ಮಿಡಿಗೇಶಿ :
ಮಧುಗಿರಿ ತಾಲ್ಲೂಕಿನ ಮಿಡಿಗೇಶಿ ಹೋಬಳಿಯ ರೆಡ್ಡಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆರ್.ಗೊಲ್ಲಹಳ್ಳಿ ಗ್ರಾಮಕ್ಕೆ ಹಾದು ಹೋಗುವ ರಸ್ತೆಯಲ್ಲಿ ಟ್ರ್ಯಾಕ್ಟರ್ (ಎ.ಪಿ.02 ವೈ7145) ಪಲ್ಟಿಯಾಗಿ ಸ್ಥಳದಲ್ಲೆ ಚಾಲಕ ಸಾವಿಗೀಡಾಗಿದ್ದಾರೆ.
ಆಂಧ್ರ ರಾಜ್ಯ ಹಿಂದೂಪುರದ ವ್ಯಕ್ತಿಯೋರ್ವರಿಗೆ ಸೇರಿದ ಟ್ರ್ಯಾಕ್ಟರ್ನ್ನು ಓಡಿಸಿಕೊಂಡು, ಗಂಗಾವರಂ ಗ್ರಾಮದ ಚಾಲಕ ಗೋಪಿ (28) ಎಂಬಾತ, ರೊಳ್ಳ ಗ್ರಾಮದಿಂದ ಸೌದೆಯನ್ನು ತರಲು ಹೋಗುತ್ತಿದ್ದರು. ಆಗ ರಾಘವೇಂದ್ರ ಎಂಬುವರ ಜಮೀನಿನ ಕ್ರಾಸ್ ಬಳಿ ಚಾಲಕನ ನಿಯಂತ್ರಣ ತಪ್ಪಿ, ಟ್ರ್ಯಾಕ್ಟರ್ ಪಲ್ಟಿಯಾಗಿದೆ. ಆಗ ಟ್ರ್ಯಾಕ್ಟರ್ನ ದೊಡ್ಡ ಟೈರ್ ಕೆಳಗೆ ಚಾಲಕ ಸಿಲುಕಿಕೊಂಡು ಸ್ಥಳದಲ್ಲೇ ಮರಣ ಹೊಂದಿರುವ ಬಗ್ಗೆ ವರದಿಯಾಗಿರುತ್ತದೆ. ಅಪಘಾತ ನಡೆದ ಸ್ಥಳಕ್ಕೆ ಮಿಡಿಗೇಶಿ ಪಿಎಸ್ಐ ನವೀನ್ಕುಮಾರ್ ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2020/06/Death-acc.jpg)