿ ಮೊರೆಹೋಗದೆ ಹತ್ತಿರದಲ್ಲಿರುವ ಸಂಸ್ಥೆಯ ಸೇವೆಯನ್ನು ಬಳಸಿಕೊಳ್ಳುವಂತೆ ಕೋರಿದರು.

      ಸರಕಾರದಿಂದ ಬಾಕಿಯಿದ್ದರೂ ಉಚಿತ ಸೇವೆ: ಗ್ರಾಮಾಂತರ ಪ್ರದೇಶದ ಬಡವರ್ಗವನ್ನು ಪರಿಗಣಿಸಿ ಸರ್ಕಾರದಆರೋಗ್ಯ ಸೇವೆಗಳನ್ನು ಆಸ್ಪತ್ರೆಯಲ್ಲಿ ನೀಡುತ್ತಿದ್ದು, .ಬಿ.ಪಿ.ಎಲ್, ಆಯುಷ್ಮನ್‍ಕಾರ್ಡ್ ಹೊಂದಿರುವ ಸಾವಿರಾರು ರೋಗಿಗಳಿಗೆ ಉಚಿತವಾಗಿ ಸೇವೆ ನೀಡುತ್ತಿದ್ದು, ಈ ಸೇವೆ ನೀಡಿದ ಶುಲ್ಕವೇ ಸರಕಾರದ 5 ಕೋಟಿ ಬಾಕಿ ಬರಬೇಕಿದೆ. ನೋಂದಾಯಿತ ಇಎಸ್‍ಐ ಕಾರ್ಮಿಕರು ಹಾಗೂ ಆರೋಗ್ಯ ವಿಮೆ ಹೊಂದಿರುವವರಿಗೂ ಸೇವೆಗೆ ಸರಕಾರದ ಅನುಮತಿ ದೊರೆತಿದ್ದು, ಆತ್ಯಾಧುನಿಕ ಯಂತ್ರೋಪಕರಣಗಳುಳ್ಳ ‘ಸಿದ್ಧಾರ್ಥ ಅಡ್ವಾನ್ಸ್ಡ್ ಹಾರ್ಟ್‍ಸೆಂಟರ್’ ನಿರ್ಮಾಣಕ್ಕೆ 16 ಕೋಟಿ ವೆಚ್ಚವಾಗಿದೆ ಎಂದರು.

ದೇಶದ ಪ್ರಪ್ರಥಮ ಹಾರ್ಟ್ ಕೀಮೋ ಪ್ರೊಸೆಸ್ ವಿಧಾನದಲ್ಲಿ ಚಿಕಿತ್ಸೆ :

      ತೆರೆದ ಶಸ್ತ್ರಚಿಕಿತ್ಸೆ, ಹಾರ್ಟ್ ಸೆಂಟರ್ ಸೌಲಭ್ಯಗಳ ಬಗ್ಗೆ ವಿವರಿಸಿದ ಸೆಂಟರ್‍ನ ಮುಖ್ಯಸ್ಥ ಖ್ಯಾತ ಹೃದ್ರೋಗ ತಜ್ಞ ಡಾ.ತಮೀಮ್‍ಅಹಮದ್ ಅವರು ತುಮಕೂರು ತಾಲ್ಲೂಕಿನ ಮರಳೇನಹಳ್ಳಿ ಗ್ರಾಮದ ಕೃಷಿಕರಾದ ರಂಗಸ್ವಾಮಿಗೆ ಮೂವರು ಮಕ್ಕಳು. ಒರ್ವ ಮಗ ಸಾವನ್ನಪ್ಪಿದ್ದು, ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಬಡ ರೈತಾಪಿ ಕುಟುಂಬದ ರಂಗಸ್ವಾಮಿ ಎದೆನೋವಿನಿಂದಇದೇ ತಿಂಗಳ 14ರಂದು ಆಸ್ಪತ್ರೆಗೆದಾಖಲಾಗುತ್ತಾರೆ.ಆರಂಭದಲ್ಲಿ ರೋಗಿಯತಪಾಸಣೆ, ಇಸಿಜಿ ನಡೆಸಿದಾಗ ಲಘು ಹೃದಯಾಘಾತವಾಗಿರುವುದು ಖಚಿತವಾಯಿತು. ಮೂರು ಮುಖ್ಯ ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟುವಿಕೆಯಿಂದ ಉಂಟಾದ ತೊಂದರೆಯನ್ನು ಸರಿಪಡಿಸಲುರೋಗಿಯ ಅಪೇಕ್ಷೆಯಂತೆಇದೇ ತಿಂಗಳ 16ರಂದು ಹಾರ್ಟ್ ಕೀಮೋ ಪ್ರೊಸೆಸ್ ಮೂಲಕ ತೆರೆದಹೃದಯ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಲಾಯಿತು. ಇದೀಗ ರೋಗಿಯು ಸಂಪೂರ್ಣಆರೋಗ್ಯದಿಂದಿದ್ದು ವಾರ್ಡ್‍ನಲ್ಲಿಚಿಕಿತ್ಸೆ ಮುಂದುವರೆಸಲಾಗಿದೆ. ಹಾರ್ಟ್ ಕೀಮೋ ಪ್ರೊಸೆಸ್ ಮೂಲಕ ಓಪನ್ ಹಾರ್ಟ್ ಸರ್ಜರಿ ನಡೆಸಿರುವುದು ಭಾರತದಲ್ಲೇ ಪ್ರಪ್ರಥಮ ಎಂದು ವಿವರಿಸಿ, ಇಂತಹ ಸುಸಜ್ಜಿತ ಕೇಂದ್ರ ಸ್ಥಾಪನೆಯ ಹಿಂದೆ ಡಾ.ಜಿ.ಪರಮೇಶ್ವರ ಹಾಗೂ ಸಿದ್ಧಾರ್ಥ ಸಂಸ್ಥೆಯ ಗ್ರಾಮೀಣ ಜನರ ಕಳಕಳಿ ಕಾರಣ ಎಂದರು.

 ಪರಿಣಿತ ವೈದ್ಯರತಂಡ:

      ‘ಸಿದ್ಧಾರ್ಥ ಅಡ್ವಾನ್ಸ್ಡ್ ಹಾರ್ಟ್‍ಸೆಂಟರ್’ನಲ್ಲಿ ತಮ್ಮನ್ನು ಸೇರಿದಂತೆ ಡಾ.ನವೀನ್, ಡಾ.ಸುರೇಶ್, ಡಾ.ಒರಿಟಕಾಮತ್, ಡಾ. ನಾಗಾರ್ಜುನ, ಡಾ.ಪ್ರತಿಮಾ,ವಿವೇಕ್, ಜಾನ್ ಅವರನ್ನೊಳಗೊಂಡ ಪರಿಣಿತ ತಂಡವಿದೆ. ಹೃದಯ ರೋಗಿಗಳಿಗೆ ಔಷಧಿಗಳ ಮೂಲಕ ಗುಣಪಡಿಸುವುದಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದೆ. ವಿದೇಶಿ ಗುಣಮಟ್ಟದ ಆಧುನಿಕ ಸಲಕರಣೆಗಳನ್ನು ಅಳವಡಿಕೆಯಿಂದಾಗಿ ಸಕಾಲದಲ್ಲಿ ತಪಾಸಣೆ ಮತ್ತು ಚಿಕಿತ್ಸೆ ಸೌಲಭ್ಯ ನೀಡುವುದಕ್ಕೆ ಅವಕಾಶವಿದೆ. ಬೆಂಗಳೂರಿನಿಂದ-ಶಿವಮೊಗ್ಗ, ತುಮಕೂರಿನಿಂದ-ಮೈಸೂರು, ತುಮಕೂರಿನಿಂದ ದಾವಣಗೆರೆ, ಬಳ್ಳಾರಿ ಮಾರ್ಗ ಮಧ್ಯೆ ಕೇಂದ್ರಿಕೃತ ಸ್ಥಳವಾಗಿದ್ದು ಸಕಾಲದಲ್ಲಿ ಈ ಭಾಗದ ಜನಕ್ಕೆ ಹೃದಯಕ್ಕೆ ಸಂಬಂಧಿಸಿದಂತೆ ಚಿಕಿತ್ಸೆಗಳು ಕೈಗೆಟುಕುವ ಬೆಲೆಯಲ್ಲಿ ಲಭ್ಯವಿದೆ ಎಂದು ಡಾ.ತಮಿಮ್‍ ಅಹಮದ್ ವಿವರಿಸಿದರು.

      ಸಿದ್ಧಾರ್ಥ ಆಸ್ಪತ್ರೆ ಮತ್ತುಕಾಲೇಜಿನ ಸಿಇಒ ಡಾ.ದೇವದಾಸ್, ಪ್ರಾಂಶುಪಾಲರಾದ ಡಾ.ಶ್ರೀನಿವಾಸಮೂರ್ತಿ, ಅಡ್ವಾನ್ಸ್ಡ್ ಹಾರ್ಟ್ ಸೆಂಟರ್‍ನ ಸಿಇಒ ವೈದ್ಯಾಧಿಕಾರಿಡಾ. ಪ್ರಭಾಕರ್ ಹಾಗೂ ವೈದ್ಯರತಂಡ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap