ತುಮಕೂರು :
ನಗರದ ನಾಗರಿಕರು, ನಿವೇಶನಗಳ ಮಾಲೀಕರು ತಮ್ಮ ಖಾಲಿನಿವೇಶನಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಫೆನ್ಸಿಂಗ್ ಹಾಕದೆ ಹಾಗೆಯೇ ಯಾರಾದರೂ ಕಸ ಸುರಿಯುವಂತಾದರೆ ಅವರಿಗೆ ನೋಟಿಸ್ ನೀಡಿ 5ಸಾವಿರ ದಂಡ ವಿಧಿಸಲಾಗುವುದು. ಆಗಲೂ ಎಚ್ಚೆತ್ತುಕೊಳ್ಳದಿದ್ದರೆ ಅಂತಹ ನಿವೇಶನಗಳನ್ನು ಪಾಲಿಕೆಯ ಸುಪರ್ದಿಗೆ ಪಡೆಯಬೇಕಾಗುತ್ತದೆ ಎಂದು ಮಹಾನಗರಪಾಲಿಕೆ ಮೇಯರ್ ಫರೀದಾಬೇಗಂ ಎಚ್ಚರಿಸಿದರು.
13ನೇ ವಾರ್ಡ್ ನಗರದಕುರಿಪಾಳ್ಯದಲ್ಲಿ ಪಾಲಿಕೆ ಅಧಿಕಾರಿಗಳೊಂದಿಗೆ ಗುರುವಾರ ಪರಿಶೀಲನೆ ನಡೆಸಿ ಮಾತನಾಡಿದ ಅವರು ತಾವೂ ಪ್ರತಿನಿಧಿಸುವ ಈ ವಾರ್ಡ್‍ನಲ್ಲಿ ಡಿಲಿಮಿಟಿಷೆನ್‍ನಿಂದಾಗಿ ಉಂಟಾದ ಜಾಗದ ಸಮಸ್ಯೆಯಿಂದಾಗಿ ರಸ್ತೆ ಅಭಿವೃದ್ಧಿ, ಯುಜಿಡಿ ಸಂಪರ್ಕ ವಿಳಂಬವಾಗಿತ್ತು. ಅಧಿಕಾರಿಗಳನ್ನು ಕರೆಸಿ ಸರ್ವೆ ಮಾಡಲು ಸೂಚಿಸಿ ಸಮಸ್ಯೆ ಇತ್ಯರ್ಥಕ್ಕೆ ಸೂಚಿಸಿದ್ದು, ಇನ್ನೂ 15 ದಿನಗಳಲ್ಲಿ ಕೆಲಸ ಶುರುವಾಗಲಿದೆ. ಧಾನ ನಗರವನ್ನು ಮಾದರಿ ನಗರವನ್ನಾಗಿ ಅಭಿವೃದ್ಧಿ ಪಡಿಸುವ ಗುರಿ ಹೊಂದಿರುವಾಗಿ ತಿಳಿಸಿದರು.
ಒಂದು ಬದಿ ಮಾತ್ರ ವ್ಯಾಪಾರ, ಪ್ರತ್ಯೇಕ ಪಾರ್ಕಿಂಗ್; ಬುಧವಾರ ಸಂಜೆಯೂ ಸಹ ಶೆಟ್ಟಿಹಳ್ಳಿ ಮುಖ್ಯರಸ್ತೆಯಲ್ಲಿ ಪಾದಚಾರಿ ರಸ್ತೆಯಲ್ಲಿಟ್ಟು ಮಾರುತ್ತಿರುವ ತರಕಾರಿ ವ್ಯಾಪಾರದಿಂದಾಗಿ ರಸ್ತೆಯಲ್ಲಿ ಉಂಟಾಗುತ್ತಿರುವ ಟ್ರಾಫಿಕ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ರಸ್ತೆಯ ಎಡಬದಿಯಲ್ಲಿ ಮಾತ್ರ ತರಕಾರಿ ಮಾರಲು ಅವಕಾಶ ಮಾಡಿಕೊಟ್ಟು ಪಾರ್ಕಿಂಗ್‍ಗೆ ಪ್ರತ್ಯೆಕ ಸ್ಥಳ ನಿಗದಿ ಮಾಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ನಲ್ಮ್ ಯೋಜನೆಯಡಿ ಪಡೆದುಕೊಂಡಿರುವ ಸಾಲವನ್ನು ಸಕಾಲಕ್ಕೆ ಮರುಪಾವತಿ ಮಾಡುವಂತೆ ಸೂಚಿಸಲಾಗಿದೆ ಎಂದರು.
ಕಾರ್ಯಪಾಲಕ ಅಭಿಯಂತರ ಡಿಎಲ್ ಸುರೇಶ್, ಎಇಇ ಮಧುಸೂಧನ್ ಆರೋಗ್ಯಾಧಿಕಾರಿ ಡಾ.ರಕ್ಷಿತ್ ಕುಮಾರ್ ಪರಿಸರ ಅಭಿಯಂತರ ನಿಖಿತಾ, ಕಿರಿಯ ಅಭಿಯಂತರ ಮನಿಷಾ, ಇತರರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ